ವಚನಗಳು ಮತ್ತು ವ್ಯಕ್ತಿತ್ವ ವಿಕಸನ / ಸಿದ್ದು ಯಾಪಲಪರವಿ, ಕಾರಟಗಿ, ಕೊಪ್ಪಳ ಜಿಲ್ಲೆ.

ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಆರು ಸಾವಿರ ವರ್ಷಗಳ ಹಿಂದೆ ಬೋಧಿಸಲಾದ ಕೃಷ್ಣನ ಭಗವದ್ಗೀತಾ, ಬುದ್ಧನ ವಿಪಸನ, ಆಯುರ್ವೇದ ಶಾಸ್ತ್ರದ ಕಾಯ ಚಿಕಿತ್ಸಾ ಮತ್ತು ಬಸವಾದಿ ಶರಣರ ವಚನಗಳು ಆಲೋಚನಾ ಕ್ರಮವನ್ನು ಮುಂದುವರೆಸಿಕೊಂಡು ಸಾಗಿವೆ. ಆಧುನಿಕ ಮನೋವಿಜ್ಞಾನ ವಿದೇಶಗಳಲ್ಲಿ ತನ್ನ ಮನೋ ಸಂಶೋಧನೆಯನ್ನು ಮಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಶರಣರು ಅನುಭವ ಮಂಟಪದ ಮೂಲಕ ಬದುಕಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಮನೋವೈಜ್ಞಾನಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಚರ್ಚೆ ಮಾಡಿ,…

0 Comments

ಸರ್ವವೂ ಗುಹೇಶ್ವರನ ಮಾಯೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೆ ಶತಮಾನವು ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿ ಪರವಾದ‌ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಪ್ರಮುಖವಾದ ಘಟ್ಟ. ಸ್ತ್ರೀ ಪುರುಷ ಎಂಬ ಭೇದವನನ್ನು ಅಳಸಿ ಹಾಕಲು ಪ್ರಯತ್ನಿಸಲಾಯುತು. ಸ್ತ್ರೀಯರಿಗೆ ಆತ್ಮ ವಿಶ್ವಾಸ ಸಮಾನತೆಯನ್ನು ಅಭಿವ್ಯಕ್ತಿಯ ಅವಕಾಶವನ್ನು ಒದಗಿಸಿದ್ದು ಇದೇ ಕಾಲದಲ್ಲಿ. "ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ" ಎಂಬ ಸ್ಪಷ್ಟತೆ ಹೆಣ್ಣನ್ನು ಕಂಡ ಬಗೆಯನ್ನು ಜೇಡರ ದಾಸಿಮಯ್ಯನವರು ಭಾವನಾತ್ಮವಾಗಿ…

0 Comments

ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರ/ಶ್ರೀಮತಿ. ಸವಿತಾ ಮಾಟೂರ,ಇಳಕಲ್ಲ.

ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವಾ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಕವಿ ವಾಣಿಯಂತೆ ಕಲ್ಲು ಮಣ್ಣುಗಳ ಗುಡಿಯಲ್ಲಿಯೆ ಇನ್ನು ದೇವರನ್ನು ಹುಡುಕಿತ್ತಿದ್ದೆವೆ. “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ” ಶರಣರು ಸಾರಿದ ಅಂತರಂಗ ಶುದ್ಧಿಯಾದರೆ ನಿಜವಾದ ಅಮೃತದ ಸವಿಯನ್ನು ಸವಿಯಬಹುದು.  ಶರಣರು ಜಗದೊಳಗೆ ಅನುಶೃತಗೊಂಡ ಅಘಟಿತ ಚರಿತರು. ವಚನದ ಅಮೃತದ ಸಾರವನ್ನು ನಮಗೆಲ್ಲ ಧಾರೆ ಎರೆದವರು. ಆ ವಚನಾಮೃತದ ಸಾಗರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ ಅಗಲದ ಅನುಭವವಾಗುವದು.…

0 Comments

ಆರೋಗ್ಯಕ್ಕೆ ವಚನಾಮೃತ / ಡಾ. ಸಿ. ಆರ್.‌ ಚಂದ್ರಶೇಖರ, ಬೆಂಗಳೂರು.

