ಬಸವಣ್ಣನವರ ವಚನ ವಿಶ್ಲೇಷಣೆ |  ಡಾ. ನೀಲಾಂಬಿಕಾ ಪೋಲಿಸ ಪಾಟೀಲ, ಕಲಬುರಗಿ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.ನನೆಯೊಳಗಣ ಪರಿಮಳದಂತಿದ್ದಿತ್ತು.ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು. (ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1) ಬಸವಣ್ಣನವರು ವಿಶ್ವ ಕಂಡ ಮಹಾನ್ ದಾರ್ಶನಿಕರು ಮತ್ತು ಮಹಾನ್ ಮಾನವತಾವಾದಿಗಳು. ಮಾನವ ಇಹ-ಪರ ಎರಡನ್ನೂ ಹೇಗೆ ಸಾಧಿಸಕೊಳ್ಳಬೇಕೆಂಬುದನ್ನು ತಮ್ಮ ನಡೆ ಮತ್ತು ನುಡಿಯಿಂದ ತೋರಿಸಿ ಕೊಟ್ಟವರು. ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗೇವಾಡಿ, ಸಾಧನಾ ಭೂಮಿ ಅದೇ ಜಿಲ್ಲೆಯ ಕೂಡಲ ಸಂಗಮ, ಕಾಯಕ ಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣ. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಅಕ್ಕ ಶರಣೆ ಅಕ್ಕನಾಗಮ್ಮ, ಮಡದಿಯರು ಶರಣಿ ಗಂಗಾಂಬಿಕೆ ಮತ್ತು ಶರಣಿ ನೀಲಾಂಬಿಕಾ,…

0 Comments

ಪರಿಶುದ್ಧ ಅಂತಃಕರಣದ ಶರಣೆ ಸೂಳೆ ಸಂಕವ್ವೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

12 ನೇ ಶತಮಾನದ ಶರಣ ಚಳುವಳಿ ಎಂಬುದು ಜಗತ್ತು ಕಂಡ ಅಪರೂಪದ ಕಾಲಘಟ್ಟ.  ಶತ-ಶತಮಾನಗಳಿಂದಲೂ ವರ್ಗ, ವರ್ಣ, ಲಿಂಗ ಭೇದದಿಂದ ಶೋಷಿತ ಜನಾಂಗದವರು ತತ್ತರಿಸಿ ಹೋಗಿದ್ದರು. ಬಸವ ಬೆಳಗಿನಲ್ಲಿ ಸ್ವಾತಂತ್ರ್ಯದ ಕಿಟಕಿಗಳನ್ನು ತೆರೆದು ಪರಿಶುದ್ಧವಾದ ಗಾಳಿ, ಬೆಳಕು ಪಡೆದು ಸರ್ವ ಸಮಾನವಾದ ಹಕ್ಕುಗಳಿಗೆ ಭಾಜನರಾಗಿದ್ದು ಇಂದಿಗೂ ಒಂದು ಬೆರಗು. ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಹಡಪದ, ಮಾದರ, ಡೋಹರ, ಅಂಬಿಗ, ಮಡಿವಾಳರಂಥ ಕಾಯಕ ಜೀವಿಗಳು ಇಲ್ಲಿ ಸಮಾನ  ಗೌರವವನ್ನು ಕಂಡು ಸ್ವಾಭಿಮಾನದ ಬದುಕಿನ ಭಾಷ್ಯವನ್ನು ಬರೆದರು. ಇನ್ನೂ ಮುಂದುವರೆದು ಕಳ್ಳರು ಸಾರಾಯಿ ಮಾರುವವರು ಕೂಡ ಇಲ್ಲಿ ತಮ್ಮ ಮನಸ್ಸನ್ನು…

0 Comments

ಕಾಯಕ ನಿಷ್ಠೆಯಿಂದ ಅಂತರಂಗದ ಚೈತನ್ಯವನ್ನರಳಿಸಿದ ಶರಣ ಹೂಗಾರ ಮಾದಯ್ಯ ಮತ್ತು ಶರಣೆ ಮಾದೇವಿಯವರು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನಾಂಕಿತ : ವಚನಗಳು ಲಭ್ಯವಾಗಿಲ್ಲ.ಜನ್ಮಸ್ಥಳ    : ತಿಳಿದು ಬಂದಿಲ್ಲ.ಕಾಯಕ    : ಹೂಗಾರ (ಶರಣರ ಮನೆಗಳಿಗೆ ಹೂ-ಪತ್ರೆಗಳನ್ನು ನೀಡುವುದು).ಐಕ್ಯಸ್ಥಳ    : ಬಸವ ಕಲ್ಯಾಣ, ಬೀದರ ಜಿಲ್ಲೆ. ಶರಣರ ನೆನೆದಾರ | ಸರಗೀಯ ಇಟ್ಟಾಂಗ ||ಅರಳು ಮಲ್ಲಿಗೆ | ಮುಡಿದ್ಹಾಂಗ ||ಕಲ್ಯಾಣ ಶರಣರ | ನೆನೆಯೋ ನನ ಮನವೇ || ನಮ್ಮ ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನಪಿಸಿಕೊಂಡು ಹಾಡಿದ್ದಾರೆ. ಮುಗ್ಧ ಜನಪದರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಅನುಭಾವದ ಹಿನ್ನೆಲೆಯಲ್ಲಿ ಮುಗ್ಧ ಶರಣರ ಕುರಿತು ರಚಿಸಿದ ಹಾಡು ಯಾವುದೇ ವಿಚಾರದಲ್ಲಿ ಶಿವನ ಪ್ರಕಾಶದಂತೆ…

