ಶ್ರಾವಣ ವಚನ ಚಿಂತನ-05: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಜಲದೊಳಗಿರ್ದ ಕಿಚ್ಚು ಜಲವ ಸುಡದೆಜಲವು ತಾನಾಗಿಯೆ ಇದ್ದಿತ್ತು ನೋಡಾನೆಲೆಯನರಿದು ನೋಡಿಹೆನೆಂದಡೆ,ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ ,ನೆಲೆಗಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆವತಾನಾಗಿರ್ದು - ಮತ್ತೆ ತಲೆದೋರದಿಪ್ಪುದುಗುಹಾಎಶ್ವರಾ ನಿಮ್ಮಜಿಲುವು ನೋಡಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಈ ವಚನ ಲಿಂಗದ ಇರುವಿಕೆಯ ಸ್ವರೂಪವನ್ನು ಕುರಿತು ಅಲ್ಲಮರು ಚರ್ಚಿಸಿದ ಒಂದು ವಚನ. ದೈವದ ಇರುವಿಕೆಯನ್ನು ಕುರಿತು ವ್ಯೋಮಕಾಯ ಅಲ್ಲಮ ಪ್ರಭುಗಳು ಮಾಡಿದ ಚಿಂತನೆ ಅಗಮ್ಯವಾದುದು. ಒಟ್ಟಾರೆ ಶರಣರ ಚಿಂತನೆಗೆ ಅಡಿಪಾಯವಾದುದು. ನಮ್ಮ ಹೊರಗಿನ ಕಣ್ಣಿಗೆ ಪರಮನ ಇರವು ಕಾಣಿಸಲಾರದು. ಅದು ಜಲದೊಳಗನ ಪಾವಕನಂತೆ. ಅಗ್ನಿಯೊಳಗಣ ಸುಡುವಿಕೆಯಂತೆ.…