ಪ್ರಸಕ್ತ ಸಮಾಜದಲ್ಲಿ ನಮ್ಮ ಬದುಕು ಸಂಕೀರ್ಣ ಮತ್ತು ಸಂಕಷ್ಟಮಯವಾಗುತ್ತಿದೆ. ಭೋಗ ಭಾಗ್ಯಗಳ “ಕಂಸ್ಯೂಮರ್”‌ ಜಗತ್ತಿನಲ್ಲಿ ʼಹಣ-ವಸ್ತು-ರಂಜನೆʼಯಿಂದಲೆ ಸುಖ-ಸಂತೋಷವೆಂಬ ಸೂತ್ರ ನಮ್ಮನ್ನು ಬಂಧಿಸಿದೆ. Marks-Materials-Money ಈ ಮೂರೂ ʼಎಂʼಗಳೂ ಬಾಲ್ಯದಿಂದ ಮುಪ್ಪಿನವರೆಗೆ ನಮ್ಮನ್ನು ಕಾಡುತ್ತಿವೆ. ಶಾಲಾ-ಕಾಲೇಜು ವಿದ್ಯಾಭ್ಯಾಸದಲ್ಲಿ Marks (ಅಂಕಗಳು) ನಂತರ ಹಣ ಸಂಪಾದನೆ-ಬೇರೆಯವರಿಗಿಂತ ಹೆಚ್ಚಾಗಿ ನಮಗೇ ಸಿಗಬೇಕು. ಹಾಗೆಯೇ ಐಷಾರಾಮಿ ವಸ್ತುಗಳು (Materials) ಎಷ್ಟಿದ್ದರೂ ಸಾಲದು. ಮನೆಯೊಳಗಿನ ಸ್ನೇಹ ಸಂಬಂಧಗಳು ಮನೆಯ ಹೊರಗಿನ ಸ್ನೇಹ ಸಂಬಂಧಗಳು ಶಿಥಿಲವಾಗುತ್ತಿವೆ. ಯಾರಿಗೆ ಯಾರೋ ಎರವಿನ ಸಂಸಾರ. ನಾನು ಕಂಡ ಹಲವಾರು ಕುಟುಂಬಗಳಲ್ಲಿ ಗಂಡನಿಗೆ ಹೆಂಡತಿಯ ಆಸರೆ ಇಲ್ಲ. ಹೆಂಡತಿಗೆ ಗಂಡನ…

1 Comment

ಅಲ್ಲಮಪ್ರಭುದೇವರ ವಚನ ವಿಶ್ಲೇಷಣೆ / ಶ್ರೀ ಅಳಗುಂಡಿ ಅಂದಾನಯ್ಯ, ಬೆಳಗಾವಿ.

ಕೆಂಡದ ಗಿರಿಯ ಮೇಲೊಂದು,ಅರಗಿನ ಕಂಬವಿದ್ದಿತ್ತು ನೋಡಯ್ಯಾ.ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.ಕಂಭ ಬೆಂದಿತ್ತು ಹಂಸೆ ಹಾರಿತ್ತು ಕೆಂಡ ಎತ್ತಲಡಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ-2 / 2021 / ಪುಟ. 186 / ವಚನ ಸಂಖ್ಯೆ. 605) ಅಲ್ಲಮಪ್ರಭುಗಳ ಬೆಡಗಿನ ನುಡಿಗಳ ಈ ವಚನವನ್ನು ಮೊದಲಿಗೆ ಸಹಜವಾಗಿ ಓದಿದಾಗ, ಅಲ್ಲಿ ಬಳಸಿರುವ ರೂಪಕದ ಭಾಷೆಯಲ್ಲಿರುವಂಥಾ ಆ ದೃಷ್ಟಾಂತದ ಪದಗಳು; ಸರ್ವೇ ಸಾಮಾನ್ಯವಾದ ಮತ್ತು ಸಿದ್ಧಮಾದರಿಯ ಹಾಗೂ ಜನಜನಿತವಾದ ಅರ್ಥವನ್ನು ನೀಡುತ್ತವೆ. ಅದುದರಿಂದ ಪ್ರತಿ ಸಾಲುಗಳು ನೀಡುವ ಚಿತ್ರಣವನ್ನು ಸುಲಭವಾಗಿ ಗ್ರಹಿಸಿಕೊಂಡು ರೂಪವಾದಂಥ ಒಂದು ಅರ್ಥವನ್ನಿಲ್ಲಿ ಸಹಜವಾಗಿ ಹೇಳಿ ಬಿಡಬಹುದೆಂದು ಖರೆ…

