ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ವಚನಗಳ ಪ್ರಸ್ತುತತೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯ ಮತ್ತು ಬಸವ ತತ್ವ ಎನ್ನುವುದು ಒಂದು ಜೀವನ ಕ್ರಮ. ಕನ್ನಡದ ಮೇರುತನವನ್ನು ಬಿಂಬಿಸುವ ಅದರ ಪ್ರಭಾವ ಅಪಾರ. ಹೀಗಾಗಿ ಶರಣ ಸಂಸ್ಕೃತಿಯ ಬಯಲಲ್ಲಿ ಬಸವ ತತ್ವ ವಿಶಾಲವಾಗಿ ಬೆಳೆದಿದೆ. ತಾತ್ವಿಕವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ನಾವು ಪಡೆದುಕೊಂಡಿರುವ ಶರಣ ಧರ್ಮದ ಆಧ್ಯಾತ್ಮಿಕ ತತ್ವವು ಆರೋಗ್ಯಪೂರ್ಣ ಸಮಾಜವನ್ನು ನಮಗೆ ನೀಡಿದೆ. ಹೀಗಾಗಿ ಬಸವಾದಿ ಶರಣರ ಬೌದ್ಧಿಕ ಚಿಂತನೆಗಳ ಅನುಸಂಧಾನ ಮಾಡುವ. ಪುನರ್ ಮೌಲ್ಯೀಕರಣ ಮಾಡುವ ಅಗತ್ಯತೆ ಇಂದಿದೆ. ನಮ್ಮ ವರ್ತಮಾನ ಕಾಲದ ಒಳನೋಟ ಜನಪರವಾದ ಚಿಂತನೆಗಳು ತಾತ್ವಿಕವಾಗಿ ಹೇಗೆ ನೆಲೆಗೊಂಡಿವೆ ಎಂಬುದನ್ನು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿ…

0 Comments

ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳ 7 ನೇ ಪುಣ್ಯ ಸ್ಮರಣೋತ್ಸವದ ಭಕ್ತಿಯ ನಮನಗಳು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಓಂ ಶ್ರೀ ಗುರುಬಸವ ಲಿಂಗಾಯ ನಮಃ ಬಸವಜ್ಯೋತಿ, ಮಹಾಂತ ಜೋಳಿಗೆಯ ಶಿವ ಶಿಲ್ಪಿ, ಶಿವಾನುಭವ ಚರವರ್ಯ ಎಂದೇ ಖ್ಯಾತರಾದ ಪೂಜ್ಯ ಶ್ರೀ ಶ್ರೀ ಶ್ರೀ ಮಹಾಂತಶಿವಯೋಗಿಗಳು ಈ ನಾಡು ಕಂಡ ಮಹಾನ್ ಚೇತನರು. ಮಾನವೀಯತೆಯ ಮಾತೃ ಹೃದಯಿಗಳು. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಅಜ್ಞಾನ, ಮೂಡನಂಬಿಕೆಗಳನ್ನು ತೊಲಗಿಸಲು ಹಗಲಿರುಳು ಶ್ರಮಿಸಿದರು. ಮಹಾಂತ ಜೋಳಿಗೆಯನ್ನು ಹುಟ್ಟುಹಾಕಿ ಜನರಲ್ಲಿರತಕ್ಕಂತ ದುಶ್ಚಟ & ದುರ್ವ್ಯಸನಗಳನ್ನು ದೂರ ಮಾಡಿ ಸಾವಿರಾರು ಹೃದಯಗಳನ್ನು ಪರಿವರ್ತನೆ ಮಾಡಿ ಬದುಕಿಗೆ ಬೆಳಕು ತಂದರು. ಬಸವಣ್ಣ ಇವರ ಅಂಗವಾದ. ಮಡಿವಾಳ ಮಾಚಿದೇವರು ಇವರ ಮನಸ್ಸಾದರು.…

0 Comments

ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಮುಂಚೆ ಡ್ಯೆಪುಟಿ ಚೆನ್ನಬಸಪ್ಪನವರಿಂದ ಪ್ರವರ್ಧಮಾನಕ್ಕೆ ಬಂದ ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ | ಶ್ರೀ. ಮಹೇಶ ಚನ್ನಂಗಿ | ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ.

