ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಉಳಿಯುಮೇಶ್ವರ ಚಿಕ್ಕಯ್ಯ, ಉಳಿಯುಮೇಶ್ವರ ಚಿಕ್ಕಣ್ಣ ಎಂಬ ಹೆಸರುಗಳಿಂದ ಗುರುತಿಸಿಕೊಂಡ ಇವರು 12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಕಾಲೀನ ಶರಣರಾಗಿದ್ದಾರೆ. ಇವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ “ದೇವರಗುಡಿ” ಎಂಬ ಗ್ರಾಮದವರು. ಇಲ್ಲಿ ದೊರೆತಿರುವ ಒಂದು ಶಾಸನದಲ್ಲಿ 5 ದತ್ತಿಗಳ ಮಾಹಿತಿ ಇದ್ದು ಅದರಲ್ಲಿ 3, 4, 5 ದತ್ತಿಗಳಲ್ಲಿ ಈ ಶರಣರ ಕುರಿತು ಉಲ್ಲೇಖವಿದೆ. 1202 ರ ಶಾಸನವು ಇವರ ಕುರಿತು ಉಲ್ಲೇಖಿಸಿದರೆ 1279 ನೇ ಇಸ್ವಿಯ ಕಲ್ಲೇದೇವರಪುರ ಶಾಸನದಲ್ಲಿ ಅನೇಕ ಶರಣರ ಹೆಸರುಗಳ ಮಧ್ಯದಲ್ಲಿ ಇವರ ಹೆಸರು ಇರುವುದು ಕಂಡುಬಂದಿದೆ. ಕಾಳಾಮುಖ ಆಚಾರ್ಯರೂ,…

1 Comment

ಬಸವಸಿದ್ಧಾಂತ ಮತ್ತು ಆಧುನಿಕ ರಿ-ಎಂಜಿನಿಯರಿಂಗ್ ತತ್ವಗಳು: ಒಂದು ತೌಲನಿಕ ವಿಶ್ಲೇಷಣೆ | ಪ್ರೊ. ಎಸ್.‌ ಜಿ. ಶಿವಶಂಕರ, ಬೆಂಗಳೂರು.

ಪೀಠಿಕೆ: ಬದಲಾವಣೆಯ ಅನಿವಾರ್ಯತೆ ಮತ್ತು ಎರಡು ಯುಗಗಳುಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಹರಿಕಾರ ಮಹಾತ್ಮ ಬಸವೇಶ್ವರರ ಸಾಮಾಜೋಧಾರ್ಮಿಕ ಕ್ರಾಂತಿಕಾರಕ ತತ್ವಗಳು ಮತ್ತು ಆಧುನಿಕ ಜಗತ್ತಿನ ನಿರ್ವಹಣಾ ತಜ್ಞರಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರ 'ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್' (BPR) ಸಿದ್ಧಾಂತವನ್ನು ತೌಲನಿಕವಾಗಿ ವಿಶ್ಲೇಷಿಸುವ ಲೇಖನ. ಲೇಖನ:ವ್ಯವಸ್ಥೆಯೊಂದು ಜಡ್ಡುಗಟ್ಟಿದಾಗ, ಆಚರಣೆಗಳು ಕರಾಳ ಎನ್ನಿಸಿ, ಸಮಾಜದ ಕೆಳವರ್ಗದ ಜನರ ಶೋಷಣೆ ತಾರಕಕ್ಕೇರಿದಾಗ ಅವುಗಳನ್ನು ಮರುರೂಪಿಸುವ ಕ್ರಾಂತಿಕಾರಿ ನಾಯಕರು ಉದಯಿಸುತ್ತಾರೆ. ಇಂತಹ ಮಹತ್ತರ ಕ್ರಾಂತಿಕಾರಕ ಬದಲಾವಣೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ತರಗಳಲ್ಲಿ ತಂದವರು ಹನ್ನೆರಡನೇ ಶತಮಾನದ ಕ್ರಾಂತಿಕಾರಿ…