0 Comments

ಬಸವಣ್ಣನವರ ವಚನಗಳಲ್ಲಿ “ಗಣಾಚಾರ”/ಶ್ರೀಮತಿ ಸುನಿತಾ ಮೂರಶಿಳ್ಳಿ

ವಿಶ್ವದ ಎಲ್ಲ ಧಾರ್ಮಿಕ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಅಂಶಗಳು ಆಯಾ ಕಾಲದ ಕಟ್ಟಳೆಗೆ, ಆಚರಣೆಗೆ, ವ್ಯವಸ್ಥೆಗೆ ಸೀಮಿತವಾಗಿರುತ್ತವೆ. ಆ ಕಟ್ಟೆಳೆಗಳಿಂದ ವ್ಯವಸ್ಥೆಯಲ್ಲಿರುವ ದೋಷಗಳಿಂದ ಸಿಡಿದೇಳುವುದೂ ಕೂಡಾ ಕಾಲ ಕಾಲಕ್ಕೂ ನಡೆದು ಬಂದಿರುವ ಐತಿಹಾಸಿಕ ಸತ್ಯ. ಹಾಗೆಯೇ 12 ನೇಯ ಶತಮಾನದ ಶರಣರ ಗಣಾಚಾರ ಕೂಡಾ ಇಂತಹ ಒಂದು ಪ್ರತಿಕ್ರಿಯೆ ಎನ್ನಬಹುದು. ಪಂಚ ಆಚಾರಗಳಲ್ಲಿ ಮೊದಲನೆಯ ಮೂರು ಲಿಂಗಾಚಾರ, ಸದಾಚಾರ ಮತ್ತು ಶಿವಾಚಾರಗಳು ವ್ಯಕ್ತಿ ಪರಿವರ್ತನೆಗೆ  ಸಂಬಂಧಿಸಿದ್ದು ಅವುಗಳ ವಿಕಾಸವು ಸಮಷ್ಟಿಯೊಂದಿಗೆ ಬೆಸೆದದ್ದು ಆಗಿದೆ. ನಂತರ ಬರುವ ಗಣಾಚಾರ ಮತ್ತು ಭೃತ್ಯಾಚಾರಗಳು ಪ್ರತಿಫಲನ ರೂಪವಾಗಿ ಬಂದ ಶರಣರ  ಪ್ರಕ್ರಿಯೆಗಳಾಗಿವೆ.…

0 Comments

ಗಾಂಧೀ ಗಿಡ / ಶ್ರೀ. ಬಸವರಾಜ ಚಿನಗುಡಿ, ಚನ್ನಮ್ಮನ ಕಿತ್ತೂರ, ಬೆಳಗಾವಿ ಜಿಲ್ಲೆ.

ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಗಾಂಧೀ ಮಡ್ಡಿಯಲ್ಲಿ ಬೃಹಾದಾಕಾರದಲ್ಲಿ ಬೆಳೆದು ನಿಂತ ಗಾಂಧೀ ಗಿಡ (ಆಲದ ಮರ). ದಾರವಾಡ ಮತ್ತು ಬೆಳಗಾವಿ ನಗರಗಳ ಮಧ್ಯ ಮಲೆನಾಡಿನ ಅಂಚಿನಲ್ಲಿ ಪೂಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ-4 ರಿಂದ ಸುಮಾರು 7 ಕಿ.ಮೀ ದೂರದಲ್ಲಿ ತಿಗಡೊಳ್ಳಿ ಎಂಬ ಗ್ರಾಮ ಇದೆ. ಈ ಗ್ರಾಮ ಸ್ವಾತಂತ್ರ್ಯ ಪೂರ್ವದಿಂದಲೂ ಮಹೋನ್ನತ ಇತಿಹಾಸ ಹೊಂದಿದೆ. ಸ್ವಾತಂತ್ರ ಹೋರಾಟ, ಆರ್ಥಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ ವೈಭವದಿಂದ ಮೆರೆದ ಗ್ರಾಮ. ತಿಗಡೊಳ್ಳಿ ಗ್ರಾಮವು ಸ್ವಾತಂತ್ರ ಹೋರಾಟದಲ್ಲಿ ತನ್ನದೆ ಆದ ಛಾಪು ಮೂಡಿಸಿ 1942 ರ ಚಲೇಜಾವ್ ಚಳುವಳಿಯ ಕಾಲದಲ್ಲಿ ಮಹತ್ವದ…

0 Comments

ಆಡುವಡೆ ಸದಾಚಾರಿಗಳ ಕೂಡೆ ಆಡುವುದು: ಶರಣ ಬಹುರೂಪಿ ಚೌಡಯ್ಯನವರ ವಚನ / ಡಾ. ಪ್ರದೀಪಕುಮಾರ ಹೆಬ್ರಿ, ಮಂಡ್ಯ.

