ನಿಜಸುಖಿ ಹಡಪದ ಅಪ್ಪಣ್ಣನವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ?ಹಾಡಲೇಕೊ ಹರನ ಕಂಡಾತಂಗೆ?ಬೇಡಿ ಕಾಡಲೇಕೊ ನೋಡುವಕಂಗಳಿಗೆ ತೃಪ್ತಿಯಾದವಂಗೆ?ನೀಡಿ ಮಾಡಲೇಕೊ ಉಡುವಾತನುಉಂಬುವಾತನು ಏಕವಾದ ಮೇಲೆ.ಮುಂದು ನೋಡುವರಾರುಂಟು ಹೇಳಾ,ಬಸವಪ್ರಿಯ ಕೂಡಲ ಚನ್ನಬಸವಣ್ಣಾ?(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-919) ಪ್ರಸ್ತುತ ಅರ್ಥಗರ್ಭಿತವಾದ ವಚನ ನಿಜ ಶರಣರಾದ ಹಡಪದ ಅಪ್ಪಣ್ಣನವರದು. ಹಡಪದರು ಎಂದರೆ ಕ್ಷೌರಿಕರು ಎಂಬ ಸಮಾನ ಪದಗಳು ಬಳಕೆಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿ, ಸಂಕುಚಿತ ಮನದವರಲ್ಲಿ ಹಡಪದರು ಎದುರು ಬಂದರೆ ಅಪಶಕುನವೆಂದು ತರಗುಟ್ಟುತ್ತಿದ್ದ ಕಾಲಘಟ್ಟದಲ್ಲಿ ಹಡಪದ ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿಸಿಕೊಂಡು ಪ್ರಾಣದಂತೆ ಅವರೊಂದಿಗೆ ಸದಾ ಒಡನಾಡಿದವರು ವಿಶ್ವಗುರು ಬಸವಣ್ಣನವರು. ವ್ಯಕ್ತಿಗೂ ಮತ್ತು ವೃತ್ತಿಗೂ ಏಕಕಾಲಕ್ಕೆ ಗೌರವ ಸಲ್ಲುವಂತಹ…




Total views : 69467