ಆಧುನಿಕ ವಚನಕಾರರ ಸಾಮಾಜಿಕ ಚಿಂತನೆಗಳು | ಪ್ರೊ. ರಾಜಶೇಖರ ಜಮದಂಡಿ, ಮೈಸೂರು.
ಸಾಮಾನ್ಯವಾಗಿ “ವಚನ” ಎಂಬುದಕ್ಕೆ ಮಾತು, ನುಡಿ, ಪ್ರತಿಜ್ಞೆ, ಭಾಷೆ, ಕೊಟ್ಟಮಾತು, ಉಪದೇಶ, ನುಡಿಗಟ್ಟು, ಸಲಹೆ ಎಂದೆಲ್ಲಾ ಕರೆಯಬಹುದು. ಆಗ 12 ನೇ ಶತಮಾನದ ಬಸವಾದಿ ಶರಣರ ವಚನಗಳು ನೆನಪಾಗುತ್ತವೆ. ಅವರು ಸಮಾಜವನ್ನು ತಿದ್ದುವುದಕ್ಕಾಗಿ ವಚನ ರಚನೆ ಮಾಡಿದರೇ ಹೊರತು ಸಾಹಿತ್ಯಕ್ಕಾಗಿ ಅಲ್ಲ. ಅವರ ವಚನಗಳು ದೇಶಕಾಲಾತೀತವಾಗಿರುವುದಲ್ಲದೆ ಈಚೆಗೆ ಭಾಷಾತೀತವಾಗಿ ದೇಶವಿದೇಶಗಳ ಭಾಷೆಗಳಲ್ಲಿ ಅನುವಾದವಾಗಿ ಎಲ್ಲರೂ ಓದುವಂತೆ ಅನುಕೂಲ ಕಲ್ಪಿಸಿರುವುದು ಸ್ತುತ್ಯಾರ್ಹ. ಇದರ ಜಾಡನ್ನು ಹಿಡಿದು 20 ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.…