ಬಸವಣ್ಣನವರ ವಚನ ವಿಶ್ಲೇಷಣೆ; ಹಂಜರಬಲ್ಲಿತ್ತೆಂದು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,ಎಂದೆಂದೂ ಅಳಿಯೆನೆಂದುಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆಕೂಡಲಸಂಗಮದೇವನಲ್ಲದೆ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-163) ವಚನ ಚಳುವಳಿಯ ತಾತ್ವಿಕ ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ. ಬಸವಣ್ಣನು ಪ್ರಭುವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ. ಭಕ್ತನಾಗಿಯೇ ಬೆರಗನ್ನು ಅವಲೋಕಿಸುತ್ತಾನೆ. ಮಾಯೆಗೆ ವಶವಾದ ಅಜ್ಞಾನಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಅಪ್ಪಿಕೊಳ್ಳುತ್ತಾ “ಹಂಜರ ಬಲ್ಲಿತ್ತೆಂದು ಅಂಜದೆ” ಎಂದು ಅರಿವು ಮತ್ತು ಮಾಯೆಯ ಮಧ್ಯದಲ್ಲಿ ಜೀವಾತ್ಮವೆಂಬ ಗಿಳಿಯು ವಾಸವಾಗಿದೆ. ಈ ದೇಹವು ನಿಸರ್ಗದ ಸಂವೇದನೆಗಳನ್ನು ಅಂತರ್ಗತವಾಗಿ…






Total views : 69793