ಎಣ್ಣೆ ಬೇರೆ  ಬತ್ತಿ ಬೇರೆ | ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಎಣ್ಣೆ ಬೇರೆ  ಬತ್ತಿ ಬೇರೆ,ಎರಡೂ ಕೂಡಿ ಸೊಡರಾಯಿತ್ತು.ಪುಣ್ಯ ಬೇರೆ ಪಾಪ ಬೇರೆ,ಎರಡೂ ಕೂಡಿ ಒಡಲಾಯಿತ್ತು.ಮಿಗಬಾರದು ಮಿಗದಿರಬಾರದುಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು.ಕಾಯಗುಣವಳಿದು ಮಾಯಾ ಜ್ಯೋತಿವಾಯು ಕೂಡುವ ಮುನ್ನಭಕ್ತಿ ಮಾಡಬಲ್ಲಾತನೆ ದೇವ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ವಚನ ಸಂಖ್ಯೆ-1239) ಒಂದು ಶಬ್ದಾತೀತವಾದ ಅನುಭಾವಿಕ ವಿಷಯವನ್ನು ನಿರೂಪಿಸುವಲ್ಲಿ ಎರಡು ವೈರುಧ್ಯತೆಗಳ ಮಧ್ಯೆ ಒಂದು ಬೆಡಗನ್ನು ಸೃಷ್ಟಿಸಿ ತನ್ಮೂಲಕ ವಿಷಯ ಪ್ರಸ್ತಾವನೆ ಮಾಡುವಲ್ಲಿ ಅಲ್ಲಮ ಪ್ರಭುಗಳು ನಿಸ್ಸೀಮರು. ಸೃಷ್ಟಿಯ ಸಕಲ ಚರಾಚರಗಳಲ್ಲಿಯೂ ದೃಷ್ಟಿಗೆ ಅಗೋಚರವಾದ ಒಂದು ಸೂಕ್ಷ್ಮ ಸಂಬಂಧವಿದೆ. ಅದನ್ನೇ ಅಲ್ಲಮ ಪ್ರಭುಗಳು ಹೀಗೆ ವ್ಯಕ್ತಪಡಿಸಿದ್ದಾರೆ. ಎತ್ತಣ ಮಾಮರ ಎತ್ತಣ ಕೋಗಿಲೆ,ಎತ್ತಣಿಂದೆತ್ತ ಸಂಬಂಧವಯ್ಯಾ.ಬೆಟ್ಟದ ನೆಲ್ಲಿಕಾಯಿ…

0 Comments

ಸಿಂಹ ಮದಕರಿಯ ಮೇಲಲ್ಲದೆ | ಶಿವಯೋಗಿ ಸಿದ್ಧರಾಮೇಶ್ವರರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ:ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ,ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ?ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ,ಪಂಜರದಲ್ಲಿ ಹಾರದು ನೋಡಯ್ಯಾ!ನಮ್ಮ ಕಪಿಲಸಿದ್ಧಮಲ್ಲೇಶನನರಿವವರುಜ್ಞಾನದ ಮೇಲೆ ಹಾರುವರಲ್ಲದೆಅಜ್ಞಾನದ ಮೇಲೆ ಹಾರರು.(ಸಮಗ್ರ ವಚನ ಸಂಪುಟ: ನಾಲ್ಕು-2021/ವಚನ ಸಂಖ್ಯೆ-1239) ಶಿವಯೋಗಿ ಸಿದ್ಧರಾಮೇಶ್ವರರು ಭಕ್ತಿ, ಕಾಯಕ, ದಾಸೋಹ ಮತ್ತು ಸಮಾನತೆಯ ಆದರ್ಶಗಳನ್ನು ಜನರಿಗೆ ಬೋಧಿಸಿದ ಮಹಾನ್ ಶರಣರು. ಅವರ ವಚನಗಳು ಮಾನವೀಯತೆ, ಆತ್ಮಜ್ಞಾನ ಮತ್ತು ಸಾಮಾಜಿಕ ಸಮರತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯ ಕೊಡುಗೆಯನ್ನು ನೀಡಿವೆ. ಇಂದಿನ ಸಮಾಜಕ್ಕೂ ಅವರ ಚಿಂತನೆಗಳು ಪ್ರಸ್ತುತ ಮತ್ತು ಪ್ರೇರಣಾದಾಯಕವಾಗಿವೆ. ಈ ವಚನವೂ ಕೂಡ ಅದೇ ನಿಟ್ಟಿನಲ್ಲಿ ಅಂದರೆ…

