ನಿಜ ಶರಣ ಹಡಪದ ಅಪ್ಪಣ್ಣನವರು / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.
ಇಂತಹ ಮಹಾನ ಶರಣ “ನಿಜಸುಖಿ ಅಪ್ಪಣ್ಣನವರ ಜಯಂತಿ” ನಿಮಿತ್ಯ ಲೇಖನ. 12 ನೆಯ ಶತಮಾನ ಮೌಢ್ಯತೆಯನ್ನು ಬದಿಗೆ ಸರಿಸಿದಂತಹ ವೈಚಾರಿಕತೆಯ ಯುಗ. ಸಮಾನತೆ ಮತ್ತು ಸೌಹಾರ್ದತೆಯನ್ನು ಕಂಡಂತಹ ಯುಗ, ಬಸವ ಯುಗ. ಈ ಬಸವಯುಗದ ಪ್ರಮುಖ ಶರಣರ ಹಡಪದ ಅಪ್ಪಣ್ಣನವರು. ಹಡಪದ ಅಪ್ಪಣ್ಣನವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿಹಾಳ ಗ್ರಾಮ. ಇದು ಬಸವಣ್ಣವರ ಜನ್ಮ ಸ್ಥಳ ಇಂಗಳೇಶ್ವರದಿಂದ ಕೇವಲ 6 ಕಿ.ಮೀ ದೂರದವಿದೆ. ಬಸವಣ್ಣನವರ ಬಗ್ಗೆ ತಿಳಿದ ಅಪ್ಪಣ್ಣನವರು ಪತ್ನಿ ಸಮೇತ ಸಂಗಮಕ್ಕೆ ಬಂದು ನೆಲೆಸುತ್ತಾರೆ. ನಂತರ ಅವರ ಸಂಗಡ ಕಲ್ಯಾಣಕ್ಕೂ…





Total views : 67055