ವಚನ ಸಾಹಿತ್ಯದಲ್ಲಿ ದಯಾಪರತೆ ಚಿಂತನೆಗಳು / ಡಾ. ಪೂರ್ಣಿಮಾ ಎಸ್, ಬೆಂಗಳೂರು.
ಸಮಾಜದ ಏಳಿಗೆಗಾಗಿ ಪ್ರತಿಯೊಂದು ಜೀವ-ಜೀವಿಯ ಕಲ್ಯಾಣಕ್ಕಾಗಿ ಕಾಲಾನುಕ್ರಮದಲ್ಲಿ ಹಲವಾರು ಧರ್ಮಗಳು ಉದಯವಾದವು. ಹಾಗೆ ಉದಯವಾದ ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಬಸವಾದಿ ಶರಣ ಧರ್ಮವೂ ಒಂದು. ದಯವಿಲ್ಲದ ಧರ್ಮವದೇವುದಯ್ಯಾ?ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ,ದಯವೇ ಧರ್ಮದ ಮೂಲವಯ್ಯ,ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-67 / ವಚನ ಸಂಖ್ಯೆ-247) ಎಂಬ ಬಸವಣನವರ ದಿವ್ಯ ಸಂದೇಶವನ್ನು ಹಾಗೂ ಜಗತ್ತಿನಲ್ಲಿರುವ ಯಾವುದೇ ಸೂಕ್ಷ್ಮಾತಿ ಸೂಕ್ಷ್ಮ ಜೀವಕ್ಕೂ ಕೂಡ ಹಿಂಸೆಯಾಗಬಾರದೆಂಬ ಉದ್ದೇಶದಿಂದ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣನವರ ಧ್ಯೇಯೋದ್ದೇಶದ ಹಾದಿಯಲ್ಲಿ ಎಲ್ಲ ಶಿವಶರಣರು ಸಹ ದಯೆ ಕರುಣೆ ವಾತ್ಯಲ್ಯಗಳನ್ನು ಅಳವಡಿಸಿಕೊಂಡು ಅನುಸರಿಸಿರುವುದನ್ನು…