ಮುಚ್ಚಿದ ಸ್ಥಾವರ; ತೆರೆದ ಜಂಗಮ | ಶ್ರೀ. ಎನ್. ಸಿ. ಶಿವಪ್ರಕಾಶ, ಮಸ್ಕತ್, ಒಮಾನ್.
ಆರಾಧನೆಯ ಮಾಡಿದಡೆ ಅಮೃತದ ಬೆಳಸು,ವಿರೋದ್ಥಿಸಿದಡೆ ವಿಷದ ಬೆಳಸು,ಇದು ಕಾರಣ, ಜಂಗಮಕ್ಕೆ ಅಂಜಲೇಬೇಕು.ಸ್ಥಾವರ ಜಂಗಮ ಒಂದೆಂದರಿದಡೆಕೂಡಲಸಂಗಮದೇವ ಶರಣಸನ್ನಿಹಿತ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-422) ನಾವು ನಾಲ್ಕೈದು ಜನ ಲಿಂಗವಂತರು ಪರವೂರಿನ ಪುರಾತನ ಶಿವಮಂದಿರದ ಶಿವಲಿಂಗದರ್ಶನಕೆಂದು ತೆರಳಿದ್ದೆವು. ದೇಗುಲ ಹೊಕ್ಕಾಗ ಗರ್ಭಗುಡಿ ಮುಚ್ಚಿತ್ತು. ಶಿವಲಿಂಗದರ್ಶನದ ಸಮಯ ಮೀರಿತ್ತು. ಮಸುಕಾದ ಮುಸುಕು ಹೊದಿಕೆ ಗರ್ಭಗುಡಿಯ ಗಾಜಿನ ಜೋಡಿ ಬಾಗಿಲುಗಳ ಮುಚ್ಚಿ ಶಿವಲಿಂಗವನು ಮರೆಸಿತ್ತು. ತಪ್ಪು ನಮ್ಮ ಗುಂಪಿನದೇ ಇತ್ತು. ಪರಶಿವನನು ಕಾಣಬೇಕೆಂದರೆ ಸಮಯದ ನಿಯಮವನು ಅನುಸರಿಸಬೇಕಲ್ಲವೇ? ಹೊತ್ತು ಗೊತ್ತಿಲ್ಲದೆ ಬರುವ ಭಕ್ತರು ಭಕ್ತಿಯ ಮಾಡಲೆಳೆಸಿದರೆ ಸ್ವೀಕರಿಸುವುದಕೆ ಗುಡಿಯ ಶಿವಲಿಂಗವೇನು ಕೊರಳಿಗೆ ಕಟ್ಟಿದ…






Total views : 54602