POLITICAL PHILOSOPHY IN VACHANA LITERATURE AND ITS IMPACT ON “POLITICS & EGALITARIANISM”

(Photo Courtesy: Internet) INTRODUCTION: Democracy, as a subject material in Political Science and Vachana Literature shows us very significant doctrines. Besides leading towards the path of egalitarian society, the principles written in Vachana Literature are far better than the modern day’s Political Theories and Values, which covers all gambit of Micro & Macro Socio-Economic Approaches, Religious as well as Political Science on…

0 Comments

ವ್ರತಾಚಾರ ನಿಷ್ಠೆಯ ಅಕ್ಕಮ್ಮ / ಡಾ. ರಘುಶಂಖ ಭಾತಂಬ್ರಾ,ಬೀದರ

        ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ        ಕಾಯಕವ ಮಾಡಿ,        ಭಕ್ತರ ಪಡುಗ, ಪಾದತ್ರಾಣ, ಪಹರಿ,        ಬಾಗಿಲು, ಬೊಕ್ಕಸ, ಬಿಯಗ        ಮುಂತಾದ ಕಾಯಕವಂ ಮಾಡಿಕೊಂಡು        ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ-        ಈ ಭಕ್ತನ ಅಂಗಳ ಅವಿಮುಕ್ತ ಕ್ಷೇತ್ರ,        ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ       (ಶಿವಶರಣೆಯರ ವಚನಸಂಪುಟ-೫, ವಚನ-೩೬೫ ಪುಟ-೧೧೫) ಅಕ್ಕಮ್ಮನ ವಚನದಂತೆ ಅಸಿ ಮಸಿಗಿಂತ ಕೃಷಿಕ್ಷೇತ್ರವು ಮಾನವನ ಸರ್ವಾಂಗೀಣ ಪ್ರಗತಿಗೆ ಅವಿಭಾಜ್ಯ ಅಂಗವಾಗಿರುವAತೆ, ನೂರಾರು ವೃತ್ತಿಗಳಿಗೆ, ಅಸಂಖ್ಯಾತ ಕ್ರಿಮಿ-ಕೀಟ, ಪ್ರಾಣಿ-ಪಕ್ಷಿಗಳಾದಿ ಜೀವಸಂಕುಲಕ್ಕೆ ಪೂರಕವಾಗಿದೆ, ಪೋಷಕವಾಗಿದೆ. ಕೃಷಿಕಾರ್ಯವನ್ನು ಅವಲಂಬಿಸಿ ಬದುಕುತ್ತಿರುವ, ಜೀವನಾಶ್ಯಕ ವಸ್ತುಗಳ ಉತ್ಪಾದಕ ಚಟುವಟಿಕೆಯಲ್ಲಿ…

0 Comments

ಡಾ. ರಾಜೇಶ್ವರಿ ಶೀಲವಂತ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಈ ಅನುಭಾವದ ಮಾತನ್ನೇ ಇನ್ನೂ ಸ್ವಲ್ಪ ಮುಂದೆ ತೆಗೆದುಕೊಂಡು ಹೋದರೆ ಇವತ್ತಿನ ನಮ್ಮ ವಿಶೇಷ ಅತಿಥಿಯ ಅದ್ಭುತ ಪರಿಚಯ ನಮಗಾಗುತ್ತದೆ. ಒಂದು M. Phil ಪ್ರಭಂಧ, ಒಂದು Ph.D ಪ್ರಭಂಧ, ಒಂದು ಪ್ರಸಾರಾಂಗ ಮಾಲಿಕೆಯ ಗ್ರಂಥ. Ph.D ಪಡೆದ ಬೀಳಗಿ ತಾಲ್ಲೂಕಿನ ಪ್ರಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗೆ ಕಲಿಯುವುದರ ಜೊತೆಗೆ ವಿಶ್ವ ವಿದ್ಯಾಲಯವನ್ನೇ ತಮ್ಮೊಂದಿಗೆ ಸಮ್ಮಿಳಿತಗೊಳಿಸಿ ಸಂಶೋಧನೆಗೆ ಒಂದು ಮೌಲ್ವಿಕ ಅರ್ಥ ತಂದುಕೊಟ್ಟ ಇಂದಿನ ವಿಶೇಷ ಅತಿಥಿ ನಮ್ಮ “ಅಕ್ಕನ ಅರಿವು” ಬಳಗದ ಸದಸ್ಯೆ ಡಾ. ರಾಜೇಶ್ವರಿ. ವೀ.…