ಆಡುವಡೆ ಸದಾಚಾರಿಗಳ ಕೂಡೆ ಆಡುವುದು.ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು.ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವುದು.ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾರೇಕಣ್ಣಪ್ರಿಯ ನಾಗಿನಾಥಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1370 / ವಚನ ಸಂಖ್ಯೆ-131) ಇದು ಬಹುರೂಪಿ ಚೌಡಯ್ಯನವರ ವಚನ. ಇವರು ಬಹುರೂಪಿ ಕಾಯಕದ ಜನಪದ ಕಲಾವಿದರು. ರೇಕಳಿಕೆ ಗ್ರಾಮದಲ್ಲಿ ಹುಟ್ಟಿದ ಇವರ ಕಾರ್ಯಕ್ಷೇತ್ರ ಕಲ್ಯಾಣ, 'ರೇಕಣ್ಣಪ್ರಿಯ ನಾಗಿನಾಥಾ' ಇವರ ಅಂಕಿತ. ಇದು ಇವರ ದೀಕ್ಷಾಗುರು ರೇಕನಾಥ, ಜ್ಞಾನಗುರು ನಾಗಿನಾಥರ ಸಂಯುಕ್ತ ಹೆಸರಿನಿಂದ ಕೂಡಿದುದು. ಬಸವಣ್ಣನವರೆಂದರೆ ಇವರಿಗೆ ಪಂಚಪ್ರಾಣ. ಇವರ ವಚನಗಳಲ್ಲಿ ಲಿಂಗಾಂಗ ಸಾಮರಸ್ಯ, ಶರಣ ವಿಧೇಯತೆ, ಜಂಗಮ ನಿಷ್ಠೆ, ನೇರ ಹಾಗೂ ನಿಷ್ಠೂರ ಸ್ವಭಾವಗಳು ಕಂಡುಬರುತ್ತವೆ.…

0 Comments

ವಚನ ಸಾಹಿತ್ಯದಲ್ಲಿ ಆರೋಗ್ಯ / ಡಾ ಸುರೇಶ ಸಗರದ, ರಾಯಚೂರು.

ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅನಾರೋಗ್ಯದ ಸಮಯದಲ್ಲಿ ಮಾತ್ರ ನಾವು ಆರೋಗ್ಯದ ಕುರಿತು ಚಿಂತಿಸುತ್ತೇವೆ. ಅನಾರೋಗ್ಯದಿಂದ ಗುಣಮುಖರಾಗುತ್ತಿದ್ದಂತೆ ಮತ್ತೇ ಆ ಕುರಿತು ಚಿಂತಿಸುವುದಿಲ್ಲ. ಇತ್ತೀಚಿನ ಜೀವನಶೈಲಿ, ಅನೇಕ ಅಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದು ಮಧ್ಯ ವಯಸ್ಸಿನವರಲ್ಲಿ ಮತ್ತು ಯುವಕರಲ್ಲಿಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಈ ಆತಂಕಕಾರಿ ಬೆಳವಣಿಗೆಯನ್ನು ತಡೆಗಟ್ಟಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಜೊತೆ ಜಾಗೃತಿ ಮೂಡಿಸಲು,…

0 Comments

ಬಸವಣ್ಣನವರ ವಚನ “ಆಯುಷ್ಯವುಂಟು, ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ” / ಪ್ರೊ. ಜಿ. ಎ. ತಿಗಡಿ.

ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;ಆಯುಷ್ಯ ತೀರಿ ಪ್ರಳಯವು ಬಂದಡೆ ಆ ಅರ್ಥವನುಂಬುವರಿಲ್ಲಾ.ನೆಲನನಗೆದು ಮಡುಗದಿರಾ, ನೆಲ ನುಂಗಿದೊಡುಗುಳುವುದೆ?ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!ನಿನ್ನ ಮಡದಿಗಿರಲೆಂದಡೆ, ಮಡದಿಯ ಕೃತಕ ಬೇರೆ;ನಿನ್ನ ಒಡಲು ಕೆಡೆಯಲು ಮತ್ತೊಬ್ಬನಲ್ಲಿಗೆ ಅಡಕೆದೆ ಮಾಣ್ಬಳೆ?ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ,ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-26 / ವಚನ ಸಂಖ್ಯೆ-201) ನನಗೆ ಸಾಕಷ್ಟು ಆಯುಷ್ಯವಿದೆ, ಜಗತ್ತಿನ ಪ್ರಳಯವೆಂಬುದು ಸುಳ್ಳು ಎಂದು ಭಾವಿಸಿ, ಸಂಪತ್ತನ್ನು ಬಚ್ಚಿಡುವಿರಿ. ಆದರೆ ನಿಮ್ಮ ಆಯುಷ್ಯ ಮುಗಿದು ತೀರಿದ ಮೇಲೆ ಪ್ರಳಯವಾದರೆ ನೀವು ಮುಚ್ಚಿಟ್ಟ ಆ ಸಂಪತ್ತನ್ನು ಅನುಭೋಗಿಸುವವರೇ ಇಲ್ಲವಾಗುತ್ತದೆ.…

3 Comments