0 Comments

ಮೃತ್ತಿಕೆಯೊಂದರಲ್ಲಿ ಮಡಿಕೆಗಳು ನೂರಾರು | ಶಿವಯೋಗಿ ಸಿದ್ಧರಾಮೇಶ್ವರರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ:ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು,ಮನವೊಂದರಲ್ಲಿ ಕ್ರಿಯಾಗಳು ನೂರಾರು,ಜನಕನೊಬ್ಬನಲ್ಲಿ ಸಂತತಿಗಳು ನೂರಾರು,ಘನಕ್ಕೆ ಘನನಾದ ಚಿನ್ಮಯ ಕಪಿಲಸಿದ್ಧಾಮಲ್ಲಿಕಾರ್ಜುನನಲ್ಲಿಜಗತ್ತುಗಳು ನೂರಾರು.(ಸಮಗ್ರ ವಚನ ಸಂಪುಟ: ನಾಲ್ಕು-2021/ವಚನ ಸಂಖ್ಯೆ-1953) ಈ ವಚನದ ತಾತ್ಪರ್ಯ ನೋಡುವುದಾದರೆ ಒಂದೇ ಮಣ್ಣಿನಿಂದ ಅನೇಕ ವಿಧದ ಮಡಕೆಗಳು ರೂಪುಗೊಳ್ಳುತ್ತವೆ. ಒಂದೇ ಮನಸ್ಸಿನಿಂದ ಅನೇಕ ಆಲೋಚನೆಗಳು ಮತ್ತು ಕಾರ್ಯಗಳು ಹುಟ್ಟುತ್ತವೆ. ಒಬ್ಬ ತಂದೆಯಿಂದ ಅನೇಕ ಮಕ್ಕಳು ಜನಿಸುತ್ತವೆ. ಹಾಗೆಯೇ ಪರಮ ಚೈತನ್ಯ ಸ್ವರೂಪಿಯಾದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಅನೇಕ ಜಗತ್ತುಗಳು ಅಸ್ತಿತ್ವ ಪಡೆದಿವೆ ಎಂಬುದಾಗಿದೆ. ಈ ವಚನವು ಏಕತ್ವ ಮತ್ತು ಅನೇಕತ್ವದ ಸಂಬಂಧವನ್ನು ವಿವರಿಸುತ್ತದೆ. ಏಕತ್ವ (Oneness) ಮತ್ತು ಅನೇಕತ್ವ (Diversity) ಎಂಬುವುದು ಭಾರತೀಯ ತತ್ತ್ವಶಾಸ್ತ್ರದ…

0 Comments

ಡಾ. ಎಂ. ಎಂ. ಕಲಬುರ್ಗಿಯವರನ್ನೇ ಹೀಯಾಳಿಸುತ್ತಿರುವ ವಚನ ಸಾಹಿತ್ಯದ ಪ್ರಕಾಂಡ ಪಂಡಿತ ಸೋಮೇಶ ಕುಲಕರ್ಣಿ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

https://youtu.be/PqBEOo1m7RA(ಸೋಮೇಶ ಕುಲಕರ್ಣಿ) ತನ್ನನ್ನು ತಾನು ವಚನ ಸಾಹಿತ್ಯದ ಜಗತ್ಪ್ರಸಿದ್ಧ ವಿದ್ವಾಂಸನೆಂದು TV Camera ಎದುರು ಕುಳಿತು ಬಿಂಬಿಸಿಕೊಳ್ಳುತ್ತಿರುವ ಸೋಮೇಶ ಕುಲರ್ಣಿ ಅವರು ಮಾತನಾಡಿರುವ YouTube Channel ನಲ್ಲಿ ಹರಿದಾಡುತ್ತಿರುವ ಸಂದರ್ಶನದ Video ವನ್ನು ಒಂದು ಸಾರಿ ಗಮನಿಸಿ ಇದರಲ್ಲಿ ಪ್ರತಿಪಾದಿತವಾಗಿರುವ ಸುಳ್ಳುಗಳ ಸರಮಾಲೆಗಳಿಗೆ ಸೋಮೇಶ ಕುಲಕರ್ಣಿ ಅವರ ಭಾಷೆಯಲ್ಲಿಯೇ ಉತ್ತರವನ್ನು ಕೊಡುವ ಸಣ್ಣ ಪ್ರಯತ್ನ. ಹಾಗೆಂದ ಮಾತ್ರಕ್ಕೆ ನಾನೇನು ಜಗತ್ಪ್ರಸಿದ್ಧ ವಚನ ಸಾಹಿತ್ಯ ವಿದ್ವಾಂಸನೂ ಅಲ್ಲಾ, ನೋಬೆಲ್‌ ಪ್ರಶಸ್ತಿ ಪಡೆದ ಸೃಜನಶೀಲ ಸಾಹಿತಿಯೂ ಅಲ್ಲ. ನನ್ನ ತಂದೆ ಲಿಂ. ಶ್ರೀ. ಈಶ್ವರ ಕಮ್ಮಾರ ಅವರು ನನಗೆ ಬಾಲ್ಯದಿಂದಲೂ…

