ಹೌದಪ್ಪಾ ಹೌದೋ ನೀನೇ ದೇವರೋ / ಡಾ. ಬಸವರಾಜ ಸಾದರ, ಬೆಂಗಳೂರು.
ದೇವರನ್ನು ಕುರಿತ ನಮ್ಮ ನಂಬಿಕೆ ಮತ್ತು ಪರಿಕಲ್ಪನೆಗಳು ವೈವಿಧ್ಯಪೂರ್ಣವಾಗಿರುವಂತೆ ವಿಚಿತ್ರತರವೂ ಆಗಿವೆ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ಅವನನ್ನು ಕಾಣುವುದು ಹೇಗೆ? ಎಂಬ ಅಸಂಖ್ಯ ಪ್ರಶ್ನೆಗಳಿಗೆ ತರಹೇವಾರಿ ಉತ್ತರಗಳು ಹೊರಡುತ್ತವೆ. ಸಾಮಾನ್ಯವಾಗಿ ಮನುಷ್ಯನು ದೇವರನ್ನು ತನಗಿಂತ ಭಿನ್ನವಾದ ಅವತಾರ, ಸ್ವರೂಪ ಮತ್ತು ಸ್ಥಳಗಳಲ್ಲಿ ಕಾಣುವುದೇ ಹೆಚ್ಚು. ಈ ಕಾರಣಗಳಿಂದಾಗಿಯೇ ದೇವರಿಗೆ ತರತರದ ರೂಪಗಳನ್ನು ಆರೋಪಿಸಿ, ಪೋಷಾಕುಗಳನ್ನು ತೊಡಿಸಿ, ಗುಡಿ, ಗುಂಡಾರ, ದೇವಾಲಯ, ಬಸದಿ, ಚರ್ಚುಗಳಂಥ ಇಮಾರತುಗಳನ್ನು ನಿರ್ಮಿಸಿ, ಅದರಲ್ಲಿ ಆತನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಇವೆಲ್ಲ ನಂಬಿಕೆಗಳ ಹಿಂದೆ ದೇವರು ನಮ್ಮಿಂದ ಅನ್ಯ ಮತ್ತು…