ಕುಂಬಳಕಾಯಿ ಕಳ್ಳರಿದ್ದರೆ, ಹೆಗಲು ಮುಟ್ಟಿ ನೋಡಿಕೊಳ್ಳಲೂಬಹುದು/ಲೇಖಕರು:ಡಾ.ಬಸವರಾಜ ಸಾದರ, ಬೆಂಗಳೂರು.
ವಚನಗಳು ಏಕಕಾಲಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡರ ಒಳಗಿರುವ ಕೊಳೆಗಳನ್ನು ಎತ್ತಿ ತೋರಿಸಿ, ಆ ಕೊಳೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಅನನ್ಯ ಮಾರ್ಗ ಸೂಚಿಸುವುದು ಒಂದು ವಿನೂತನ ಅಭಿವ್ಯಕ್ತಿ ಕ್ರಮ. ಒಂದೇ ನೋಟದಲ್ಲಿ ಎರಡು ದೃಶ್ಯಗಳನ್ನು ಕಾಣಿಸುವ ಈ ಕ್ರಮದಲ್ಲಿ ಎದ್ದು ಕಾಣುವುದು ಶರಣರ ಪ್ರತಿಭೆ ಮತ್ತು ಅವರ ಪ್ರಗತಿಪರ ಸಮಾಜಮುಖಿ ಚಿಂತನೆ. ಈ ಪರಿಪೇಕ್ಷದಲ್ಲಿ ಗಮನಿಸುವಾಗ ಬಹಳಷ್ಟು ವಚನಗಳು ಒಳಗೆ ಮತ್ತು ಹೊರಗೆ ಧ್ವನಿಸುವ ಎರಡೂ ಅರ್ಥಗಳಲ್ಲಿ ಒಂದು ಅನನ್ಯವಾದ ಆಂತರಿಕ ಸಂಬಂಧವಿರುವುದು ಸೂಕ್ಷ್ಮ ನೋಟಕ್ಕೆ ತಿಳಿಯುತ್ತದೆ. ಯಾರು ಯಾವ ಕಣ್ಣಿನಿಂದ ನೋಡುತ್ತಾರೋ, ಆ ಬಗೆಯಲ್ಲಿ ಅವು ತಮ್ಮ…





Total views : 62575