0 Comments

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಫ. ಗು ಹಳಕಟ್ಟಿ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಡಾ. ಫ. ಗು ಹಳಕಟ್ಟಿ ಅವರು ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂದೆ ಪ್ರಸಿದ್ಧಿ ಪಡೆದವರು. ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನಗಳನ್ನ ಶೋಧಿಸಿ, ಅನ್ವೇಶಿಸಿ, ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದರು. ಈ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೊಲೆಗಳನ್ನು ಹುಡುಕಿ ತಂದು ವಚನಗಳನ್ನ ಮುದ್ರಿಸಿದರು. ಕನ್ನಡದ ಕಣ್ವ ಶ್ರೀ. ಬಿ. ಎಂ. ಶ್ರೀಕಂಠಯ್ಯನವರಿಂದ “ವಚನ ಗುಮ್ಮಟ” ಎಂದು ಕರೆಸಿಕೊಂಡ ರಾವ್‌ ಬಹಾದ್ದೂರ್‌ ಡಾ. ಫ. ಗು ಹಳಕಟ್ಟೆಯವರು ಜನಿಸಿದ್ದು 1880 ರ ಜುಲೈ 2 ರಂದು,…

0 Comments

ನೀರಲಕೇರಿ ಬಸವಲಿಂಗ ಶಿವಯೋಗಿಗಳು | ಡಾ. ಕೆ ಶಶಿಕಾಂತ, ಲಿಂಗಸೂಗೂರು.

ಕನ್ನಡವು ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆಯ ಅನೇಕ ವಿಧಗಳಿಗೆ ಮಾತೃಭೂಮಿಯಾಗಿದೆ. ಕಲೆ, ವಿಜ್ಞಾನ, ಸಾಹಿತ್ಯ, ಸಂಗೀತ, ಆಧ್ಯಾತ್ಮ, ಧರ್ಮ, ಸಂಸ್ಕೃತಿಯೇ ಮೊದಲಾದವುಗಳಿಗೆ ತಾಯಿ ಬೇರು ಈ ಕನ್ನಡವೇ ಆಗಿದೆ. ಇಂಥ ವಿವಿಧ ಪರಂಪರೆಯಲ್ಲಿ ವಿಶ್ವಕ್ಕೆ ಶ್ರೇಷ್ಠ ಎನಿಸಿದೆ. 12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಆಗಿ ಹೋದ ಬಸವಾದಿ ಶರಣ ಶರಣೆಯರ  ಪ್ರಣೀತವಾದ ವಚನ ಸಾಹಿತ್ಯ ಮಿಗಿಲಾದುದಾಗಿದೆ. ಜಾಗತಿಕವಾದ ತತ್ವಜ್ಞಾನ ಮತ್ತು ಸಾಹಿತ್ಯ ಪರಂಪರೆಯಲ್ಲಿ ಈ 'ವಚನ' ಸಾಹಿತ್ಯವು ಬಹುಮುಖಿ ಕಾರಣವಾಗಿ ಕನ್ನಡದ ಅಸ್ಮಿತೆಯಾಗಿದೆ. 'ವಚನ' ಎಂದರೆ ಸಾಮಾನ್ಯ ಅರ್ಥದಲ್ಲಿ 'ಮಾತು', 'ಪ್ರಮಾಣ' ಎಂದರ್ಥ. ಆದರೆ ಇದನ್ನೊಂದು 'ಸಾಹಿತ್ಯ'…

0 Comments

ವಿಶ್ವಗುರು ಬಸವಣ್ಣನವರ ವಚನ ವಿಶ್ಲೇಷಣೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿ‌ ಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ-ಒಂದು/2021/ಪುಟ. ಸಂ-36/ವಚನ. ಸಂ. 124) 12 ನೇ  ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು ತಮ್ಮದಾಗಿಸಿಕೊಂಡರು. ಲೋಕವೆಂದಾಗ ಸಮಾಜ ಮತ್ತು ಜನರ ನಡುವಿನ ಸಂಬಂಧ. ಸಾಮಾಜಿಕ ಲೋಕದ ಜನರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಅವಲೋಕನ ಬಹಳ ಮುಖ್ಯವಾಗುತ್ತದೆ.…

0 Comments

ಶರಣ ಮಾದಾರ ಧೂಳಯ್ಯನವರ ವಚನ ವಿಶ್ಲೇಷಣೆ | ಡಾ. ಶಿವಲೀಲಾ ಬಸವರಾಜ, ಕಾಳಗಿ.

