ವಚನ ಸಾಹಿತ್ಯದಲ್ಲಿ ಭಾಷೆ ಮತ್ತು ಭಾಷಾ ಸಂಸ್ಕೃತಿ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು
.ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು.ಭಾಷೆ ಬಳಸಿ ಹಂಗು ಹಳಸಿಹೋಯಿತ್ತು.ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆಕೊಟ್ಟಿಹೆನೆಂಬ ಶಬ್ದ ಅಳಿದರು ಉಳಿಯಿತು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-250/ವಚನ ಸಂಖ್ಯೆ-682) ಶರಣ ಚಂದಿಮರಸರ ಈ ವಚನ ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ವಿಶ್ಲೇಷಣೆ ಮಾಡುತ್ತಾ ಹೋದಂತೆ ಭಾಷೆ ಅಥವಾ ಮಾತು ಅಥವಾ ನುಡಿ ಎನ್ನುವ ಭಾಷಾ ಕ್ರಾಂತಿಯ ಗುಟ್ಟುಗಳನ್ನು ಮತ್ತು ತತ್ವಗಳನ್ನು ಅಡಗಿಸಿಕೊಂಡಂತೆ ಕಾಣುತ್ತದೆ. ಕೊಟ್ಟಿಹೆನೆಂಬ ಶಬ್ದ ಅಳಿದರೂ ಉಳಿಯಿತ್ತು ಎನ್ನುವುದರ ಮೂಲಕ ದಾಸೋಹ ತತ್ವದ ಪರಿಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸುತ್ತದೆ. ವಚನ ಸಾಹಿತ್ಯದ ಅಧ್ಯಯನ ಇಂದಿನ ಕಾಲಘಟ್ಟದ ಬಹಳಷ್ಟು ಉಪನ್ಯಾಸಕರನ್ನು, ವಿದ್ವಾಂಸರನ್ನು, ವಿದ್ಯಾರ್ಥಿಗಳನ್ನು…



Total views : 69468