0 Comments

ಕಾಗೆಯ ತಿಂದವನಲ್ಲದೆ ಭಕ್ತನಲ್ಲ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಕಾಗೆಯ ತಿಂದವನಲ್ಲದೆ | ಭಕ್ತನಲ್ಲಕೋಣವ ತಿಂದವನಲ್ಲದೆ | ಮಹೇಶ್ವರನಲ್ಲಕೋಡಗ ತಿಂದವನಲ್ಲದೆ | ಪ್ರಸಾದಿಯಲ್ಲನಾಯ ತಿಂದವನಲ್ಲದೆ | ಪ್ರಾಣಲಿಂಗಿಯಲ್ಲಹೇಯವ ತಿಂದವನಲ್ಲದೆ | ಶರಣನಲ್ಲಇಂತೈವರ ತಿಂದವನಲ್ಲದೆ | ಲಿಂಗೈಕ್ಯನಲ್ಲ ಗುಹೇಶ್ವರಾ ||(ಸಮಗ್ರ ವಚನ ಸಂಪುಟ: ಐದು-2016/ಪುಟ ಸಂಖ್ಯೆ-256/ವಚನ ಸಂಖ್ಯೆ-1061) ಅಲ್ಲಮಪ್ರಭುಗಳ ಈ ವಚನವು ಷಟ್‌ಸ್ಥಲ ವಿಮರ್ಶೆಯ ಮೂಲಕ ಸಾಮಾಜಿಕ ವಾಸ್ತವಗಳನ್ನು ಬೆಡಗಿನ ಮನಸ್ತಿತಿ ಮೂಲಕ ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಮನುಷ್ಯರ ಶರೀರದಲ್ಲಿ ಮೃಗ. ಮತ್ತು ಪಕ್ಷಿಯ ಸ್ವಭಾವಗಳು ವಾಸವಾಗಿರುತ್ತವೆ. ಪ್ರಾಣಿ ಪಕ್ಷಿ ಸಂಕುಲಗಳನ್ನು ಆಧ್ಯಾತ್ಮಿಕ ಮನೋಲೋಕದಲ್ಲಿ "ಕಾಗೆಯನ್ನು ತಿಂದವನಲ್ಲದೆ ಭಕ್ತನಾಗಲು ಸಾಧ್ಯವಾಗವಾಗುವುದಿಲ್ಲ” ಎನ್ನುವ ವ್ಯಂಗೋಕ್ತಿಯ ಪರಿಕ್ರಮವಿಲ್ಲಿ ಕಾಣಬಹುದು. ಪಕ್ಷಿ…

0 Comments

ಲದ್ದೆಯ ಸೋಮಯ್ಯ ಶರಣರ ವಚನ – ನಿರ್ವಚನ | ಶ್ರೀಮತಿ. ಲಕ್ಷ್ಮಿ ಪಾಟೀಲ, ಕಲಬುರಗಿ.

ವಚನ:ಆವ ಕಾಯಕವಾದಡೂ ಸ್ವಕಾಯಕವ ಮಾಡಿ,ಗುರು ಲಿಂಗ ಜಂಗಮರ ಮುಂದಿಟ್ಟು,ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು,ವ್ಯಾಧಿ ಬಂದಡೆ ನೆರಳು, ಬೇನೆ ಬಂದಡೆ ಒರಲು,ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,ಭಾಪು ಲದ್ದೆಯ ಸೋಮಾ?(ಸಮಗ್ರ ವಚನ ಸಂಪುಟ-9/2001/ಪುಟ. ಸಂ-8/ವಚನ. ಸಂ. 20) ಅನುಭವ ಮಂಟಪದ ಅನುಭಾವಿ ಶರಣರು ಲದ್ದೆಯ ಸೋಮಯ್ಯನವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲಾದಾ ಗ್ರಾಮದವರು.  ಮಡದಿ ಹೆಸರು ಮಂಗಮ್ಮ. ಹುಲ್ಲು ಮಾರುವ ಕಾಯಕ ಕೈಕೊಳ್ಳುವ ಇವರು ತಮ್ಮ ಗ್ರಾಮದಲ್ಲಿ ಹುಲ್ಲು ಕೊಯಿದು ಹುಲಸೂರಿನಲ್ಲಿ ತಂದು ಮಾರುತ್ತಿದ್ದರು. ಹುಲಸೂರು ಗ್ರಾಮದಲ್ಲಿ ಇವರ ಹೆಸರಿನಲ್ಲಿ ಗುಡಿಯೊಂದು ಇದೆ. ಇವರ…

0 Comments

ಶರಣ ಬಹುರೂಪಿ ಚೌಡಯ್ಯನವರ ವಚನ ನಿರ್ವಚನ | ಡಾ. ಶೈಲಜಾ ಬಾಗೇವಾಡಿ, ಕಲಬುರಗಿ.

