ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ: ಸಂಕಷ್ಟದ ಬದುಕು ಹಾಗೂ ಅವರ ಸಾಧನೆಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ರಾವ್‌ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರ ಪೂರ್ವಜರು ಮೂಲತಃ ಸವದತ್ತಿ ತಾಲೂಕಿನ ಹಳಕಟ್ಟಿ ಗ್ರಾಮದವರು. ಧಾರವಾಡಕ್ಕೆ ವಲಸೆ ಬಂದ ನೇಕಾರ ಕುಟುಂಬ ಅವರದಾಗಿತ್ತು. ಅವರ ಪೂರ್ಣ ಹೆಸರು ಫಕೀರಪ್ಪ. ಡಾ. ಫ. ಗು. ಹಳಕಟ್ಟಿಯವರ ತಂದೆ ಸಾಹಿಗಳು ಮತ್ತು ಶಿಕ್ಷಕರಾಗಿದ್ದ ಶ್ರೀ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ಶ್ರೀಮತಿ ದಾನಾದೇವಿ. 02.07.1880 ರಂದು ಧಾರವಾಡದಲ್ಲಿ ಜನಿಸಿದ ಅವರು ತಮ್ಮ ಮೂರನೇಯ ವಯಸ್ಸಿನಲ್ಲಿದ್ದಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಧಾರವಾಡದಲ್ಲಿ ತಮ್ಮ ಪ್ರಾಥಮಿಕ ಹಾಗೂ 1896 ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗುತ್ತಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ 1901…

0 Comments

“ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ” ಕಾರ್ಯಗಾರ | “ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ” ಪುಸ್ತಕ ಲೋಕಾರ್ಪಣೆ | ವರದಿ: ಶ್ರೀ ಬಸವರಾಜ ಕುರುಗೋಡ, ರಾಯಚೂರು

ಮಹಾಶಿವರಾತ್ರಿ ಪ್ರಯುಕ್ತ ನಗರದ ಬಸವ ಕೇಂದ್ರದಲ್ಲಿ 13.02.2026 ರಂದು ಸಾಯಂಕಾಲ ಚಿಕ್ಕೋಡಿಯ ವೈದ್ಯ ಶರಣ ಸಾಹಿತ್ಯ ಆರಾಧಕ ಡಾ. ದಯಾನಂದ ನೂಲಿ ಅವರ ನೇತೃತ್ವದಲ್ಲಿ ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ ಕುರಿತು ಕಾರ್ಯಗಾರ ಜರುಗಿತು. ಮೊದಲಿಗೆ ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಸಾಹಿತಿ ಡಾ. ಸರ್ವಮಂಗಳ ಸಕ್ರಿ ಅವರು ಬರೆದ "ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ" ಪುಸ್ತಕವನ್ನು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಶ್ರೀ. ಪಿ. ರುದ್ರಪ್ಪ ಕುರಕುಂದಿ ಸೇರಿ ಲೋಕಾರ್ಪಣೆ ಮಾಡಿದರು. ಜೊತೆಗೆ ಡಾ. ದಯಾನಂದ ನೂಲಿ ಅವರ  ಎರಡನೇ ಮುದ್ರಣದ…

0 Comments

ವಚನಗಳಲ್ಲಿ ವೀರಶೈವ ಮತ್ತು ಲಿಂಗಾಯತ (ಲಿಂಗವಂತ) ಪದಬಳಕೆ: ಒಂದು ಪರಾಮರ್ಶೆ | ಡಾ. ವೀರಣ್ಣ ರಾಜೂರ, ಧಾರವಾಡ.

ವಚನ ಸಾಹಿತ್ಯ ನನ್ನ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರ. ಸುಮಾರು 45 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ, ಬರವಣಿಗೆ, ಗ್ರಂಥ ಪ್ರಕಟಣೆ ಕಾರ್ಯ ಮಾಡುತ್ತ ಬಂದಿದ್ದೇನೆ. ಇದುವರಗೆ ನಾನು 125 ಗ್ರಂಥಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 80 ಕ್ಕೂ ಹೆಚ್ಚು ಕೃತಿಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿವೆ. ಕರ್ನಾಟಕ ಸರ್ಕಾರ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳಲ್ಲಿ ನಾನು 5 ಸಂಪುಟಗಳನ್ನು ಸಂಪಾದಿಸಿದ್ದೇನೆ. ಹೀಗಾಗಿ ವಚನ ಸಾಹಿತ್ಯದ ಹಸ್ತಪ್ರತಿಗಳ ನಿರಂತರ ಒಡನಾಟದಿಂದ ಅವುಗಳ ಸ್ವರೂಪ, ಪರಂಪರೆ, ಪರಿಷ್ಕರಣೆ,…

2 Comments

ಶರಣ ಘಟ್ಟಿವಾಳಯ್ಯನವರ ವಚನ ನಿರ್ವಚನ | ಶ್ರೀಮತಿ. ಶಶಿಕಲಾ. ಬಿ. ಕೆ. ಬೆಂಗಳೂರು.

ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು!ನೆಳಲ ಸುಟ್ಟ ಬೂದಿಯನಿಟ್ಟು ಕೊಂಡಡೆ ಭೂಮಿ ಸತ್ತಿತ್ತು!ಆಕಾಶ ಹೊತ್ತಿತ್ತು! ದೇವನ ದೇವತ್ವ ಕೆಟ್ಟಿತ್ತು!ದೇವಿಯ ಒಕತನ ಮುರಿಯಿತ್ತು!ಕೇಳಬಾರದ ಠಾವಿನಲ್ಲಿ ಕಾಣಬಾರದ ಲಿಂಗ ಮೂರ್ತಿಗೊಂಡಿರೆನೋಡಬಾರದ ಪೂಜೆಯಾಯಿತ್ತು!ಚಿಕ್ಕಯ್ಯಪ್ರಿಯ ಸಿದ್ಧಲಿಂಗಾಪ್ರಭುದೇವ[ರ] ನಿಲವ ಕಂಡು ಇಲ್ಲ ಇಲ್ಲವೆನುತಿರ್ದೆನು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-490) ಘಟ್ಟಿವಾಳಯ್ಯ ಶರಣರು ಅನುಭವ ಮಂಟಪದ ಅನುಭಾವಿಗಳು. ಧೀರೋದಾತ್ತ ನಡೆ ನುಡಿಯ ಗಟ್ಟಿಗ ಶರಣರಿವರು. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯವರೆಂಬುದು ಸಂಶೋಧಕರ ಅಭಿಪ್ರಾಯ. ಅಲ್ಲಿರುವ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ  ಬಾರಿಸುವ ಕಾಯಕ ಕೈಗೊಂಡವರು. ಸಂಸಾರಿಗಳಾಗಿದ್ದ ಈ ಶರಣರು ಸಂತೋಷದಿಂದಲೆ ಸಂಸಾರ ಮಾಡಿದವರಾಗಿದ್ದವರು. ಆದರೆ ಮುಂದೆ ಮಡದಿ ಮಾಡಿದ…

0 Comments

ತಾಡೋಲೆಗಳಲ್ಲಿ ವಚನಗಳ ಸಂಗ್ರಹ | ಡಾ. ಜಿ ವಿ ಮಂಜುನಾಥ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.

ದೈವದೊಡನೆ ಸಂಸ್ಕೃತ ಭಾಷೆಯಲ್ಲೇ ಸಂವಾದ ಸಾಧ್ಯ ಎನ್ನುವ ಕಾಲ ಘಟ್ಟದಲ್ಲಿ ದೈವದೊಡನೆ ಕನ್ನಡ ಭಾಷೆಯ ಮೂಲಕವೂ ಸಂವಾದ ಮಾಡಬಹುದು, ಅವನೊಂದಿಗೆ ಜನಸಾಮಾನ್ಯರ ಮಾತಿನಲ್ಲೇ ಸಂಭಾಷಣೆ ಮಾಡಬಹುದು ಎಂದು ಜಗತ್ತಿಗೆ ತೋರಿಸಿದವರು 12 ನೇ ಶತಮಾನದ ಶರಣರು.  ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯು ಮಾನವರನ್ನು ವರ್ಗ ವರ್ಗವಾಗಿ ಹಂಚಿತ್ತು. ಕೆಲವರು ಶುದ್ಧ, ಕೆಲವರು ಅಶುದ್ಧ ಎಂದು ಹೇಳಿದ್ದ ವ್ಯವಸ್ಥೆಗೆ ಶರಣರು ಧಿಕ್ಕಾರ ಹೇಳಿದರು. ಸಾಮಾಜಿಕ ಮೌಲ್ಯಗಳನ್ನೇ ಧಾರ್ಮಿಕ ಮೌಲ್ಯಗಳನ್ನಾಗಿ ರೂಪಾಂತರಿಸಿ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಅಂದರೆ ಇಹಲೋಕದಲ್ಲಿ ನೀತಿಯುತವಾಗಿ, ದಯೆಯಿಂದ, ಕಾಯಕದಿಂದ, ಬಾಳಿ ಬದುಕಿದರೆ ಸ್ವರ್ಗ ಸ್ಥಿತಿ ಇಲ್ಲಿಯೇ…

0 Comments

ಗೋಲ್ಲಾಳೇಶ್ವರ ಶರಣರ ವಚನ ನಿರ್ವಚನ | ಶ್ರೀಮತಿ ರೇಣುಕಾ ಮೈಸಲಿಗೆ, ಕಲಬುರಗಿ.

ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ:ಕಂಡವರೊಳಗೆ ಕೈಕೊಂಡಾಡದೆ,ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,ವೀರಬೀರೇಶ್ವರಲಿಂಗದೊಳಗಾದ ಶರಣ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-88) ಅನುಭವ ಮಂಟಪದ ಮೇರು ಅನುಭಾವಿ ಶರಣರು ಗೋಲ್ಲಾಳೇಶ್ವರರು. ಇವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಎಂಬ ಗ್ರಾಮ. ತಂದೆ ಬಲ್ಲುಗ ತಾಯಿ ದುಗ್ಗಳೆ. ಇವರ ಕಾಯಕ ಕುರಿ ಕಾಯುವದು. "ವೀರ ಬೀರೇಶ್ವರ"…

0 Comments

ಮುಚ್ಚಿದ ಸ್ಥಾವರ; ತೆರೆದ ಜಂಗಮ | ಶ್ರೀ. ಎನ್. ಸಿ. ಶಿವಪ್ರಕಾಶ, ಮಸ್ಕತ್, ಒಮಾನ್.

ಆರಾಧನೆಯ ಮಾಡಿದಡೆ ಅಮೃತದ ಬೆಳಸು,ವಿರೋದ್ಥಿಸಿದಡೆ ವಿಷದ ಬೆಳಸು,ಇದು ಕಾರಣ, ಜಂಗಮಕ್ಕೆ ಅಂಜಲೇಬೇಕು.ಸ್ಥಾವರ ಜಂಗಮ ಒಂದೆಂದರಿದಡೆಕೂಡಲಸಂಗಮದೇವ ಶರಣಸನ್ನಿಹಿತ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-422) ನಾವು ನಾಲ್ಕೈದು ಜನ ಲಿಂಗವಂತರು ಪರವೂರಿನ ಪುರಾತನ ಶಿವಮಂದಿರದ ಶಿವಲಿಂಗದರ್ಶನಕೆಂದು ತೆರಳಿದ್ದೆವು. ದೇಗುಲ ಹೊಕ್ಕಾಗ ಗರ್ಭಗುಡಿ ಮುಚ್ಚಿತ್ತು. ಶಿವಲಿಂಗದರ್ಶನದ ಸಮಯ ಮೀರಿತ್ತು. ಮಸುಕಾದ ಮುಸುಕು ಹೊದಿಕೆ ಗರ್ಭಗುಡಿಯ ಗಾಜಿನ ಜೋಡಿ ಬಾಗಿಲುಗಳ ಮುಚ್ಚಿ ಶಿವಲಿಂಗವನು ಮರೆಸಿತ್ತು. ತಪ್ಪು ನಮ್ಮ ಗುಂಪಿನದೇ ಇತ್ತು. ಪರಶಿವನನು ಕಾಣಬೇಕೆಂದರೆ ಸಮಯದ ನಿಯಮವನು  ಅನುಸರಿಸಬೇಕಲ್ಲವೇ? ಹೊತ್ತು ಗೊತ್ತಿಲ್ಲದೆ ಬರುವ ಭಕ್ತರು ಭಕ್ತಿಯ ಮಾಡಲೆಳೆಸಿದರೆ  ಸ್ವೀಕರಿಸುವುದಕೆ ಗುಡಿಯ ಶಿವಲಿಂಗವೇನು ಕೊರಳಿಗೆ ಕಟ್ಟಿದ…

0 Comments

440 ಜಂಗಮರ ಶಿರಚ್ಛೇಧನಕ್ಕೆ ವೀರಶೈವ ಜೋಡಣೆ | ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ | ಡಾ. ಸತೀಶ ಕೆ.  ಇಟಗಿ, ಮುದ್ದೇಬಿಹಾಳ.

ನಚ್ಚಿದೆನೆಂದಡೆ ಮಚ್ಚಿದೆನೆಂದಡೆ,ಸಲೆ ಮಾರುವೋದೆನೆಂದಡೆತನುವನಲ್ಲಾಡಿಸಿ ನೋಡುವೆ ನೀನು.ಮನವನಲ್ಲಾಡಿಸಿ ನೋಡುವೆ ನೀನು.ಧನವನಲ್ಲಾಡಿಸಿ ನೋಡುವೆ ನೀನು.ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-58/ವಚನ ಸಂಖ್ಯೆ-214) ಕ್ರಿ. ಶ. 1673 ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ 14 ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ ಅವರು ತಮ್ಮ 28 ನೇ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದರು. ಬಾಲ್ಯ ಸ್ನೇಹಿತರಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ ಜೈನ ಮತಾವಲಂಬಿಯಾಗಿ, ಅಪ್ರತಿಮ ರಾಜನೀತಿಯ ಚಾಣಕ್ಯರಾಗಿದ್ದರು. ಇವರನ್ನು ತಮ್ಮ ಮಂತ್ರಿ (ಟ್ಯೂಟರ್) ಯನ್ನಾಗಿ ನೇಮಿಸಿಕೊಂಡ ಚಿಕ್ಕದೇವರಾಜ ಒಡೆಯರ ಅವರು ರಾಜ್ಯಭಾರದ ಮೊದಲ ವರ್ಷಗಳನ್ನು ಕೇವಲ…

