ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳವರ ಜನ್ಮದಿನದ ಭಕ್ತಿಯ ನಮನಗಳು / ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.
ಮಾಡುವಂತಿರಬೇಕು, ಮಾಡದಂತಿರಬೇಕು.ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.ಕೂಡಲಸಂಗಮದೇವರನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.(ಸಮಗ್ರ ವಚನ ಸಂಪುಟ: ಒಂದು-2016 ಪುಟ ಸಂಖ್ಯೆ-120/ವಚನ ಸಂಖ್ಯೆ-1310) ಸಕಲ ಜೀವಾತ್ಮರ ಲೇಸಿಗಾಗಿ, ಮಾನವ ಕುಲದ ಕಲ್ಯಾಣಕ್ಕಾಗಿ ದೀನ ದಲಿತರ ಶೂದ್ರ ಅಸ್ಪೃಶ್ಯರ ಉದ್ಧಾರಕ್ಕಾಗಿ ಕಲ್ಯಾಣ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯಾದ ಅಂದಿನ ವಿಜಾಪುರ ಜಿಲ್ಲೆಯ ಹಿಪ್ಪರಿಗಿ ಪಾಲ್ ಬಾವಿ ಹಿರಿಯಮಠದ ಶರಣ ದಂಪತಿಗಳಾದ ಶ್ರೀ ವಿರೂಪಾಕ್ಷಯ್ಯ ಹಾಗೂ ನೀಲಮ್ಮನವರ ಉದರದಲ್ಲಿ 1930 ಆಗಸ್ಟ್ 1 ರಂದು ಜನಿಸಿದರು. ಸೌದಿಯ ವಿರಕ್ತ ಮಠದ ಪೂಜ್ಯ ಶ್ರೀ ಸಂಗನ ಬಸವ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ “ಮಹಾಂತ” ರೆಂದು ನಾಮಕರಣಗೊಂಡು ಆ ಮಠದ…