ಅಲ್ಲಮರ ವಚನಗಳಲ್ಲಿ “ಲಿಂಗಾಚಾರ” / ಸುನಿತಾ ಮೂರಶಿಳ್ಳಿ, ಧಾರವಾಡ.
ಅನಾದಿ ಕಾಲದಿಂದಲೂ ಲಿಂಗವೆಂಬುದು ಮೂರ್ತರೂಪದಲ್ಲಿ ಸ್ಥಾವರಲಿಂಗವಾಗಿ ಚರಲಿಂಗವಾಗಿ ಪೂಜಿಸುತ್ತಾ ಬಂದಿದೆ. ಆದರೆ ಲಿಂಗವೆಂಬುದನ್ನು ಚೈತನ್ಯದ ಕುರುಹಾಗಿ ಸಮಷ್ಟಿಯ ಕುರುಹಾಗಿ ಇಷ್ಟಲಿಂಗವೆಂದು ಕರಸ್ಥಲಕ್ಕೆ ತಂದುಕೊಟ್ಟವರು ಬಸವಣ್ಣನವರು. ಲಿಂಗವೇ ಬಸವ ಧರ್ಮದ ಬುನಾದಿ. ಸರ್ವಸಮಾನತೆಯ ಪಾತಳಿಯ ಮೇಲೆ ನಿಂತು ಎಲ್ಲ ಅಸಮಾನತೆಗಳನ್ನು ತೊಡೆದು ಹಾಕಿದ ಈ ಲಿಂಗದ ಪರಿಕಲ್ಪನೆ ವ್ಯಷ್ಟಿ ಹಾಗೂ ಸಮಷ್ಟಿಗಳ ವಿಕಾಸದ ಮಧ್ಯದ ಸೇತುವೆ ಆಗಿದೆ. ಅಂಗದಿಂದ ಲಿಂಗವಾಗುವ ಪಯಣವೇ ಬಯಲ ಪಯಣ, ಲಿಂಗ ಪಯಣ, ಸತ್ಯದ ಗಂತವ್ಯ. ವ್ಯಕ್ತಿಯ ಆತ್ಮೋನ್ನತಿಗಾಗಿ ತನ್ಮೂಲಕ ಜಗದ ಒಳಿತಿಗೆ ಹಾಕಿದ ನೈತಿಕ ಚೌಕಟ್ಟುಗಳೇ ಪಂಚಾಚಾರಗಳು. ಅದರಲ್ಲಿ ಲಿಂಗಾಚಾರವು ಸರ್ವಾಂಗೀಣ ಅಭಿವೃದ್ಧಿಯ…