ಕಾಯಕಯೋಗಿ ನುಲಿಯ ಚಂದಯ್ಯ ಶರಣರು / ಶ್ರೀಮತಿ. ಸವಿತಾ ಮಾಟೂರ, ಇಳಕಲ್.
ಬಸವಾದಿ ಶರಣರು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಸಮಾನತೆಯ, ಸ್ವಾಭಿಮಾನದ ಸಮಾಜವನ್ನು ಕಟ್ಟಬಯಸಿದರು. ಸಂಸ್ಕೃತಿ ಎಂದರೆ, “ಒಂದು ಜನ ಸಮುದಾಯದ ಜೀವನ ವಿಧಾನ”. ಆ ಸಂಸ್ಕೃತಿಗೆ ವೈಚಾರಿಕತೆಯ ಸ್ಪರ್ಷಮಾಡಿ ವೈಜ್ಞಾನಿಕವಾಗಿ ಚಿಂತಿಸುವ, ಮೌಢ್ಯತೆ ಕಳೆದು, ಅರಿವನ್ನು ಮೂಡಿಸುವ, ಸದಾ ಹೊಸದನ್ನು ಅರಸುವ ಕ್ರಿಯಾಶೀಲ ಸಮಾಜದತ್ತ ಹೆಜ್ಜೆಹಾಕಿದರು. ಅನುಭಾವದ ಅರಿವನ್ನು ಮೈಗೂಡಿಸಿಕೊಳ್ಳುತ್ತ, ಮೌಢ್ಯದ ಮಾಯೆಯನ್ನು ಮರೆಮಾಡಿ, ಅಹಂಭಾವದ ಆತ್ಮಾವಲೋಕನ ಮಾಡಿಕೊಂಡರು. ಕಾಯಕಕ್ಕೆ ದೈವತ್ವವನ್ನು ತಂದು ಸ್ವಾಭಿಮಾನದ ಸಂಸ್ಕೃತಿಯನ್ನು ಬೆಳೆಸಿದರು. ಮಾನವೀಯ ಮೌಲ್ಯಗಳನ್ನು ಮೆರೆದು, ಸೋಹಂ ಅಳಿದು ದಾಸೋಹಕ್ಕೆ ಅಡಿ ಇಟ್ಟವರು ನಮ್ಮ ಶರಣರು. ಅಂತಹ ಶೇಷ್ಠ ಶಿವಶರಣರಲ್ಲಿ ನುಲಿಯ ಚಂದಯ್ಯ…