05.05.1915 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿರುವುದು ಜಗಜ್ಜಾಹೀರಾದ ಸಂಗತಿ. ಇದರ ಕೇಂದ್ರ ಕಚೇರಿ ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದೆ 18 ವರ್ಷ ಮೇಲ್ಪಟ್ಟ ಓದು ಬರಹ ಬರುವರೆಲ್ಲರೂ ಇದರ ಸದಸ್ಯರಾಗಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜರ ಒಡೆಯರು ಎಷ್ಟೊಂದು ಹಣಕಾಸಿನ ಸಹಾಯವನ್ನು ನೀಡಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಸಹಾಯವನ್ನು ಬೆಳಗಾವ ಜಿಲ್ಲೆಯ ಮಹಾದಾನಿ ರಾಜ ಲಖಮನಗೌಡ ಸರದೇಸಾಯಿ ಅವರು ನೀಡಿದ್ದಾರೆ. ಸಂಸ್ಥಾಪನೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ…

0 Comments

ವಚನಕಾರರ ಪರಿಕಲ್ಪನೆಯ ಶಿವಯೋಗ | ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಿವಮೊಗ್ಗ.

ಇಷ್ಟಲಿಂಗದ ಪರಿಕಲ್ಪನೆ: ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ;ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವಹಾದರಗಿತ್ತಿಯಂತೆ ಅವಂದಿರ ಭಕ್ತಿ.ಅಂತಪ್ಪ ಪಂಚಮಹಾಪಾತಕರಮುಖದತ್ತ ತೋರದಿರಾ ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-209/ವಚನ ಸಂಖ್ಯೆ-703) ಅಂಗದ ಮೇಲೆ ಧರಿಸಿದ ಲಿಂಗವನ್ನು ಹೊರತುಪಡಿಸಿ ಬೇರೆಡೆ ದೇವರನ್ನು ಹುಡುಕುವುದು, ಪೂಜಿಸುವುದು ಸಲ್ಲದು ಎಂದು ಈ ವಚನ ಹೇಳುತ್ತದೆ. ಇಂತಹ ನಡೆಗಳನ್ನು ಅತ್ಯಂತ ಆಕ್ರೋಶದಿಂದ ವಚನಕಾರರು ಖಂಡಿಸಿದ್ದಾರೆ. ಈ ವಚನಗಳನ್ನು ಗಮನಿಸಿದಾಗ ವಚನಕಾರರು ದೇವರ ವಿಚಾರದಲ್ಲಿ ಒಂದು ನಿರ್ದಿಷ್ಟತೆಯನ್ನು ಹೇರುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಅಭಿಪ್ರಾಯ ಒಪ್ಪುವಂತಹದ್ದಲ್ಲ, ಏಕೆಂದರೆ ವಚನಕಾರರು…

0 Comments

ಕಾಯಕ ನಿರತೆ ಕದಿರೆ ರೇಮವ್ವೆ | ಡಾ. ಸುಜಾತ ಅಕ್ಕಿ, ಮೈಸೂರು.

