“ಪೈರಿಗೆ ನೀರು ಬೇಕೆಂಬಲ್ಲಿ”/ ಚನ್ನಪ್ಪ ಅಂಗಡಿ,ಧಾರವಾಡ
ವೃಷ್ಟಿಮೂಲ ಕೃಷಿಃ ಸರ್ವಾ ವೃಷ್ಟಿಮೂಲಂ ಚ ಜೀವನಮ್ |ತಸ್ಮಾದಾದೌ ಪ್ರಯತ್ನೇನ ವೃಷ್ಟಿಜ್ಞಾನಂ ಸಮಾಚರೇತ್ ||(ಕೃಷಿ ಪರಾಶರ - ಪರಾಶರ ಮುನಿ: 10 ನೇ ಶ್ಲೋಕ) ಮೂಲತಃ ಕೃಷಿಯು ಮಳೆಯನ್ನು ಅವಲಂಬಿಸಿದೆ. ಹಾಗೆ ನೋಡಿದರೆ ಸಮಗ್ರ ಜೀವನವೇ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮೊಟ್ಟಮೊದಲನೆಯದಾಗಿ ಮಳೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯವೆಂದು ಪ್ರಾಚೀನ ಋಷಿ ಪರಾಶರ ಹೇಳಿದ್ದಾನೆ. ಕೃಷಿ ಮಳೆಯನ್ನು ಅವಲಂಬಿಸುವುದೆಂದರೆ ನೀರನ್ನು ಅವಲಂಬಿಸುವುದೆಂದೇ ಅರ್ಥ. ‘ಮಣ್ಣು-ನೀರು-ಸಸ್ಯ-ಆಹಾರ’ ಇಷ್ಟು ಹೇಳಿಬಿಟ್ಟರೆ ಅದು ಪ್ರಕೃತಿಯಾಗುತ್ತದೆ. ‘ಕೃಷಿ’ ಎಂದು ಬಿಟ್ಟರೆ ಅದು ಮಾನವ ನಿರ್ಮಿತವಾಗುತ್ತದೆ. ಮನುಷ್ಯನ ಪ್ರವೇಶಿಕೆ ಎಂದರೆ ನಿಸರ್ಗದ ನಿಯತಿಯನ್ನು…





Total views : 67068