12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನೆಲೆಸಿದ್ದ 770 ಅಮರಗಣಂಗಳಲ್ಲಿ ಮಾದಾರ ಧೂಳಯ್ಯನವರು ಒಬ್ಬರಾಗಿದ್ದಾರೆ. ಇವರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿನ ಜೀವನದ ಸ್ಪಷ್ಟವಾದ ಮಾಹಿತಿ ದೊರೆತಿರುವುದಿಲ್ಲ. ಸುಪ್ರಸಿದ್ಧ ಕವಿಗಳಾದ ಹರಿಹರ, ಭೀಮಕವಿ, ಸಿದ್ಧನಂಜೇಶ, ಷಡಕ್ಷರದೇವ ಮುಂತಾದವರು. ಮಾದಾರ ಧೂಳಯ್ಯನವರು ಒಬ್ಬ ಮಹಾನ ಕಾಯಕ ಶರಣ ಜೀವಿ ಎಂಬುದನ್ನು ಉಲ್ಲೇಖಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಇವರ ಅಂಗೋದರದ ಮಹಾತ್ಮೆಯನ್ನು ಪ್ರಾಸಂಗಿಕವಾಗಿ ಒತ್ತಿ ಹೇಳಿದ್ದಾರೆ. ತ. ಸು. ಶಾಮರಾಯರ ಶಿವಶರಣರ ಕಥಾರತ್ನಕೋಶದಲ್ಲಿ ಮಾದಾರ ಧೂಳಯ್ಯನವರ ಜೀವನದ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಶರಣ ಧೂಳಯ್ಯನವರು ಪ್ರಾಂಜಲ ಮನಸ್ಸಿನ ಸತ್ಯ, ಶುದ್ಧ ಕಾಯಕಜೀವಿ. ಚಪ್ಪಲಿ ಹೊಲೆಯುವ ಕಾಯಕವನ್ನು…

0 Comments

ಬಸವಣ್ಣನವರ ವಚನಗಳಲ್ಲಿ ಭಾಷೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

 ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನದ ಸೃಜನ ಅನುಭಾವದ ಭಾಷೆಯಾಗಿ ನಮ್ಮನ್ನು ಆಕರ್ಷಿಸುತ್ತದೆ. ಸಂಸ್ಕೃತ ಭಾಷೆಯ ಭೂಯಿಷ್ಟತೆಯನ್ನು ನಿರಾಕರಿಸಿ ಸರಳ ಸುಲಲಿತ ಹೊಸಗನ್ನಡಕ್ಕೆ ಸಮೀಪವಾಗುವ ದೇಸಿ ಅಧ್ಯಾತ್ಮದ ಪಡೆ ನುಡಿಗಳಾಗಿ ಪ್ರತಿಕ್ರಿಸುಯಿಸುತ್ತವೆ. ಅಕ್ಷರ ಸಂಸ್ಕೃತಿಯನ್ನು  ಅಸ್ತ್ರವಾಗಿಸಿಕೊಂಡದ್ದೇ ಒಂದು ರೋಮಾಂಚನ. ಆಸ್ಥಾನದ ಪಂಡಿತರಿಗೆ ಭಾಷೆಯ ಮೂಲಕ ಕ್ರಾಂತಿಯನ್ನು ಸೃಷ್ಟಿಸಿ ಪ್ರತ್ಯುತ್ತರ ನೀಡಿದವರು ವಚನಕಾರರು. ಆಡು ನುಡಿಯ ದೇಸಿ ಭಾಷೆ ಎಂದರೆ ಮೈಲಿಗೆಯಾಗಿ ಕಂಡಂತಹ ಆ ಕಾಲಘಟ್ಟದಲ್ಲಿ  ಬಸವಣ್ಣನವರ ನಾಯಕತ್ವತ್ವದಲ್ಲಿ ಹಲವಾರು ಶರಣರು ವಚನಗಳನ್ನು ರಚಿಸಿ ಯಶಸ್ವಿಯಾದರು.  12ನೇ ಶತಮಾನದ ಅನುಭಾವಿ ಕವಿ ದಾರ್ಶನಿಕ ಶಿಕ್ಷಣ ತಜ್ಞರೆಂದೇ ಚಿರಪರಿಚಿತ ನಮಗೆ. ಬಸವಣ್ಣನವರ ಭಾಷಾ ಸೌಂದರ್ಯವನ್ನು ಚರ್ಚೆಗೆತ್ತಿಕೊಳ್ಳುವುದು ಸವಾಲಿನ ಕೆಲಸ. ಅವರ ವಚನಗಳ ಪ್ರವೇಶ…