ಕನ್ನಡ ನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಸಮಾನತೆಯ ನೆಲೆಯಲ್ಲಿ ಅಕ್ಷರ ಕ್ರಾಂತಿ ಎಂಬ ಇಷ್ಟಲಿಂಗ ಸಾಹಿತ್ಯ ವಿಶಿಷ್ಟವಾಗಿ ಬೆಳೆಯಿತು. ಅಕ್ಷರ ಕಲಿಕೆಯು ಪ್ರತಿಯೊಬ್ಬರ ಹಕ್ಕು ಎಂದು ಸಾಬೀತು ಪಡಿಸಿದವರು ಶಿವಶರಣರು. ಬಸವಾದಿ ಪ್ರಮಥರು ನಡೆಯಲ್ಲಿ ನುಡಿಯಲ್ಲಿ ಒಂದಾದವರು. ದುಡಿತ ವರ್ಗದವರಿಗೆ ಸಮಾಜದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದವರು ಬಸವಣ್ಣನವರು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮಾನವೀಯ ಮೌಲ್ಯಗಳನ್ನು ಸಾರಿ ಸಾಕ್ಷೀಕರಿಸಿದವರು. ಲಿಂಗ ಬೇಧ, ವರ್ಗಬೇಧ ತಾರತಮ್ಯ, ಸಾಂಸ್ಥಿಕವಲ್ಲದ, ಪೌರೋಹಿತ್ಯವಿಲ್ಲದ ಸರ್ವ ಸಮಾನತೆಯ ಬಸವಣ್ಣನವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಮಹಿಳೆಯರೆಲ್ಲಾ ಅಕ್ಷರ ಕಲಿತು ವಚನಗಳನ್ನು ಬರೆದು ತಮ್ಮ ಅಭಿವ್ಯಕ್ತಿ…

0 Comments

ಚಂದಿಮರಸ ಮತ್ತು ಅವನ ಕುರಿತಾದ ಶಾಸನಗಳು | ಡಾ. ಸದಾನಂದ ಪಾಟೀಲ ಧಾರವಾಡ.

ಕರ್ನಾಟಕದ ಲಿಂಗವಂತ ಸಂಪ್ರದಾಯದ ನಾಲ್ವರು ಪ್ರಭಾವಶಾಲಿ ಅದ್ಭುತ ವ್ಯಕ್ತಿಗಳು ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ಬಸವಣ್ಣ ಮತ್ತು ಹರಿಹರ. ಇವರನ್ನು ಸಮಾನ ಮನಸ್ಕರೆಂದು ಗುರುತಿಸಿದರೆ ಇತಿಹಾಸ ಪುನರಾವರ್ತಿಸುತ್ತದೆ ಎಂಬ ಮಾತು ನಿಜವಾಗುತ್ತದೆ. 11 ನೇ ಶತಮಾನದ ಕೇಶಿರಾಜ, 6 ನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ದಂಡನಾಯಕನೂ ಕವಿಯೂ ಆಗಿದ್ದರೆ ಈ ಅವಧಿಯಲ್ಲಿ ಬರುವ ಕೆಂಭಾವಿ ಭೋಗಣ್ಣ ಹಂಡೆ ಚಂದಿಮರಸನ ಊರಲ್ಲಿ ಸಾಮಾನ್ಯ ಭಕ್ತನೂ ವಚನಕಾರನೂ ಆಗಿದ್ದ. ಇನ್ನು 12 ನೇ ಶತಮಾನದದ ಬಸವಣ್ಣ ಬಿಜ್ಜಳ ಅರಸನಲ್ಲಿ ದಂಡನಾಯಕನೂ ಭಂಡಾರಿಯೂ ವಚನಕಾರನೂ ಆಗಿದ್ದ. 13 ನೇ ಶತಮಾನದ ಹರಿಹರ ನರಸಿಂಹ…

