ಕಡಕೋಳ ಮಡಿವಾಳಪ್ಪ ಮತ್ತು ಇತರೆ ಸಾಹಿತ್ಯ ಪಥಗಳು / ಶ್ರೀ. ಮಲ್ಲಿಕಾರ್ಜುನ ಕಡಕೋಳ, ದಾವಣಗೆರೆ.
ಮಾಡಿ ಉಣ್ಣೋ ಬೇಕಾದಷ್ಟು/ಬೇಡಿ ಉಣ್ಣೋ ನೀಡಿದಷ್ಟುಮಾಡಿದವಗ ಮಡಿಗಡಬ/ಮಾಡದವಗ ಬರೀಲಡಬ// ಇವು ಕಡಕೋಳ ಮಡಿವಾಳಪ್ಪನವರ ತತ್ವಪದವೊಂದರ ಆಯ್ದ ಸಾಲುಗಳು. ಈ ಇಡೀ ತತ್ವಪದ ಬಸವಣ್ಣನ ಕಾಯಕ ಮತ್ತು ದಾಸೋಹ ಸಂಕಲ್ಪ ಪ್ರಜ್ಞೆಗಳನ್ನು ಏಕಕಾಲಕ್ಕೆ ಸಂವೇದಿಸುತ್ತದೆ. ಅದರೊಂದಿಗೆ ಉಲ್ಲೇಖಿಸಲೇ ಬೇಕಿರುವ ಮತ್ತೊಂದು ಎಚ್ಚರವೆಂದರೆ ದುಡಿಯುವ ಮತ್ತು ದುಡಿದುದಕ್ಕೆ ಹಕ್ಕಿನಿಂದ ಪಡೆದುಣ್ಣುವ ಕಾರ್ಲ್ ಮಾರ್ಕ್ಸ್ ಶ್ರಮಸಂಸ್ಕೃತಿಯ ವಿಚಾರ ಧಾರೆಗಳನ್ನು, ಕಾರ್ಲ್ ಮಾರ್ಕ್ಸ್ ಕಾಲದ ಪೂರ್ವದಲ್ಲೇ ಈ ತತ್ವಪದ ಹೇಳುತ್ತದೆ. ಎಲ್ಲೋ ಹುಡುಕಿದೆ ಇಲ್ಲದ ದೇವರ,ಕಲ್ಲು ಮಣ್ಣುಗಳ ಗುಡಿಯೊಳಗೆ. ಇದು ನಮ್ಮ ಕಾಲದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಕವಿತೆ.…