ಭಾಗ-03: ಸಂಪಾದಕೀಯ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಅರ್ಥ ಸನ್ಯಾಸಿಯಾದಡೇನಯ್ಯಾ,ಆವಂಗದಿಂದ ಬಂದಡೂ ಕೊಳದಿರಬೇಕು.ರುಚಿ ಸನ್ಯಾಸಿಯಾದಡೇನಯ್ಯಾ,ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.ಸ್ತ್ರೀ ಸನ್ಯಾಸಿಯಾದಡೇನಯ್ಯಾ,ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.ದಿಗಂಬರಿಯಾದಡೇನಯ್ಯಾ,ಮನ ಬತ್ತಲೆಯಾಗಿರಬೇಕು.ಇಂತೀ ಚತುರ್ವಿಧದ ಹೊಲಬನರಿಯದೆ ವೃಥಾ ಕೆಟ್ಟರುಕಾಣಾ ಚನ್ನಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-45) ಈ ಒಂದೇ ಒಂದು ವಚನವನ್ನು ಅರ್ಥ ಮಾಡಿಕೊಂಡಿದ್ದರೆ “ವಚನ ದರ್ಶನ” ಎನ್ನುವ ಪುಸ್ತಕದ ಪ್ರಧಾನ ಸಂಪಾದಕ ಸದಾಶಿವಾನಂದ ಮತ್ತು ಸಂಪಾದಕರಾದ ಜನಮೇಜಯ ಉಮರ್ಜಿ, ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ ಹಾಗೂ ಸಂತೋಷಕುಮಾರ ಅವರುಗಳು ಬೌದ್ಧಿಕ ದಿವಾಳಿಯಿಂದ ವಚನ ಸಾಹಿತ್ಯವನ್ನು ಹೀಯಾಳಿಸುವ ಮತ್ತು ವೈಷ್ಣವೀಕರಣದತ್ತ ತಿರುಚುವ ಪ್ರಯತ್ನವನ್ನು ಮಾಡುತ್ತಿರಲಿಲ್ಲ ಎನ್ನುವುದು ಸಾರಸ್ವತ…