ಮಹಾ ಪ್ರಸಾದಿ ಶರಣ ಮರುಳಶಂಕರದೇವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಆಕಾರವೆಂಬೆನೆ ನಿರಾಕಾರವಾಗಿದೆನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.ತನ್ನನಳಿದು ನಿಜವುಳಿದಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡುಬದುಕಿದೆನು ಕಾಣಾ ಸಂಗನಬಸವಣ್ಣಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-50) ಶರಣ ಕಿನ್ನರಿ ಬ್ರಹ್ಮಯ್ಯನವರ ಈ ವಚನ ಶರಣ ಮರುಳಶಂಕರದೇವರ ಘನವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಫಲಶೃತಿಯಿಂದ ಹಲವಾರು ಶರಣರು ವಿವಿಧ ಸ್ಥಳಗಳಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ ಶರಣರಲ್ಲಿ ಅಫಘಾನಿಸ್ತಾನದಿಂದ ಬಂದ ಮರುಳಶಂಕರದೇವರು ಪ್ರಮುಖರು. ಕಲ್ಯಾಣದ ಮಹಾಮನೆಯಲ್ಲಿ ಅಜ್ಞಾತವಾಗಿ ಬದುಕಿದ್ದ ಶರಣ ಮರುಳಶಂಕರದೇವರನ್ನು ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಗುರುತಿಸುತ್ತಾರೆ. ಅಲ್ಲಮ ಪ್ರಭುಗಳ ಒಂದು ವಿಶೇಷತೆ ಅಂದರೆ ಅವರ ಲೋಕ…