ಕಡಕೋಳ ಮಡಿವಾಳಪ್ಪನವರ ಕಿರು ಪರಿಚಯ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.
ಅಫ್‌ಜಲಪುರ ತಾಲೂಕಿನ ಚಿಕ್ಕಹಳ್ಳಿ ಬಿದನೂರಿನಲ್ಲಿ ಮಡಿವಾಳಪ್ಪನವರು ಹುಟ್ಟಿದರು. ತಾಯಿ ಗಂಗಮ್ಮ. ಇವರು ತಂದೆಯ ಹೆಸರನ್ನು ಬಚ್ಚಿಟ್ಟರು. ಮಡಿವಾಳಪ್ಪನವರಿಗೆ ಇದು ಒಂದು ದೊಡ್ಡ ಪ್ರಶ್ನೆ ಆಯ್ತು. ಇದೆ ಮುಂದೆ ಅವರಿಗೆ ಸತ್ವ ಪರೀಕ್ಷೆ ಆಗಿ ಪರಿಣಮಿಸಿತು. ಮಡಿವಾಳಪ್ಪನವರು ಬಾಲಕರಾಗಿದ್ದಾಗ ಆಟ ಆಡುವಾಗ ಒಬ್ಬ ಹೆಣ್ಣು ಮಗಳಿಗೆ ಚೆಂಡು ಬಡಿದಿದ್ದಕ್ಕೆ “ಹಾಟ್ಯಾ ಇನ್ನ ತಂದಿ ಇದ್ರ ಎಷ್ಟು ಮೆರೀತಿದ್ದಿಯೋ ಏನೋ” ಅಂತ ಧ್ವನಿ ಎತ್ತರಿಸಿ ಒದರಾಡಿದಳು. ಆಕಸ್ಮಿಕವಾಗಿ ಮಡಿವಾಳಪ್ಪನವರ ಮೇಲೆ ಆದ ಈ ಆಘಾತದಿಂದ ಅವರು ಘಾಸಿಗೊಂಡರೂ ಅವರಲ್ಲಿನ ಚೈತನ್ಯ ಜಾಗೃತವಾಯಿತು. ಆಗ ಕರುಣಿಯಾಗಿ ಮಾರ್ಗ ತೋರಿದವರು ಬಿದನೂರು ಮಠದ…





Total views : 72882