ರವಿ ಹಂಜ್ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ. ಭಾಗ-01: ಮುನ್ನುಡಿ
ನಾನು ಕಾಶ್ಮೀರದ ಸನ್ಯಾಸಿನಿ ಲಲ್ಲೇಶ್ವರಿಯವರ ಕುರಿತು ಅಧ್ಯಯನ ಮಾಡುವಾಗ ಕಾಶ್ಮೀರದ ಆಗಮಿಕ ಶೈವರ ಕುರಿತು ಕೆಲವು ಮಾಹಿತಿಗಳು ಲಭಿಸಿದವು. ಅವರಲ್ಲಿ ಕೆಲವು ಆಗಮಿಕ ಶೈವರೆಂಬ ಬ್ರಾಹ್ಮಣರು ಮಧ್ಯಪ್ರದೇಶದ ಮೂಲಕ ಮೊದಲು ತಮಿಳುನಾಡಿಗೆ ವಲಸೆ ಬರುತ್ತಾರೆ. ತಮಿಳುನಾಡಿನ ಅರವತ್ತಮೂರು ಪುರಾತನರನ್ನು (ಅಂದರೆ ತ್ರಿಷಷ್ಟಿ ಪುರಾತನರನ್ನು) ಸ್ಥಳೀಯ ಶೈವ ಪಂಥವನ್ನು ಶುದ್ಧ ಶೈವಪಂಥವನ್ನಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಅಂದರೆ ಸಾರಾ ಸಗಟಾಗಿ ಆಪೋಷಣೆ ಮಾಡುತ್ತಾರೆ. ಅಲ್ಲಿನ ರಾಜರ ಆಡಳಿತದ ಚುಕ್ಕಾಣಿ ಬೇರೆಯವರ ಕೈ ವಶವಾದ ನಂತರ ಹೆದರಿಕೊಂಡು ಅಲ್ಲಿಂದ ಆಂಧ್ರಪ್ರದೇಶಕ್ಕೆ ಪಲಾಯನ ಮಾಡುತ್ತಾರೆ. ಆಂಧ್ರದಲ್ಲಿ “ಆರಾಧ್ಯ” ಎಂದು ತಮ್ಮನ್ನು ತಾವು…