ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? / ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.
ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಲಿಂಗವಿಲ್ಲದ ಅಂಗದಂತೆ?ಜಂಗಮವಿಲ್ಲದ ಲಿಂಗದಂತೆ?ರಾಜನಿಲ್ಲದ ರಾಜ್ಯದಂತೆ?ಕರ್ಪೂರದರಿವು ಉರಿದ ಮಹಾ ಮಂಗಳಾರತಿಯಂತೆ? ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಕಟ್ಟುತ್ತಿರಬಹುದಲ್ಲಿ ಸಂಜೆಯಅನುಭವ ಮಂಟಪ ಹೊನ್ನಕಲಶವಿಲ್ಲದೆನಡೆಯುತ್ತಿರಬಹುದಲ್ಲಿ ಮಹಾಮನೆದಾಸೋಹ ನಿಜಭಿತ್ತಿಯಿಲ್ಲದೆ ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಕಲ್ಯಾಣಕೆ ಆತ್ಮಕಳೆಯ ತಂದವನು ಬಸವಚಾಲುಕ್ಯ ಕಲ್ಯಾಣವ ಕೈಲಾಸವಾಗಿಸಿದವನು ಬಸವಭವಿಯೆಂಬ ಮರಳುಗಾಡಿನಲಿ ಭಕ್ತಿಸುಧೆಯ ಹರಿಸಿದವನು ಬಸವಸಮಸಮಾಜದ ಕನಸ ಸಮುದಾಯದ ಸೆರಗಿಗೆ ಕಟ್ಟಿದವನು ಬಸವ ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಬಯಲಿತ್ತು, ಆಲಯವಿತ್ತು ಕಲ್ಯಾಣನಗರಿಯೊಳುಬಯಲು ಆಲಯಗಳ ಭ್ರಮೆಯ ಕಳೆದವನುಆಲಯದೊಳೂ ಇಲ್ಲ, ಬಯಲಲೂ ಇಲ್ಲಬಿಜ್ಜಳನ ಮನ ಮುಂದಣ ಆಸೆ ನುಂಗಿತ್ತೇ…