0 Comments

ಡಾ. ಬಸವರಾಜ ಅನಗವಾಡಿಯವರು ನಿರ್ಮಿಸಿದ “ಬಸವ ಶರಣ ಕಲಾ ಸಂಗ್ರಹಾಲಯ” | ಕೂಡಲಸಂಗಮ, ಬಾಗಲಕೋಟೆ ಜಿಲ್ಲೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಮುಖ್ಯರಸ್ತೆಯಲ್ಲಿ “ಬಸವ ಶರಣ ಕಲಾ ಸಂಗ್ರಹಾಲಯ” ಎಂಬ ನಾಮಫಲಕವನ್ನು ನೋಡಿ ಒಳಗೆ ಕಾಲಿರಿಸಿದರೆ. ಅಲ್ಲಿ ಎಡಗಡೆ ಗೋಡೆಗೆ ಹಬ್ಬಿದ ಬಸವಣ್ಣ, ಅವನ ಅನುಯಾಯಿಗಳ ಶಿಲ್ಪಗಳನ್ನು ಕಾಣಬಹುದು. ಸೌರಮಂಡಲಕ್ಕೆ ಸೂರ್ಯನು ಕೇಂದ್ರವಾಗಿರುವಂತೆ, ಇಲ್ಲಿ ಬಸವಣ್ಣ ಸೂರ್ಯನೋಪಾದಿಯಲ್ಲಿ ಭೂಮಿಯ ಮೇಲೆ ಕುಳಿತು ತನ್ನ ಅರಿವಿನ ಕಿರಣಗಳನ್ನು ಸೂಸುತ್ತಾ, ವಚನಗಳನ್ನು ಬರೆಯುವುದರಲ್ಲಿ ನಿರತರಾಗಿದ್ದಾರೆ. ಗೋಡೆಗಂಟಿದ ಚಿತ್ರ-ಶಿಲ್ಪಗಳ ಮೇಲೆಲ್ಲ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಂದವಾದ ಬೆಳಕು. ಅಲ್ಲಿನ ಬೆಳಕಿನ ವ್ಯವಸ್ಥೆ ಚಿತ್ರ-ಶಿಲ್ಪಗಳು ಮಾತ್ರ ಸ್ಪಷ್ಟವಾಗಿ ಕಾಣುವಂತೆ Design ಮಾಡಲಾಗಿದೆ. ಇದು ನಮ್ಮನ್ನು 12…

0 Comments

ಡಾ. ಎಂ. ಎಂ. ಕಲಬುರ್ಗಿಯವರ ಸಂಶೋಧನಾ ಕ್ರಮಕ್ಕೊಂದು ಮಾದರಿ | ಡಾ. ಬಸವರಾಜ ಸಾದರ, ಬೆಂಗಳೂರು.

‘ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಪ್ರಕ್ರಿಯೆಯಾಗಿದೆ’ ಎಂಬುದು ಡಾ. ಎಂ. ಎಂ. ಕಲಬುರ್ಗಿ ಅವರು ಸದಾ ಹೇಳುತ್ತಿದ್ದ ಅರ್ಥಪೂರ್ಣ ಮಾತು. ಇಂಥ ಸಂಶೋಧನೆಯ ‘ಮಾರ್ಗ’ ಕ್ಕೆ ಅವರು ಬಳಸಿಕೊಳ್ಳುತ್ತಿದ್ದ ಆಕರ, ಪರಿಕರ, ಸಾಕ್ಷಿ, ಆಧಾರ ಮತ್ತು ಪೂರಕ ಮಾಹಿತಿಗಳು ಒಂದೇ ಎರಡೇ! ಇಂಥದ್ದೆಲ್ಲ ಎಷ್ಟೇ ಇದ್ದರೂ ಮೊದಲು ಅದನ್ನೆಲ್ಲ ಗುಂಪುಗೂಡಿಸಿ, ಹಾಗೆ ಗುಂಪುಗೂಡಿಸಿದ್ದನ್ನೆಲ್ಲ ತೂರಿ, ಕೇರಿ, ಜರಡಿ ಹಿಡಿದು ಪರೀಕ್ಷಿಸಿ, ಸತ್ಯದ ಒರೆಗಲ್ಲಿಗೆ ಹಚ್ಚಿ, ಆಂತರಿಕ ಮತ್ತು ಬಾಹ್ಯ ವಿದ್ಯಮಾನಗಳೊಂದಿಗೆ ತಾಳೆ ಹಾಕಿ, ಒಟ್ಟಾರೆ ಅದರಲ್ಲಿರಬಹುದಾದ ವಾಸ್ತವವನ್ನು ಹೆಕ್ಕಿ ತೆಗೆದು ಒಂದು ಪೂರ್ಣವಿರಾಮದ…

0 Comments

ಬದುಕಿದೆನು ಕಾಣಾ! | ನಾಡೋಜ ಡಾ. ಗೊ. ರು. ಚನ್ನಬಸಪ್ಪ, ಬೆಂಗಳೂರು.

