ವಿಶ್ವದ ಬೆರಗು ಅಲ್ಲಮ / ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.
ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮರು. ಆ ಕ್ರಾಂತಿಯ ರೂವಾರಿ ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮರು. ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ. ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮರ ಮಹತಿ ನಿಸ್ಸೀಮವಾದರೂ ಅರಿಕೆಗೆ ಸಿಕ್ಕಿದ್ದು ತೃಣ ಮಾತ್ರ. ಇವರ ವ್ಯಕ್ತಿಗತ ಬದುಕು ಕಾವ್ಯ ಪುರಾಣಗಳಲ್ಲಿ ಒಂದೊಂದು ರೀತಿಯಾಗಿ ಚಿತ್ರಿತವಾಗಿದೆ. ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕ ಗ್ರಾಮ ಬಳ್ಳಿಗಾವಿ. ಅವರು ಬಾಲ್ಯದಿಂದಲೇ ಮದ್ದಳೆ ಪ್ರವೀಣರಾಗಿದ್ದರು ಎಂಬುದು ವಿದಿತ. ಆದರೆ ಅವರು ಕಾಮಲತೆಯೆಂಬ ರಾಜಕುವರಿಯನ್ನು ಪ್ರೀತಿಸಿ ಮದುವೆ ಆಗಿದ್ದರು.…