0 Comments

ವೀರಗಂಟಿ ಮಡಿವಾಳ ಮಾಚಯ್ಯನವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

12 ನೆಯ ಶತಮಾನದಲ್ಲಿ ಶರಣರು ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಅಂತಹ ಶರಣರ ಅಗ್ರಗಣ್ಯರಲ್ಲಿ ಮಡಿವಾಳ ಮಾಚಯ್ಯನವರು ಒಬ್ಬರು. ಶರಣರ ಸಮುದಾಯದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗಿದವರು. ಮಡಿವಾಳ ಮಾಚಯ್ಯನವರದು ಬಹುಮುಖ ವ್ಯಕ್ತಿತ್ವ. ವೀರಶ್ರೀ, ಜ್ಞಾನಪ್ರಭೆ, ಸತ್ಯ, ನಿಷ್ಠೆ, ನ್ಯಾಯನಿಷ್ಟೂರತೆ, ನಿರಹಂಕಾರ,  ನಿರ್ವಂಚಕತ್ವ ಮುಂತಾದ ಸತ್ವಗಳ ಸಂಕಲನವೇ ಮಡಿವಾಳ ಮಾಚಯ್ಯನವರು. ಸಾಮಾನ್ಯವಾಗಿ ಎಲ್ಲ ಶರಣರು ಮಡಿವಾಳ ಮಾಚಯ್ಯನವರನ್ನು ಮಾಚಿತಂದೆ ಎಂದೇ ಕರೆದಿದ್ದಾರೆ. ಶರಣರಲ್ಲಿ ಪ್ರಮುಖರೆನಿಸಿದ ಮಾಚಿತಂದೆಯವರು  ಬಸವಣ್ಣನವರ ಎಲ್ಲ ಕಾಯಕದಲ್ಲಿಯೂ ಸಹಕಾರ ನೀಡಿದರು. ದಾಸೋಹ, ಕಾಯಕ, ವಚನ ನಿರ್ಮಾಣ, ಸಾಮಾಜಿಕ ಪರಿವರ್ತನೆ…

0 Comments

ಆಧುನಿಕ ವಚನಕಾರರ ಸಾಮಾಜಿಕ ಚಿಂತನೆಗಳು | ಪ್ರೊ. ರಾಜಶೇಖರ ಜಮದಂಡಿ, ಮೈಸೂರು.

ಸಾಮಾನ್ಯವಾಗಿ “ವಚನ” ಎಂಬುದಕ್ಕೆ ಮಾತು, ನುಡಿ, ಪ್ರತಿಜ್ಞೆ, ಭಾಷೆ, ಕೊಟ್ಟಮಾತು, ಉಪದೇಶ, ನುಡಿಗಟ್ಟು, ಸಲಹೆ ಎಂದೆಲ್ಲಾ ಕರೆಯಬಹುದು. ಆಗ 12 ನೇ ಶತಮಾನದ ಬಸವಾದಿ ಶರಣರ ವಚನಗಳು ನೆನಪಾಗುತ್ತವೆ. ಅವರು ಸಮಾಜವನ್ನು ತಿದ್ದುವುದಕ್ಕಾಗಿ ವಚನ ರಚನೆ ಮಾಡಿದರೇ ಹೊರತು ಸಾಹಿತ್ಯಕ್ಕಾಗಿ ಅಲ್ಲ. ಅವರ ವಚನಗಳು ದೇಶಕಾಲಾತೀತವಾಗಿರುವುದಲ್ಲದೆ ಈಚೆಗೆ ಭಾಷಾತೀತವಾಗಿ ದೇಶವಿದೇಶಗಳ ಭಾಷೆಗಳಲ್ಲಿ ಅನುವಾದವಾಗಿ ಎಲ್ಲರೂ ಓದುವಂತೆ ಅನುಕೂಲ ಕಲ್ಪಿಸಿರುವುದು ಸ್ತುತ್ಯಾರ್ಹ. ಇದರ ಜಾಡನ್ನು ಹಿಡಿದು 20 ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.…

0 Comments

ಬಸವ ಪುರಾಣ, ಹನ್ನೆರಡು ಜ್ಯೋತಿರ್ಲಿಂಗ ಮತ್ತು ಬಸವತತ್ವ | ಯೋಗಮಯಿ ಸತ್ಯಮೇಧಾವಿ, ಬೆಳಗಾವಿ.

