ಶರಣರ ಸಮನ್ವಯ ಸಂಸ್ಕೃತಿ / ಡಾ. ಬಸವರಾಜ ಕಡ್ಡಿ, ಜಮಖಂಡಿ.
ಸಮನ್ವಯತೆ ಎಂದರೆ ಒಂದಾಗಿಸಿಕೊಳ್ಳುವಿಕೆ. ಬದುಕು-ಬರಹ ಒಂದೆಯಾಗಿದ್ದರೆ ಬರಹಕ್ಕೆ ಬೆಲೆ ಬರುತ್ತದೆ. ಬದುಕಿದಂತೆ ಬರೆದ ಬರಹ ಬಹುಕಾಲ ಬದುಕುತ್ತದೆ. ಅದಕ್ಕಾಗಿ ಶರಣರು ತಾವು ಬದುಕಿದಂತೆ ಬರೆದ ವಚನಗಳು ಇನ್ನೂ ನಮ್ಮ ಮಧ್ಯೆದಲ್ಲಿವೆ. ಯಾವಾಗಲೂ ಇರುತ್ತವೆ. ವೈಜ್ಞಾನಿಕ, ವೈಚಾರಿಕ ಆಧಾರವಿಲ್ಲದ ಪವಾಡ, ಪುರಾಣಗಳಂತಹ ಸಾಹಿತ್ಯ ಪರೀಕ್ಷೆಗೊಳಪಡುತ್ತ ಹಂತ ಹಂತವಾಗಿ ಅಳಿಯುತ್ತದೆ. ಶರಣರದು ಜ್ಞಾನ-ಕ್ರಿಯೆ, ನಡೆ-ನುಡಿ, ಲೌಕಿಕ-ಪಾರಮಾರ್ಥ, ಅಂತರಂಗಕೃಷಿ-ಬಹಿರಂಗಕೃಷಿ, ಆತ್ಮಕಲ್ಯಾಣ-ಸಮಾಜಕಲ್ಯಾಣಗಳನ್ನು ಒಂದಾಗಿಸಿಕೊಂಡ ಸಮನ್ವಯಸಂಸ್ಕೃತಿಯಾಗಿದೆ. ಜ್ಞಾನ-ಕ್ರಿಯೆಗಳ ಸಮನ್ವಯತೆ: ಶರಣರು ಕೇವಲ ಅರಿವು (ಜ್ಞಾನ) ಬೆಳೆಸಿಕೊಂಡವರಲ್ಲ. ಅರಿವು, ಆಚಾರ ಎರಡನ್ನೂ ಸಮೀಕರಿಸಿಕೊಂಡವರು. ಆಚಾರದ ಮೂಲಕ ಅರಿವಿಗೆ ಮನ್ನಣೆ ನೀಡಿದವರು. ಜ್ಞಾನವೆಂದರೆ ತಿಳಿಯುವುದು. ಕ್ರಿಯೆಯೆಂದರೆ ತಿಳಿದಂತೆ…