ಆದಿಯುಗದಲ್ಲೊಬ್ಬಳು ಮಾಯಾಂಗನೆ,ಹಲವು ಬಣ್ಣದ ವಸ್ತ್ರವನುಟ್ಟುಕೊಂಡು,ಹೆಡಿಗೆ ತುಂಬ ದೇವರ ಹೊತ್ತುಕೊಂಡು,ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು.ಎಂದಡೆ ಆ ದೇವರನಾರೂ ಕೊಂಬವರಿಲ್ಲ.ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು,ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದಬದುಕಿದೆನು ಕಾಣಾ, ಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-206/ವಚನ ಸಂಖ್ಯೆ-498) ಹನ್ನೆರಡನೆಯ ಶತಮಾನದ ಮಡಿವಾಳ ಮಾಚಿತಂದೆವರು ಈ ನುಡಿ ಗೌರವದ ಕಾರಣ ಪುರುಷ ಬಸವಣ್ಣನವರ ಜಯಂತಿಯನ್ನು ಎಲ್ಲ ಕಡೆ ಆಚರಿಸುತ್ತಿದ್ದೇವೆ. ಈ ನೆಪದಲ್ಲಾದರೂ ಆ ಜೀವನ ಜ್ಯೋತಿಯ ಸ್ಮರಣೆಯನ್ನು ಜೀವಂತವಾಗಿ ಇಟ್ಟಿದ್ದೇವೆಂಬುದೇ ಒಂದು ಸಮಾಧಾನ. ಹನ್ನೆರಡನೆಯ ಶತಮಾನದಲ್ಲಿ ಸೃಷ್ಟಿಯಾದ ವಚನೋದ್ಯಾನದ ವಿಚಾರ ಫಲವೃಕ್ಷಗಳಲ್ಲಿ…

0 Comments

ಅನುಭವ ಮಂಟಪಕೆ ಅನುಭಾವಿ ಬಸವಣ್ಣ | ಡಾ. ಸುಜಾತಾ ಅಕ್ಕಿ, ಮೈಸೂರು.

ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬೆವರ ಹನಿಯ ದುಡಿತದ ಜನರಿಗೆ ಶ್ರಮದ ಮಹತ್ವ ಮತ್ತು ಘನತೆಯನ್ನು ಎತ್ತಿ ಹಿಡಿದವರು ಅಣ್ಣ ಬಸವಣ್ಣನವರು. ಶಿವಶರಣರೊಂದಿಗೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯವಿಲ್ಲದ, ವರ್ಗ ಬೇಧವಿಲ್ಲದ, ಜಾತಿರಹಿತ, ಪ್ರಾದೇಶಿಕತೆ ಅಸಮಾನತೆವಿಲ್ಲದ, ಭಾಷಾ ಬೇಧವಿಲ್ಲದೆ ಸರ್ವ ಸಮಾನತೆಯ ನೆಲೆಯಲ್ಲಿ ಅಕ್ಷರ ಕಲಿಸಿ ಆತ್ಮಸ್ಥೈರ್ಯ ತುಂಬಿದವರು. ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿ ಗೌರವಿಸಿದರು. ಶ್ರಮಿಕರಿಗೆ ಮನ ಮುಟ್ಟುವಂತೆ ಮಾತನಾಡಿ ಅವರ ಮನೆಯಲ್ಲಿ ಅಂಬಲಿಯನ್ನು ಕುಡಿದು ಮೈದಡವಿದ ಮಹಾನ್ ವ್ಯಕ್ತಿ ವಿಶ್ವಗುರು ಬಸವಣ್ಣನವರು. ಜನಪದರೇ ವಚನಕಾರರು, ಬಹುತೇಕ ವಚನಕಾರರೇ ಜನಪದರು. ಸೃಜನಶೀಲ ಜನಪದ ಮನಸ್ಸುಗಳು ವಚನಕಾರರ…

0 Comments