ಪ್ರಾಮಾಣಿಕ ಸತ್ಯ ಸಾಧಕಿ ಶರಣೆ ಸತ್ಯಕ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಕ್ಕಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ತಮ್ಮ ಮುಕ್ತ ಮನಸ್ಸಿನಿಂದ, ಸ್ವತಂತ್ರ ಆಲೋಚನೆಗಳಿಂದ ಎಲ್ಲರೂ ಬೆರಗಾಗುವಂತೆ ವಚನಗಳನ್ನು ರಚನೆ ಮಾಡಿದ್ದಾರೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗ್ರತ, ನವ ಸಾಕ್ಷರತೆಯ ಅರಿವನ್ನ ಮೂಡಿಸಿ ಸುಮಾರು 39 ಕ್ಕೂ ಹೆಚ್ಚು ಜನ ಶರಣೆಯರಿಗೆ ವಚನ ರಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರ ಈ ಕ್ರಾಂತಿಯು ಶ್ರೇಣಿಕೃತ ಸಮಾಜದಲ್ಲಿನ ದೀನ-ದಲಿತರನ್ನು ಮೇಲೆತ್ತುವದರ ಜೊತೆಗೆನ ಕಡೆಗಣಸಲ್ಪಟ್ಟಿದ್ದ ಮಹಿಳೆಯರನ್ನು ಉದ್ಧಾರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವದಾಗಿತ್ತು. ಮಹಿಳೆಯರು ಮನೆ…