ಶರಣರು ಕಂಡ ಬಸವಣ್ಣ: ಬಸವಣ್ಣನವರ ವ್ಯಕ್ತಿತ್ವದ ಅನಾವರಣ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತ ಹಾಗೂ ಸಂಸ್ಕೃತಿಯ ಪುಸ್ತಕಗಳನ್ನು ಓದುವ ಹವ್ಯಾಸ ಬಹುಶಃ ಮಕ್ಕಳ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ತಮ್ಮ ಜೀವನವನ್ನು ಸವೆಸಿದ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರಿಂದ ನನಗೆ ಬಂದ ಬಳುವಳಿ ಅನಿಸುತ್ತೆ. ಈ ಲೇಖನವನ್ನು ಬರೆಯುವುದಕ್ಕೆ ಅವರು ನನಗಿತ್ತ ಪ್ರೇರಣೆಯೇ ಕಾರಣ. ಕಳೆದ ಸುಮಾರು ಎರಡೂವರೆ ಮೂರು ದಶಕಗಳಿಂದ ಶರಣರ ಕುರಿತು ಮಾಹಿತಿ ಸಂಗ್ರಹಿಸಲು ನಮಗೆ ಸಿಕ್ಕ ಮೌಲ್ಯಯುತವಾದ ಆಕರಗಳು ಅಂದರೆ ಡಾ. ಫ. ಗು. ಹಳಕಟ್ಟಿಯವರ 770 ಅಮರ ಗಣಂಗಳ ಸಂಗ್ರಹ, ಶೂನ್ಯ ಸಂಪಾದನೆಗಳು, ಬಸವ…