ಶ್ರಾವಣ ವಚನ ಚಿಂತನ-03: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.ಗುರು ಹಿರಿಯರು ತೋರಿದ ಉಪದೇಶದಿಂದ;ವಾಗದ್ವೈತವನೆ ಕಲಿತು ವಾದಿಪರಲ್ಲದೆ, ಆಗು-ಹೋಗೆಂಬುದನರಿಯರು.ಭಕ್ತಿಯನರಿಯರು ಮುಕ್ತಿಯನರಿಯರು,ಮತ್ತೂ ವಾದಕೆಳಸುವರು,ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-69) ಅಕ್ಷರ ಕಲಿಕೆಯ ಮಿತಿಯನ್ನು ಅಲ್ಲಮಪ್ರಭುಗಳು ಹೇಳುವ ರೀತಿ ಅರ್ಥಪೂರ್ಣವಾಗಿದೆ. ವಿದ್ಯೆ ವಿನಯವನ್ನು ಕೊಡಬೇಕು. ನಮ್ಮ ಹಿರಿಯರೇನೋ "ವಿದ್ಯಾ ದದಾತಿ ವಿನಯಂ" ಎಂದಿದ್ದರು. ಆದರೆ ವಿದ್ಯೆ ಪಡೆದ ಕೆಲವರು ವಿದ್ಯೆಗೆ ವಿನಯ ವೇಭೂಷಣ ಎಂಬುದನ್ನರಿಯದೆ ತಾವು ಕಲಿತವರೆಂಬ ಅಹಮ್ಮಿನಲ್ಲಿ ತಿರುಗುತ್ತಿರುವ ಸಂಗತಿಗಳು ಆಗಲೂ ಇದ್ದುವೆಂದು ಕಾಣಿಸುತ್ತದೆ. ಆದ್ದರಿಂದಲೇ ಚಿಂತಕರಾದ ಅಲ್ಲಮಪ್ರಭುಗಳು ವಿದ್ಯೆಯ ಮಿತಿಗಳನ್ನು ಒಂದು…




Total views : 51421