0 Comments

Fiscal Policy: ವಚನಕಾರರು ಕಂಡಂತೆ ವಿತ್ತೀಯ ಕಾರ್ಯನೀತಿ ಒಂದು ಅನುಪಮ ಸಮಕಾಲೀನ ಚಿತ್ರಣ

ಅಮರಾವತಿಯ | ಪಟ್ಟಣದೊಳಗೆ ||ದೇವೇಂದ್ರನಾಳುವ | ನಂದನವನವಯ್ಯಾ ||ಅತ್ತ ಸಾರಲೆ ಕಾಮಯ್ಯ | ಮೋಹವೇ ನಿನಗೆ? ||ಲೋಕಾದಿಲೋಕವೆಲ್ಲವ | ಮರುಳು ಮಾಡಿದೆ ||ಕಾಮಾ | ಗುಹೇಶ್ವರಲಿಂಗವನರಿಯೊ ||(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-149 / ವಚನ ಸಂಖ್ಯೆ-131) ದೇವೇಂದ್ರನ ರಾಜಧಾನಿ ಅಮರಾವತಿಯು ಅಮರರಾದ ದೇವಾನು-ದೇವತೆಗಳ ವಾಸಸ್ಥಾನ ಎನ್ನುವುದು ದ್ವೈತ ತತ್ವವನ್ನು ನಂಬುವ ಜನಗಳ ಕಲ್ಪನೆ. ಅದು ಫಲಭರಿತ ಹಣ್ಣುಗಳು, ಸುಗಂಧ ಸುವಾಸನೆ ಬೀರುವ ಹೂವುಗಳು ಮತ್ತು ಸೇವಕಿಯರು ಮುಂತಾದವುಗಳಿಂದ ಕೂಡಿ ಪಂಚೇಂದ್ರಿಯಗಳಿಗೆ ಆನಂದದ ಅನುಭವವನ್ನು ನೀಡುವ ಲೋಕ. ಕಾಮನೇ, ಮೋಹದಿಂದೊಡಗೂಡಿದ ಲೋಕದ ಜನರನ್ನು ಕಾಡುವ…

0 Comments

ಪಾರ್ಲಿಮೆಂಟ್‌, ಮ್ಯಾಗ್ನಾ ಕಾರ್ಟಾ ಮತ್ತು ಬಸವೇಶ್ವರ/ಶ್ರೀ.ವಿಜಯಕುಮಾರ ಕಮ್ಮಾರ

ಮ್ಯಾಗ್ನಾ ಕಾರ್ಟಾದ ಉಳಿದಿರುವ ನಾಲ್ಕು ದಾಖಲೆಗಳಲ್ಲಿ ಒಂದರ ಚಿತ್ರ.(ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಸತ್‌ ಭವನ ಒಂದು ಐತಿಹಾಸಿಕ ಕಟ್ಟಡ ಮತ್ತು ಈ ದೇಶದ ಶಕ್ತಿಕೇಂದ್ರ. ಪ್ರಸಿದ್ಧ ಬ್ರಿಟೀಷ್‌ ವಾಸ್ತುಶಿಲ್ಪಿಗಳಾದ ಸರ್‌ ಎಡ್ವಿನ್‌ ಲುಟೆಯನ್ಸ್‌ ಮತ್ತು ಸರ್‌ ಹರ್ಬರ್ಟ್‌ ಬೇಕರ್‌ ಅವರ ವಿನ್ಯಾಸದಲ್ಲಿ ರೂಪುಗೊಂಡ ಕಟ್ಟಡ. ದಿನಾಂಕ 12.02.1921 ರಲ್ಲಿ ಶಂಕುಸ್ಥಾಪನೆಯಾಗಿ ಇದರ ನಿರ್ಮಾಣಕ್ಕೆ ಸುಮಾರು ಆರು ವರ್ಷಗಳ ಕಾಲ ತೆಗೆದುಕೊಂಡಿತು. ಅಂದಿನ ಲೆಕ್ಕದಲ್ಲಿ 83 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ಗವರ್ನರ್‌ ಜನರಲ್‌ ಆಗಿದ್ದಂಥ ಲಾರ್ಡ್‌ ಐರ್ವಿನ್‌ ದಿನಾಂಕ 18.01.1927…

1 Comment

ಅಲ್ಲಮರ ವಚನಗಳಲ್ಲಿ “ಲಿಂಗಾಚಾರ” / ಸುನಿತಾ ಮೂರಶಿಳ್ಳಿ, ಧಾರವಾಡ.

