ಪ್ರಾಣಲಿಂಗ ಸ್ಥಲ – ಪ್ರಾಣಲಿಂಗಕ್ಕೆ ಕಾಯವೆ ಸಜ್ಜೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಷಟ್ ಸ್ಥಲಗಳಲ್ಲಿ ನಾಲ್ಕನೆಯ ಸ್ಥಲವಾದ ಪ್ರಾಣಲಿಂಗಸ್ಥಲ ಶರಣ ಧರ್ಮವನ್ನು ಬಿಂಬಿಸುವ ವಿಶಿಷ್ಟ ಸ್ಥಲವಾಗಿದೆ. ಪ್ರಾಚೀನ ಅದ್ವೈತ ಧರ್ಮದಲ್ಲಿ ಶಂಕರಾಚಾರ್ಯರು ಹೇಳುವ “ಅಹಂ ಬ್ರಹ್ಮಾಸ್ಮಿ” ತತ್ವಕ್ಕೆ ಈ ಸ್ಥಲವನ್ನು ಹೋಲಿಸಬಹುದು. ಶರಣರು ಹೇಳುವ ಪ್ರಾಣಲಿಂಗಿ ಸ್ಥಲವು ಪ್ರಾಣವನ್ನು ಲಿಂಗವನ್ನಾಗಿಸಿ ಕೊಳ್ಳುವ ಪ್ರಕ್ರಿಯೆ ಎಂಬುದು ಗಮನಾರ್ಹ. ಅಲ್ಲಮಪ್ರಭು ಹೇಳುವಂತೆ ಲಿಂಗ ಸಾಧಕರೆಲ್ಲಾ ಭೂ ಬಾಧಕರಾದರು. ಅಂದರೆ ಅಂಗವು ಲಿಂಗವಾಗಿ ದೂರವುಳಿದರೆ ಸಮಾಜಕ್ಕೆ ಪ್ರಯೋಜನವೇನು? ಅದು ಮುಂದುವರಿದು ಸಮಾಜದ ಜಂಗಮದಲ್ಲಿ ಒಂದಾಗಬೇಕು ಏಕವಾಗಬೇಕು. ಅರವಿಂದ ಘೋಷರು ಅಂಗವನ್ನು ಲಿಂಗವಾಗಿಸಿ ಕೊಂಡಿದ್ದರು. ಗಾಂಧೀಜಿಯವರು ಮುಂದುವರಿದು ಸಮಾಜಮುಖಿಯಾಗಿ ವಿಶಾಲವಾಗಿಸಿದರು. ಬಸವಣ್ಣನವರು ಹೇಳಿದಂತೆ ಅರವಿಂದ ಘೋಷರಾಗುವುದಲ್ಲ.…





Total views : 51360