ವಚನಗಳಲ್ಲಿ ಯೋಗ – ಶಿವಯೋಗ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ವಚನಗಳು ಕನ್ನಡ ಸಾಹಿತ್ಯಕ್ಕೆ ಒಲಿದು ಬಂದ ವರ. 12 ನೇ ಶತಮಾನದ ವರ್ತಮಾನದ ತಲ್ಲಣಗಳಿಗೆ ನಾಂದಿಯಾದ ವಚನಗಳು ನಡೆ-ನುಡಿ ಸಾಮರಸ್ಯದಿಂದಾಗಿ ೨೧ನೇ ಶತಮಾನದಲ್ಲೂ ಪ್ರಸ್ತುತವಾಗುತ್ತವೆ, ಮೊಗೆ ಮೊಗೆದಷ್ಟು ನವ ನವೀನ ವಿಚಾರಗಳಿಗೆ ಅವಾಸ್ಥಾನವಾದ ವಚನಗಳು ತಮ್ಮ ಒಡಲಲ್ಲಿ ಹೊಸ ಅಚ್ಚರಿಗಳನ್ನು ಮುಚ್ಚಿಟ್ಟುಕೊಂಡಿವೆ. ಈ ಕಾರಣದಿಂದ ವಚನಗಳನ್ನು ಓದಿದಷ್ಟು ಹೊಸ ಹೊಳಹುಗಳು ವಚನ ಅಭ್ಯಾಸಗಳಿಗೆ, ಸಂಶೋಧಕರಿಗೆ ಒದಗುತ್ತಲೇ ಇವೆ. ಕಾಲ ದೂರ ಸರಿದಂತೆ ಜೀವನ ಶೈಲಿಯಲ್ಲಿ, ಮನುಷ್ಯರ, ಆಲೋಚನೆಗಳಲ್ಲಿ, ಅನುಸರಿಸುವ ಮೌಲ್ಯಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಬದಲಾದ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಚನಗಳು ನೀಡುವ ಬೆಳಕು ಮಾತ್ರ ಕ್ಷೀಣವಾಗಿಲ್ಲ. ಸಾರ್ವಕಾಲಿಕ…




Total views : 67066