ಅನಾದಿ ಕಾಲದಿಂದಲೂ ಲಿಂಗವೆಂಬುದು ಮೂರ್ತರೂಪದಲ್ಲಿ ಸ್ಥಾವರಲಿಂಗವಾಗಿ ಚರಲಿಂಗವಾಗಿ ಪೂಜಿಸುತ್ತಾ ಬಂದಿದೆ. ಆದರೆ ಲಿಂಗವೆಂಬುದನ್ನು ಚೈತನ್ಯದ ಕುರುಹಾಗಿ ಸಮಷ್ಟಿಯ ಕುರುಹಾಗಿ ಇಷ್ಟಲಿಂಗವೆಂದು ಕರಸ್ಥಲಕ್ಕೆ ತಂದುಕೊಟ್ಟವರು ಬಸವಣ್ಣನವರು.  ಲಿಂಗವೇ ಬಸವ ಧರ್ಮದ ಬುನಾದಿ. ಸರ್ವಸಮಾನತೆಯ ಪಾತಳಿಯ ಮೇಲೆ ನಿಂತು ಎಲ್ಲ ಅಸಮಾನತೆಗಳನ್ನು ತೊಡೆದು ಹಾಕಿದ ಈ ಲಿಂಗದ ಪರಿಕಲ್ಪನೆ ವ್ಯಷ್ಟಿ ಹಾಗೂ ಸಮಷ್ಟಿಗಳ ವಿಕಾಸದ ಮಧ್ಯದ ಸೇತುವೆ ಆಗಿದೆ. ಅಂಗದಿಂದ ಲಿಂಗವಾಗುವ ಪಯಣವೇ ಬಯಲ ಪಯಣ, ಲಿಂಗ ಪಯಣ, ಸತ್ಯದ ಗಂತವ್ಯ. ವ್ಯಕ್ತಿಯ ಆತ್ಮೋನ್ನತಿಗಾಗಿ ತನ್ಮೂಲಕ ಜಗದ ಒಳಿತಿಗೆ ಹಾಕಿದ ನೈತಿಕ ಚೌಕಟ್ಟುಗಳೇ ಪಂಚಾಚಾರಗಳು. ಅದರಲ್ಲಿ ಲಿಂಗಾಚಾರವು ಸರ್ವಾಂಗೀಣ ಅಭಿವೃದ್ಧಿಯ…

0 Comments

ಶ್ರೀಮತಿ ರಾಜಶ್ರೀ ಥಳಂಗೆ, ಸೊಲ್ಲಾಪುರ.

 ಹನ್ನೆರಡನೇ ಶತಮಾನದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಕರ್ಮಭೂಮಿ ಸೊನ್ನಲಿಗೆ. ಬಹಳ ಪ್ರಾಚೀನ ಇತಿಹಾಸವಿರುವ ಈ ನಗರ ಯಾದವರ ಆಳ್ವಿಕೆಯವರೆಗೂ ಸೊನ್ನಲಿಗೆ, ಸೊನ್ನಲಾಪುರ, ಸಂದಲಾಪುರ ಎಂಬ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಹದಿಮೂರನೇ ಶತಮಾನದ ಅಂತ್ಯಭಾಗದಲ್ಲಿ ಸೊಲ್ಲಾಪುರ ಹೆಸರನ್ನು ಪಡೆಯಿತು ಎಂದು ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತಲೂ ಮುಂಚೆ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸೊಲ್ಲಾಪುರದಲ್ಲಿ 06.04.1930 ರಲ್ಲಿ ನಗರಸಭೆಯ ಮೇಲೆ ಪ್ರಪ್ರಥಮ ಬಾರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಸೊಲ್ಲಾಪುರಕ್ಕೆ ಸಲ್ಲಬೇಕು. ತದನಂತರ ಧ್ವಜ ಹಾರಿಸಿದ ನಾಲ್ಕೂ ಜನರನ್ನು ನೇಣಿಗೇರಿದ್ದು ಇತಿಹಾಸ. ಅದಕ್ಕೆಂದೆ ಸೊಲ್ಲಾಪುರಕ್ಕೆ ಹುತಾತ್ಮ ನಗರವೆಂದೂ ಕರೆಯಲಾಗುತ್ತದೆ.…