0 Comments

ಮಹಾ ಪ್ರಸಾದಿ ಬಿಬ್ಬಿ ಬಾಚಯ್ಯ ಶರಣರ ವಚನ ನಿರ್ವಚನ | ಶ್ರೀಮತಿ ಮೈತ್ರಾ ಎಂ. ಕುಣಚಿ, ಕಲಬುರಗಿ.

ಆಕಾಶದುರಿ, ನೆಲದ ಮಡಕೆಯಲ್ಲಿಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು.ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು,ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಗಬೇಕೆಂದು.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-135/ವಚನ ಸಂಖ್ಯೆ-323) ಅನುಭವಮಂಟಪದ ಅನುಭಾವಿಗಳು ಬಿಬ್ಬಿ ಬಾಚಯ್ಯ ಶರಣರು. ಮೊದಲು ಬ್ರಾಹ್ಮಣರಾಗಿದ್ದು ತದನಂತರ ಕಲ್ಯಾಣಕ್ಕೆ ಬಂದು ಶರಣ ಧರ್ಮ ಸ್ವೀಕಾರ ಮಾಡಿ ವಚನಕಾರರಾದವರು. ಇವರು ಮೂಲತಃ ರಾಯಚೂರು ಹತ್ತಿರದ ಗೊಬ್ಬೂರು ಗ್ರಾಮದವರು ಎಂದು ಒಮ್ಮತದ ಅಭಿಪ್ರಾಯವಿದೆ. ಇಲ್ಲಿರುವ ಅರ್ಪಣಾ ಕಟ್ಟೆ ಅದು ಈ ಶರಣರ ಸಮಾಧಿ ಎಂದು ಗುರುತಿಸುತ್ತಾರೆ. ಇವರ ತಂದೆಯ ಹೆಸರು  ಭಾಸ್ಕರ, ಇವರು ತಮ್ಮ ಹುಟ್ಟೂರು…

0 Comments

ಗಡಿಗೆಯ ತುಪ್ಪ ಹೆಡಿಗೆಯ ಮೃಷ್ಟಾನ್ನ | ಶರಣೆ ಅಕ್ಕಮ್ಮನವರ ವಚನ ವಿಶ್ಲೇಷಣೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಶರಣೆ ಅಕ್ಕಮ್ಮನವರು ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದವರೆಂಬುದು ವಿದ್ವಾಂಸರ ಒಮ್ಮತದ ಅಭಿಪ್ರಾಯವಾಗಿದೆ. ಇದೇ ಊರಿನ ಶರಣ ಏಲೇರಿ ಕೇತಯ್ಯನವರ ಪ್ರಭಾವ ಅಕ್ಕಮ್ಮನವರ ಮೇಲೆ ಆಗಿರಬಹುದು. “ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ” ಅಂಕಿತದಿಂದ 154 ವಚನಗಳು ಪ್ರಕಟವಾಗಿವೆ. ಅಕ್ಕಮ್ಮನ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಅಕ್ಕಮ್ಮನವರ ವಚನಗ ಳನ್ನು ಓದಿದರೆ ಕೃಷಿ ಕಾಯಕದ ಶರಣೆ ಆಗಿರಬೇಕೆಂದು ಊಹಿಸಬಹುದು. ಒಡೆಯರ ಕಟ್ಟಳೆಯ ಮಾಡಿಕೊಂಡು ಆಡುವ ತನಕಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೇ?ಒಡೆಯರಂತೆ, ಮನೆಗೊಡೆಯನಂತೆ,ಗಡಿ ತಡಿಯಲ್ಲಿ ಕಾಯಲುಂಟೆ!ಅದು ತುಡುಗುಣಿಕಾರರ ನೇಮ. ಒಡೆಯರತ್ತ ನಾವಿತ್ತ.ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನ,ತುಡುಗುಣಿಯಂತೆ ತಿಂಬವಂಗೆಮತ್ತೊಡೆಯರ ಕಟ್ಟಳೆಯೆ?ಇಂತೀ ಕೆಡುಕರ…

0 Comments