ಸಿದ್ಧರಾಮೇಶ್ವರರ ವಚನಗಳಲ್ಲಿ ಸದಾಚಾರ/ಶಿವಶರಣಪ್ಪ ಮದ್ದೂರ್,ಬೆಂಗಳೂರು
ಬಸವ ಪೂರ್ವದಲ್ಲಿ ಕೇವಲ ಜ್ಞಾನಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿತ್ತು. ಜ್ಞಾನ ಮತ್ತು ಕ್ರಿಯೆ ಎರಡಕ್ಕೂ ಸಮಾನ ಪ್ರಾಮುಖ್ಯತೆ ಬಂದದ್ದು ಬಸವಣ್ಣವರಿಂದ. ಏನಯ್ಯಾ ವಿಪ್ರರು ನುಡಿದಂತೆ ನಡೆಯರು ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ನೆಂತೊಲಿವನನಯ್ಯ ಎಂದು ನುಡಿ(ಜ್ಞಾನ) ಮತ್ತು ನಡೆ (ಕ್ರಿಯೆ) ಎರಡಕ್ಕೂ ಸಮತ್ವವನ್ನು ತಂದು ಕೊಟ್ಟರು. ಜ್ಞಾನವು ಸತ್ಯದ ಅರಿವಾದರೆ ಕ್ರಿಯೆಯು ಸದಾಚಾರ (ಸತ್ಯದ-ಆಚಾರ) ವಾಯಿತು. ಜ್ಞಾನವೇ ಕ್ರಿಯೆ, ಕ್ರಿಯೆಯೇ ಜ್ಞಾನ ಎನ್ನುವಷ್ಟರ ಮಟ್ಟಿಗೆ ಸಮನ್ವಯವಾಯಿತು. ಅಲ್ಲಮರೊಂದಿಗೆ ಕಲ್ಯಾಣಕ್ಕೆ ಬಂದ ಸೊನ್ನಲಿಗೆ ಸಿದ್ಧರಾಮರು, ಅರಿವು ಮತ್ತು ಆಚಾರದ ಸಮನ್ವಯತೆಯ ಮಹತ್ವವನ್ನು ಕಂಡು ಸದಾಚಾರಿಗಳಾದರು.…