ಅರಿವರತು ಮರಹು ನಷ್ಟವಾದರೆ ಭಕ್ತಆಚಾರವರತು ಅನಾಚಾರ ನಷ್ಟವಾದರೆ ಜಂಗಮಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿಪರಿಣಾಮವರತು ಪರಮಸುಖಿಯಾದರೆಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯ. ಈ ವಚನವನ್ನು ಸಹಸ್ರ ಬಾರಿ ಬರೆದರೂ ನನಗೆ ಬೇಸರವಿಲ್ಲ, ಕಾರಣ ಅದು ಹುದುಗಿರಿಸಿಕೊಂಡ ಅಪಾರವಾದ ಸಿರಿ ಅಂಥದ್ದು. ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿರುವ ಬಸವ ಪುರಾಣದಲ್ಲಿ ಭಾಗಿಯಾಗಿದ್ದೆ. ಬಸವಣ್ಣ ಮತ್ತು ಪುರಾಣ ಇವೆರಡಕ್ಕೂ ಯಾವ ಸಂಬಂಧ? ಭೀಮ ಕವಿ ಬಿಂಬಿಸಿದ ಪವಾಡಗಳ ಸರಮಾಲೆ ಅದೆಷ್ಟು ವರ್ತಮಾನಕ್ಕೆ ಪ್ರಸ್ತುತ? ಮುಂತಾಗಿ ನನ್ನ ಮನಸ್ಸು ಚಿಂತಿಸತೊಡಗಿತ್ತು. ಹಾಗೆಯೇ ನಾವು…

1 Comment

ಗುಪ್ತಶರಣ ಅಜಗಣ್ಣ ಮತ್ತು ಬೌದ್ಧಿಕ ಪ್ರಖರತೆಯ ಮುಕ್ತಾಯಕ್ಕ: ಅಣ್ಣ-ತಂಗಿಯರ ಸುಜ್ಞಾನದ ಅನುಪಮ ವಚನ ಪಯಣ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.ಇಂತೀ ಐವರ ಕಾರುಣ್ಯಪ್ರಸಾದವ ಕೊಂಡುಬದುಕಿದೆನಯ್ಯಾ ಅಜಗಣ್ಣತಂದೆ.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-396 / ವಚನ ಸಂಖ್ಯೆ-1104) ಶ್ರೇಣೀಕೃತ ವರ್ಗಭೇದ ಮತ್ತು ಲಿಂಗ ಅಸಮಾನತೆ ತಾಂಡವವಾಡುತ್ತಿದ್ದ 12 ನೇ ಶತಮಾನದ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದವರಲ್ಲಿ ಬಸವಾದಿ ಶರಣರು ಪ್ರಮುಖರು. “ಶಬ್ದೋ ಕೋ ಊಂಚಾಯಿ ದೋ … ಆವಾಜ ಕೋ ನಹಿ” ಎನ್ನುವಂತೆ ಇಡೀ ಪ್ರಪಂಚಕ್ಕೆ ತಮ್ಮ ಅಕ್ಷರಗಳ ಅನುಪಮ ಜೋಡಣೆಯೊಂದಿಗೆ ತಮ್ಮ ನಡೆ-ನುಡಿ…

0 Comments

ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನಾಂಕಿತ: ಚಂದೇಶ್ವರಲಿಂಗ.ಜನ್ಮಸ್ಥಳ: ಶಿವಣಗಿ, ಸಿಂಧಗಿ ತಾಲೂಕ, ವಿಜಯಪುರ ಜಿಲ್ಲೆ.ಕಾಯಕ: ಹಗ್ಗ ಮಾಡಿ ಮಾರುವುದು.ಐಕ್ಯಸ್ಥಳ: ನುಲೇನೂರು (ಪದ್ಮಾವತಿ), ಹೊಳಲ್ಕೆರೆ ತಾಲೂಕ, ಚಿತ್ರದುರ್ಗ ಜಿಲ್ಲೆ. ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿಗುರುಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ,ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದುಅದೇತರ ಪೂಜೆ?ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,ಮಾಡಿವಾಳಯ್ಯಾ.(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-450 / ವಚನ ಸಂಖ್ಯೆ-1225) ಇಡೀ ಭಾರತವೇ “One India One Constitution” “ಒಂದೇ ದೇಶ ಒಂದೇ ಸಂವಿಧಾನ” ಎನ್ನುವ ಮಂತ್ರವನ್ನು ಪಠಿಸುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಭಾರತದ ಸಂಕ್ರಮಣ ಕಾಲಘಟ್ಟದಲ್ಲಿ 12 ನೇ ಶತಮಾನದ ಬಸವಾದಿ ಶರಣರನ್ನು ಇಂದು…

