ಷಟ್ ಸ್ಥಲಗಳು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
12 ನೇ ಶತಮಾನದ ಶರಣರ ಷಟ್ ಸ್ಥಲಗಳು ಆಧ್ಯಾತ್ಮಿಕ ಬದುಕಿನ ಧಾರ್ಮಿಕ ತತ್ವಗಳನ್ನು ಪ್ರೇರೇಪಿಸುತ್ತದೆ. ಶರಣ ಧರ್ಮದ ಸಾಧನೆ, ನಡೆ ನುಡಿಗಳು ಹಾಗೂ ಭಕ್ತಿ ಜ್ಞಾನ ಸಾಮರಸ್ಯವನ್ನು ಬಿಂಬಿಸುವ ತತ್ವಗಳೇ ಷಟ್ ಸ್ಥಲಗಳಾಗಿವೆ. ಶರಣರು ತಮ್ಮ ಧರ್ಮದ ತಾತ್ವಿಕ ಸ್ವಾತಂತ್ರ್ಯದ ಸ್ಥಲಗಳ ವಿವೇಚನೆಯಲ್ಲಿ ಲಿಂಗಾಯತ ಧರ್ಮದ ವಿವೇಚನೆಯನ್ನು ಕಟ್ಟಿಕೊಟ್ಟಿದ್ದಾರೆ. ಭಕ್ತನಾದರೆ ತನು ಮನದ ಮೇಲಣ ಆಸೆ ಅಳಿದಿರಬೇಕು. ಮಾಹೇಶ್ವರನಾದರೆ ಪರಧನ ಪರಸತಿ ಆಸೆ ಅಳಿದಿರಬೇಕು. ಪ್ರಸಾದಿಯಾದರೆ ಪ್ರಸಾದವ ಕೊಂಡ ಕಾಯ ಅಳಿಯದೇ ಉಳಿದಿರಬೇಕು. ಪ್ರಾಣಲಿಂಗಯಾದರೆ ಸುಖ-ದುಃಖಾದಿಗಳನ್ನು ಮರೆತು ಪ್ರಾಣ ಲಿಂಗಸ್ಥಲದಲ್ಲಿ ಸುಸ್ಥಿರನಾಗಿರಬೇಕು. ಶರಣನಾದರೆ ಸತಿಪತಿ ಭಾವವಳಿದಿರ ಬೇಕು.…