ಅಕ್ಕ ಮಹಾದೇವಿಯ ವ್ಯಕ್ತಿತ್ವ: ತಾತ್ವಿಕ ನಿಲುವುಗಳು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ತನು ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ಮನ ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ಪ್ರಾಣ ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳುಎನ್ನ ಒರೆದೊರೆದು ಆಗುಮಾಡಿದ ಕಾರಣಚೆನ್ನಮಲ್ಲಿಕಾರ್ಜುನಯ್ಯಾ,ನಿಮಗಾನು ತೊಡಿಗೆಯಾದೆನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-27) ತತ್ವನಿಷ್ಠೆ, ಜ್ಞಾನ, ವೈರಾಗ್ಯಗಳಿಂದ ಹಂಗಿನ ಅರಮನೆಯ ತೊರೆದು ಅರಿವಿನ ಮನೆಯತ್ತ ಪಯಣ ಬೆಳಸಿದ ಮಹಾ ಶಿವಯೋಗಿಣಿ, ತತ್ವ ಶಿಖಾಮಣಿ ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರು ಈ ಭವಕ್ಕೆ ಬಂದ ಮಹಾ ಬೆಳಕು. ಸ್ತ್ರೀ ಕುಲರತ್ನ, ಸ್ತ್ರೀ ಕುಲದ ಸ್ವಾಭಿಮಾನದ ಪ್ರತೀಕವಾದ ಅಕ್ಕ ಮಹಾದೇವಿಯವರ ವ್ಯಕ್ತಿತ್ವವೇ ಅನುಪಮವಾದದು. ತನುವಿನೊಳೊಗಿದ್ದು ತನುವ…