ಬಸವಾದಿ ಶಿವ-ಶರಣರ ದೃಷ್ಟಿಯಲ್ಲಿ ಆಚಾರ-ವಿಚಾರ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಕಲ್ಯಾಣವೆಂಬ ಪ್ರಣತೆಯಲ್ಲಿಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಗೆಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲುತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯಸಂಗನಬಸವಣ್ಣನ ಮಹಿಮೆಯ ನೋಡಾಸಿದ್ಧರಾಮಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059) ಜಗತ್ತಿನ ಶ್ರೇಷ್ಠ ಅನುಭಾವಿಗಳಲ್ಲಿ ಜ್ಞಾನ ವೈರಾಗ್ಯ ಮೂರ್ತಿಗಳಾದ ಅಲ್ಲಮ ಪ್ರಭುದೇವರು ಒಬ್ಬರು. ಪ್ರಭುಗಳ ಶ್ರೇಷ್ಠ ವಚನಗಳಲ್ಲಿ ಒಂದಾದ ಮೇಲಿನ ವಚನ ಆಚಾರ-ವಿಚಾರಗಳಿಗೆ ಕನ್ನಡಿ ಹಿಡಿದಂತಿದೆ. ಮಾನವರ ದೇಹವೆಂಬುದು ಪ್ರಣತೆ ಇದ್ದಂತೆ. ಪ್ರಣತೆ ಒಂದು ಜಡ ವಸ್ತು. ಹಾಗೆಯೇ ಮಾನವ ದೇಹ ಜಡವಾದುದು. ಹಾಗಾದರೆ ಜಡ ದೇಹಕ್ಕೆ ಚೈತನ್ಯ ಬೇಕು.…