ವಚನ:ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು.ಪ್ರಸಾದವ ಪಡೆಯದವರ ಸಮಪಙ್ಞ್ತಯಲ್ಲಿ ಕುಳಿತುಪ್ರಸಾದ ಭೋಗವ ಮಾಡಲಾಗದು.ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ ನರಕ ತಪ್ಪದು.ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು.ಅದೇನು ಕಾರಣವೆಂದಡೆ;ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ |ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ ||ಎಂದುದಾಗಿ, ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವನಂಬುಗೆಯ ಭಕ್ತಿ ಬೆಸುಗೆಯಿಲ್ಲದವರಎನಗೆ ತೋರದಿರಯ್ಯ ರೇಕಣ್ಣಪ್ರಿಯ ನಾಗಿನಾಥಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-77/ವಚನ ಸಂಖ್ಯೆ-175) ಶರಣ ಬಹುರೂಪಿ ಚೌಡಯ್ಯನವರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಇವರು ಮೂಲತಃ ಆಂಧ್ರಪ್ರದೇಶದ ರೇಕಳಿಕೆ ಗ್ರಾಮದ ಬ್ರಾಹ್ಮಣ ದಂಪತಿಗಳಾದ ಜನವಶ್ಯ ಮತ್ತು ಧರ್ಮವತಿ…

0 Comments

ಪುರಾತನ ಕಲ್ಯಾಣದ ಚಿತ್ರಣ ಮತ್ತು ಅವನತಿಯತ್ತ ಶರಣರ ಸ್ಮಾರಕಗಳು | ಡಾ. ಸತೀಶ ಕೆ.ಇಟಗಿ, ಮುದ್ದೇಬಿಹಾಳ.

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯಎಂತೆಂದಡೆ: ವಿಸ್ತರಿಸಿ ಪೇಳುವೆನು;ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳುಪರಮಶಿವಯೋಗಿಗಳು ಶಿವಾನುಭಾವ ಸಂಪನ್ನರುಶಿವಲಿಂಗ ಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳುಶಿವಾಚಾರವೇದ್ಯರು ಶಿವಾಗಮ ಸಾಧ್ಯರುಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳುಹೊಗಬಾರದು ಕಲ್ಯಾಣವ.ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆಮುನ್ನೂರರವತ್ತು ಬಾಗಿಲವಾಡ.ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆನಾನೂರ…

0 Comments

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು…

0 Comments

ಧರ್ಮಚಿಂತಕ ಮತ್ತು ವಿಜ್ಞಾನಿ ಎಂದು ಬಿಂಬಿಸಿಕೊಳ್ಳುತ್ತಿರುವ ಚಂದ್ರಶೇಖರ ಎಚ್.‌ ಎನ್. | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಈತನ ಹೆಸರು ಚಂದ್ರಶೇಖರ ಎಚ್‌. ಎನ್‌. (AIವಿಜ್ಞಾನಿಗಳು) ಪಂಚಸೂತ್ರ ಅಕಾಡೆಮಿ, ಲಂಡನ್.‌ AIಅಂದರೆ Artificial Intelligence. ಇದನ್ನು ನಾವು ಆಡು ಭಾಷೆಯಲ್ಲಿ Garbage In Garbage Out (GIGO) ಅಂತೀವಿ. ಕಸ ಹಾಕಿದರೆ ಕಸ ಬರುತ್ತದೆ. ಅಂದರೆ ಇಲ್ಲಿ ಯಾವುದೇ ಸೃಜನಶೀಲತೆ ಇರುವುದಿಲ್ಲ. ನಾವು ಏನು Feedಮಾಡತೀವೋ ಅದು ಹೊರಗ ಬರುತ್ತದೆ ಅಷ್ಟೇ. ಉದಾಹರಣೆಗೆ ಒಂದು ವ್ಯಕ್ತಿಯ ಫೋಟೋ ಮಾಡಬೇಕಾದರೆ 4ನೇ ತರಗತಿಯ ಹುಡುಗ ಕೂಡ Voice Commandನೀಡಿದರೆ ಒಂದು ಫೋಟೋ ಅವನ Voice Commandಗೆ ತಕ್ಕ ಹಾಗೆ ಫೋಟೋ Readyಆಗುತ್ತದೆ. ಇದರಲ್ಲಿ ಯಾವ Rocket Scienceಮಣ್ಣಾಂಗಟ್ಟಿಯೂ…

1 Comment