ಸುಯಿಧಾನಿ ಅಕ್ಕ ಮಹಾದೇವಿ / ಡಾ. ಹೇಮಾ ಪಟ್ಟಣಶೆಟ್ಟಿ, ಧಾರವಾಡ.
ಕದಳಿ ಎಂಬುದು ತನು, ಕದಳಿ ಎಂಬುದು ಮನ,ಕದಳಿ ಎಂಬುದು ವಿಷಯಂಗಳು.ಕದಳಿ ಎಂಬುದು ಭವಘೋರಾರಣ್ಯ.ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದುಕದಳಿಯ ಬನದಲ್ಲಿ ಭವಹರನ ಕಂಡೆನು.ಭವ ಗೆದ್ದು ಬಂದ ಮಗಳೆಂದುಕರುಣದಿ ತೆಗೆದು ಬಿಗಿದಪ್ಪಿದಡೆಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-52 / ವಚನ ಸಂಖ್ಯೆ-139) ಎಂದು ಪ್ರತೀಕಾತ್ಮಕವಾಗಿ ನುಡಿದು, ಕದಳಿಯಲ್ಲೇ ಲೀನಳಾದ ಮಹಾದೇವಿಯಕ್ಕನವರು ಕನ್ನಡದ ಮೊಟ್ಟಮೊದಲ ಕವಯಿತ್ರಿ ಅಷ್ಟೇ ಅಲ್ಲ ಶ್ರೇಷ್ಠ ಕವಯಿತ್ರಿಯೂ ಕೂಡ. ಕರ್ನಾಟಕದ ಮೊದಲ ಅನುಭಾವಿ ಮಹಿಳೆಯೂ ಹೌದು. ಜೀವನದಲ್ಲಿ ಹಲವಾರು ಏರಿಳಿತ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ, ಸಾಧನೆಯ ಮಾರ್ಗ…





Total views : 69960