0 Comments

ಕಾಯಕಯೋಗಿ ನುಲಿಯ ಚಂದಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದುಅದೇತರ ಪೂಜೆ?ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,ಮಡಿವಾಳಯ್ಯಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-450/ವಚನ ಸಂಖ್ಯೆ-1285) “ಕಾಯಕವೇ ಶಿವಸಾಧನೆ, ದುಡಿಮೆಯೇ ದಾಸೋಹ” ಎಂಬ ತತ್ವವನ್ನು ತಮ್ಮ ಜೀವನ ಮತ್ತು ವಚನಗಳ ಮೂಲಕ ಬದುಕಿದ ಶ್ರೇಷ್ಠ ಶಿವಶರಣರು ನುಲಿಯ ಚಂದಯ್ಯನವರು. ನುಲಿಯ ಚಂದಯ್ಯ ಅವರು ಬಸವಣ್ಣನವರ ಹಿರಿಯ ಸಮಕಾಲೀನ ಶರಣರಲ್ಲಿ ಒಬ್ಬರು. ಕ್ರಿ. ಶ. 1107 ರ ಸುಮಾರಿಗೆ ಇಂದಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಜನಿಸಿದರು. ಅವರು ಹಗ್ಗ ಹೊಸೆಯುವ ಕಾಯಕದಲ್ಲಿ ತೊಡಗಿದ್ದ ಕೊರವ (ನುಲಿ) ಸಮುದಾಯಕ್ಕೆ…

0 Comments

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಗುರುವೆಂಬೆನೆ ಹಲಬರ ಮಗ,ಲಿಂಗವೆಂಬೆನೆ ಕಲುಕುಟಿಕನ ಮಗ,ಪ್ರಸಾದವೆಂಬೆನೆ ಒಕ್ಕಲಿಗನ ಮಗ,ಪಾದೋದಕವೆಂಬೆನೆ ದೇವೇಂದ್ರನ ಮಗ,ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ,ತನ್ನೊಳಗ ನೋಡೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-55/ವಚನ ಸಂಖ್ಯೆ-137) ದೋಣಿಯಿಂದ ನದಿಯನ್ನು ದಾಟಿಸಿದ ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಅಜ್ಞಾನ ಮತ್ತು ಅಂಧಶ್ರದ್ಧೆಯ ಸಾಗರದಿಂದ ಜನರನ್ನು ದಾಟಿಸಲು ಪ್ರಯತ್ನಿಸಿದ ಮಹಾನ್ ಶಿವಶರಣರು. ಶರಣ ಅಂಬಿಗರ ಚೌಡಯ್ಯನವರು 12 ನೇ ಶತಮಾನದ ಪ್ರಮುಖ ಶಿವಶರಣರು ಹಾಗೂ ವಚನಕಾರರು. ಮೈಲಾರ ಶಾಸನದ ಪ್ರಕಾರ ಮತ್ತು ಶಿಶುನಾಳ ಶರೀಫರು ಬರೆದಂಥ “ಶಿವದೇವ ವಿಜಯಂ” ಎಂಬ ಗ್ರಂಥದಲ್ಲಿ ಉಲ್ಲೇಖವಾದಂತೆ…

0 Comments

ಶರಣ ಗುಪ್ತ ಮಂಚಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆಅಳಿವು ಉಳಿವಲ್ಲದೆ,ಉಳಿಗೆ ಹೊರಗಾದ ಅಳಿಯದವನನರಿಯಾ,ನಾರಾಯಣಪ್ರಿಯ ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-119/ವಚನ ಸಂಖ್ಯೆ-298) ಶರಣ ಗುಪ್ತ ಮಂಚಣ್ಣನವರು 12 ನೇ ಶತಮಾನದ ಪ್ರಮುಖ ಶಿವಶರಣರು ಮತ್ತು ವಚನಕಾರರು. ಇವರು ಬಸವಣ್ಣನವರ ಚಿಂತನೆಗಳನ್ನು ಅನುಸರಿಸಿದರೂ ತಮ್ಮನ್ನು ಬಹಿರಂಗವಾಗಿ ಮುಂದಿರಿಸದೆ, ಸರಳ ಮತ್ತು ನೇರವಾದ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಇವರು ಬಿಜ್ಜಳ ರಾಜನ ಕೋಶಾಗಾರದಲ್ಲಿ ಕರಣಿಕ (ಲೆಕ್ಕಿಗ) ಆಗಿ ಕೆಲಸ ಮಾಡುತ್ತಿದ್ದರು. ಇವರು “ನಾರಾಯಣಪ್ರಿಯ ರಾಮನಾಥ” ವಚನಾಂಕಿತದಿಂದ ಬರೆದ ಸುಮಾರು 100 ವಚನಗಳು ಇಲ್ಲಿಯವರೆಗೆ ಲಭ್ಯವಿವೆ. "ದೇವರ ಭಕ್ತಿ ಬಾಹ್ಯ ಆಡಂಬರದಲ್ಲಲ್ಲ;…

0 Comments