2 Comments

ಡಾ. ವಿಲಾಸವತಿ ಖೂಬಾ,ಕಲಬುರ್ಗಿ.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಶ್ರೀ ಬಸಪ್ಪ ದಾನಪ್ಪ ಜತ್ತಿಯವರ ಹೆಸರು ಅಜರಾಮರ. ಬ್ರಿಟೀಷ್‌ ಕಾಲದ ಜಮಖಂಡಿ ರಾಜ್ಯದ ಮತ್ತು ಈಗಿನ ಬಾಗಲಕೋಟೆ ಜಿಲ್ಲೆಯ ಸಾವಳಗಿಯವರು ಶ್ರೀ ಬಸಪ್ಪ ದಾನಪ್ಪ ಜತ್ತಿಯವರು. ಭಾರತದ ೫ನೇ ಉಪರಾಷ್ಟ್ರಪತಿಯಾಗಿ, ಪ್ರಭಾರಿ ರಾಷ್ಟ್ರಪತಿಯಾಗಿ ಬೆಳೆದು ನಿಂತದ್ದು ಅಭೂತಪೂರ್ವ ಸಾಧನೆ. ಸರಳಾತಿ ಸರಳ ಮತ್ತು ಶಿಸ್ತಿನ ಸಾರ್ವಜನಿಕ ಜೀವನ ನಡೆಸಿದ ಶ್ರೀ ಜತ್ತಿಯವರು ಸಾಮಾಜಿಕ ಸಮಾನತೆ, ಮಹಿಳೆಯರ ಸಬಲೀಕರಣಕ್ಕೆ ಶ್ರಮವಹಿಸಿದ ಪ್ರಭುದ್ದ ಮತ್ತು ಮುತ್ಸದ್ದಿ ರಾಜಕಾರಣಿಗಳು. 12 ನೇ ಶತಮಾನದ ಬಸವಾದಿ ಶರಣರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದ ಶ್ರೀ ಜತ್ತಿಯವರು ಶರಣರ ಉನ್ನತ…

0 Comments

“ವಚನಗಳು ವಿಜ್ಞಾನಿಗಳ ತತ್ವ ಪ್ರತಿಪಾದನೆಗಳ ಭವಿಷ್ಯವಾಣಿ”/ಗುರುಲಿಂಗಪ್ಪ ಸಜ್ಜನ,ಬೆಂಗಳೂರು

ಶರಣರ ವಚನಗಳು ವಿಜ್ಞಾನಿಗಳ ದ್ವಂದಗಳನ್ನು ನಿವಾರಿಸಬಹುದಾದ ಮಾರ್ಗದರ್ಶಕ ಸೂತ್ರಗಳು-6 ಅನಾದಿ ಮತ್ತು ಆದಿ - ಶಕ್ತಿಕ್ಷೇತ್ರಗಳು (Fields)  ಅಲ್ಲಮಪ್ರಭುದೇವರ ವಚನ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ' `ಇಲ್ಲ' ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು! ಕಡಕೋಳ ಮಡಿವಾಳಪ್ಪನವರ ವಚನಭಾಗ ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ,ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ,ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು,-------ಆ ಬಯಲಿಗೆ ಸಾವು ಇಲ್ಲವು.ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು.ಎಷ್ಟು ನಿಜ ತಿಳಿದರೇನೋ…

0 Comments

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲ / ಮೌನೇಶ್ವರರ ವಚನ / ಡಾ. ವೀರೇಶ ಬಡಿಗೇರ, ಹಂಪಿ.

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲಪರಿಪರಿಯ ವಸ್ತು ಒಡವೆ ದೇವರಾಭರಣಜಡಿದು ಮಾಡುವ ಗುಣಮಣಿ ಚಿಂತಾಮಣಿಧರೆಗಿಳಿದ ಚೆನ್ನಬಸವಣ್ಣ, ಬಸವಣ್ಣ.(ತಿಂತಿಣಿ ಮೌನೇಶ್ವರರ ವಚನಗಳು-2016 / ಡಾ. ವೀರೇಶ ಬಡಿಗೇರ / ಪುಟ ಸಂ. 7 / ವ. ಸಂ. 14) ಕಾಸಿ ನೋಡಲಿ ಬಲ್ಲ ಕೀಸಿ ನೋಡಲಿಬಲ್ಲ. ವಿಶ್ವಕರ್ಮರ ಕುಲಕಸುಬುಗಳು ಜ್ಞಾನ ಮತ್ತು ಕೌಶಲ್ಯದ ರೂಪಗಳು. ಲೋಹವನ್ನು ಕರಗಿಸುವ, ಅರಗಿಸುವ, ಒರೆದು ನೋಡುವ, ಬಡಿದು ಬಗ್ಗಿಸುವ ಮೂಲಕ ಹಲವು ಬಗೆಯ ವಸ್ತು ಒಡವೆ, ದೇವರ ಆಭರಣಗಳನ್ನು ಸೃಜಿಸುವ, ಆಕೃತಿಗೊಳಿಸುವ ಗುಣಮಣಿಗಳು. ಬೇಡಿದ್ದನ್ನು ಕೌಶಲ್ಯಯುತವಾಗಿ ಮಾಡಿ ಕೊಡುವ ಚಿಂತಾಮಣಿಗಳು. ಅಕ್ಕಸಾಲಿಯರ ಪ್ರತಿನಿಧಿಯಾದ ಮೌನಯ್ಯನವರು…

1 Comment