ಶಿವಯೋಗಿ ಸಿದ್ಧರಾಮರ ವಚನಗಳಲ್ಲಿ ಜಂಗಮ / ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.
ಯುಗಯುಗಗಳು ಸಂದರೂ ಇನ್ನೂ ಸಾವಿರಾರು ಯುಗಗಳು ಸಂದರೂ ಈ ಜಗತ್ತು ಬದುಕಿರುವವರೆಗೂ ಶರಣರು ಬದುಕಿರುತ್ತಾರೆ. ಅಂತಹ ಅಪರೂಪವಾದ ಮೌಲಿಕವಾದ, ಅಸ್ಖಲಿತವಾದ ಕಾಲಘಟ್ಟ ಅದುವೆ ಹನ್ನೆರಡನೆಯ ಶತಮಾನ. ಎಲ್ಲಾ ಧರ್ಮಗಳೂ ಸತ್ಯ, ಆನಂದ, ಮೋಕ್ಷಗಳನೆ ಮೂಲಬೇರಾಗಿಸಿದವು. ಎಲ್ಲವುದರ ಆಚರಣೆ, ಸಂಸ್ಕೃತಿ, ಶೈಲಿ, ವಿಭಿನ್ನವೆ. ಎಲ್ಲವುಗಳಲ್ಲೂ ಅವುಗಳದೇ ಆದ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳೂ ಕೂಡಾ ಇದ್ದೇ ಇವೆ. ಹಾಗೆ ಎಲ್ಲವೂ ವ್ಯಕ್ತಿಗತ ಆನಂದದ ಮೋಕ್ಷದ ಪಥವ ತೋರಿದರೆ ಸಮಗ್ರತೆಯ ಸಾರವಾದ ಬಸವ ಪ್ರಣೀತ ಶರಣಧರ್ಮವು ಆ ಎಲ್ಲ ಚೌಕಟ್ಟುಗಳ ತೆಕ್ಕೆಗೆ ಸೇರದೆ ವ್ಯಕ್ತಿಗತ ಆನಂದದ ಪಾತಳಿಯ ಸಮಷ್ಠಿಯ ಆನಂದದಲ್ಲಿ…



Total views : 69468