ಮರಳುಸಿದ್ದೇಶ್ವರ ಮತ್ತು ಅಕ್ಕಮಹಾದೇವಿ / ಡಾ. ಸುಜಾತಾ ಅಕ್ಕಿ, ಮೈಸೂರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಯುಗ ವಿಶ್ವಕ್ಕೆ ಮಾದರಿ. ಕನ್ನಡದ ಸಾಂಸ್ಕೃತಿಕ ಚರಿತ್ರೆಯು ಎಷ್ಟೋ ಲಿಪಿ ಮತ್ತು ಲಿಪಿರಹಿತ ಭಾಷೆಗಳ ಪ್ರಭಾವವನ್ನು ಮೀರಿದುದಾಗಿದೆ. ಶೈವ ಮತ್ತು ವೈಷ್ಣವ ಪರಂಪರೆಗಳು ಬೆಳೆಯುತ್ತ ಬಂದಂತೆಲ್ಲಾ ಸ್ಥಾವರವನ್ನು ಪಡೆದು ಶಿಲ್ಪ ಕಲೆ ಸಂಗೀತ ಸಾಹಿತ್ಯದಂತಹ ಏಳು ಲಲಿತ ಕಲೆ ಮತ್ತು ನವರಸಗಳನ್ನು ಮೇಳೈಸಿಕೊಂಡು ಪರಂಪರೆಯಲ್ಲಿ ಸಾಕಾರಗೊಂಡವು. ಬೀದಿಯ ಕೂಸಾಗಿ ಬೆಳೆದ ಕನ್ನಡ ಇಂದು ವಿಶ್ವ ಸಾಹಿತ್ಯದಲ್ಲಿ ಗುರುತಿಸಲ್ಪಟ್ಟು ಇಂಗ್ಲೆಂಡ್ ನಲ್ಲಿ ನಗರದ ಲ್ಯಾಂಬೆತ್ ನದಿಯ ದಂಡೆಯಲ್ಲಿ ವಿಶ್ವ ಪ್ರಥಮ ಸಂಸತ್ತಿನ ರೂವಾರಿಯಾಗಿ ಮೂರ್ತ ಸ್ವರೂಪದಲ್ಲಿ ವಿರಾಜಿಸುತ್ತಿದ್ದಾನೆ. ಕನ್ನಡದ ಹೆಮ್ಮೆಯ ಕನ್ನಡಿಗ. ಇಂದು ವಿಜಯಪುರದ…