ಮಹಾನವಮಿ|ವಿಜಯದಶಮಿ: ಸತ್ಯ ಶರಣರ ಕಗ್ಗೊಲೆಯಾದ ದಿನ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಸತ್ಯ ಶರಣರ ಕಗ್ಗೊಲೆಯಾದ ದಿನ. ವೈದಿಕರ ವಂಚನೆಗೆ ಸತ್ಯ ಸತ್ತ ದಿನ. ಶರಣರಿಗೆ ಮರಣವು ಮಹಾನವಮಿಯಾಯಿತು! ವೈದಿಕರಿಗೆ ವಿಜಯೋತ್ಸವವಾಯಿತು! ಲಿಂಗಾಯತ ಧರ್ಮದವರಾದ ನಾವು ವಿಜಯೋತ್ಸವ ಆಚರಿಸುವುದು ಸತ್ಸಂಪ್ರದಾಯವೋ ಅಥವಾ ಸತ್ತ ಸಂಪ್ರದಾಯದವೋ ಸ್ವಲ್ಪ ಯೋಚಿಸಿ. ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ 12 ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ…





Total views : 67055