1 Comment

ಎಡೆಯೂರು ಸಿದ್ಧಲಿಂಗೇಶ್ವರರ ಬಸವ (ತತ್ವ) ನಿಷ್ಠೆ | ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

12 ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಧರ್ಮಗುರು ಬಸವಣ್ಣನವರ ಬಗ್ಗೆ ಎಡೆಯೂರು ಸಿದ್ಧಲಿಂಗೇಶ್ವರಿಗೆ ಅಪಾರ ಭಕ್ತಿ ಗೌರವ. ತಮ್ಮ ಅನೇಕ ವಚನಗಳಲ್ಲಿ ಅತ್ಯಂತ ವಿನಮ್ರರಾಗಿ ತಮ್ಮ ಬಸವನಿಷ್ಠೆಯನ್ನು ಅಭಿವ್ಯಕ್ತಿಸಿದ್ದಾರೆ. ಈ ಪರಂಪರೆಯನ್ನು ಇನ್ನೂ ಅರ್ಥವತ್ತಾಗಿ ಮುಂದುವರಿಸಿದವರು ಶ್ರೀ ಸಿದ್ಧಲಿಂಗೇಶ್ವರರು. ಸಿದ್ಧಲಿಂಗೇಶ್ವರರ ಶಿಷ್ಯ-ಪ್ರಶಿಷ್ಯ ಪರಂಪರೆಯಲ್ಲಿ ಚನ್ನಂಜೆದೇವ ಎನ್ನುವ ಸಂಕಲನಕಾರ "ಬಸವಸ್ತೋತ್ರದ ವಚನಗಳು" ಎಂಬ ವಿಶಿಷ್ಟ ವಚನ ಸಂಕಲನವನ್ನೇ ರೂಪಿಸಿರುವುದು ಗಮನಾರ್ಹ. ಶ್ರೀ ಸಿದ್ಧಲಿಂಗೇಶ್ವರರಿಗೆ ಲಿಂಗಾಯತ ಧರ್ಮದ ಸಮಗ್ರ ಇತಿಹಾಸ ತಿಳಿದಿತ್ತು. ಹೀಗಾಗಿ ಈ ಧರ್ಮದ ಸ್ಥಾಪಕರು ಯಾರು? ಯಾರಿಂದ ತಾವು ಪ್ರಭಾವಿತರಾದೆವು? ಯಾರ ಸ್ಮರಣೆಯಿಂದ ನಮ್ಮ ಬದುಕು…

0 Comments

ಶರಣೆ ಶಿರೋಮಣಿ ಅಕ್ಕ ನಾಗಮ್ಮನವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಮನದೊಡೆಯ ಮಹಾದೇವ ಮನವ ನೋಡಿಹೆನೆಂದುಮನುಜರ ಕೈಯಿಂದ ಒಂದೊಂದ ನುಡಿಸುವನು.ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನುಒಂದು ಬೊಟ್ಟಿನಲ್ಲಿ ತೊಡೆವನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-798) ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ, ಮನಸ್ಸಿಗೆ ಮಹಾದೇವನೇ ಒಡೆಯ ಅಂತ ಅಕ್ಕನಾಗಮನವರು ಮನಸ್ಸಿನ ಆಗಾಧ ಶಕ್ತಿಯ ಬಗ್ಗೆ ಈ ವಚನದಲ್ಲಿ ಹೇಳಿದ್ದಾರೆ. ಈ ವಚನ ಅವರ ಘನ ವ್ಯಕ್ತಿತ್ವವನ್ನ ಮತ್ತು ಉಚ್ಛ ವಿಚಾರವನ್ನು ತೋರಿಸುವ ಕನ್ನಡಿಯಂತೆ ಇದೆ. ಅಕ್ಕ ನಾಗಮ್ಮನವರದು 12 ನೇ ಶತಮಾನದಲ್ಲಿನ ಶಿವಶರಣೆಯರಲ್ಲಿ ಅಗ್ರಗಣ್ಯ ಹೆಸರು. ಬಸವಾದಿ ಶರಣರ…

0 Comments