ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನ ವಿಶ್ಲೇಷಣೆ: ಉಸುರಿನ ಪರಿಮಳವಿರಲು / ಶ್ರೀಮತಿ. ಸವಿತಾ ಮಾಟೂರ, ಇಳಕಲ್ಲ.
ಉಸುರಿನ ಪರಿಮಳವಿರಲುಕುಸುಮದ ಹಂಗೇಕಯ್ಯಾ?ಕ್ಷಮೆ ದಮೆ ಶಾಂತಿ ಸೈರಣೆ ಇರಲುಸಮಾಧಿಯ ಹಂಗೆಕಯ್ಯಾ?ಲೋಕವೆ ತಾನಾದ ಬಳಿಕಏಕಾಂತದ ಹಂಗೆಕಯ್ಯಾ ಚನ್ನಮಲ್ಲಿಕಾರ್ಜುನಯ್ಯಾ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-796 / ವಚನ ಸಂಖ್ಯೆ-84) ವೈರಾಗ್ಯ ನಿಧಿ ಅಕ್ಕಮಹಾದೇವಿಯವರು ದಿಟ್ಟ ನಿಲುವಿನ, ಸಾತ್ವಿಕ ಕಳೆಯ, ಒಳ-ಹೊರಗೊಂದಾಗಿ ನಿಂತ ಭವ್ಯ ತೇಜೋರೂಪ. ಇಡಿ ಜಗತ್ತಿನಲ್ಲಿಯೆ ಇವರಿಗೆ ದೃಷ್ಟಾಂತ ಕೊಡಲು ಮತ್ತೊಬ್ಬರಿಲ್ಲವೆಂದರೆ ತಪ್ಪಗಲಾರದು. ಅಂತಹ ಅದ್ಬುತ ವ್ಯಕ್ತಿತ್ವದ ಆಧ್ಯಾತ್ಮದ ಉನ್ನತ ಶಿಖರವೆರಿದ ವೀರ ವಿರಾಗಿನಿ ಅಕ್ಕನವರ ಈ ವಚನ ಅವಳ ಅಂತರಂಗ ಬಹಿರಂಗ ಪರಿಶುದ್ಧತೆಯ ಪ್ರತಿಕವಾಗಿದೆ. “ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ”ಉಸುರಿಗೆ ಪರಿಮಳ ಬರಲು ಅಂತರಂಗ…