ಅರಮನೆ-ಗುರುಮನೆ ಹಿರಿದಾದ ಕಾರಣ, ಹಾದರ ಸಲ್ಲ/ ಡಾ. ಬಸವರಾಜ ಸಾದರ.
ಸಮಾನತೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಧಾನ ತತ್ವ ಮತ್ತು ಲಕ್ಷಣ. ಇದನ್ನು 900 ವರ್ಷಗಳ ಹಿಂದೆಯೇ ತಮ್ಮ ವೈಯಕ್ತಿಕ ಮತ್ತು ಸಾಮುದಾಯಿಕ ಬದುಕುಗಳಲ್ಲಿ ಪ್ರಾಯೋಗಿಕವಾಗಿ ಆಚರಿಸಿ, ಅದರ ಫಲಿತಗಳನ್ನು ವ್ಯವಸ್ಥೆಯ ಸುಸ್ಥಿತಿಗಾಗಿ ಧಾರೆಯೆರೆದವರು ಕನ್ನಡ ಶರಣರು. ಪುರಾತನ ಭಾರತೀಯ ಪರಂಪರೆಯ ಕ್ರೌರ್ಯದ ಪರಮಾಧಿಯೆಂಬಂತೆಯೇ ಹರಿದುಕೊಂಡು ಬಂದಿದ್ದ ಶೋಷಣೆಯನ್ನು ಪ್ರತಿಭಟಿಸಿ, ಸ್ಥಗಿತ ವ್ಯವಸ್ಥೆಯನ್ನು ಚಲನಶೀಲಗೊಳಿಸಿ, ವರ್ಗ, ವರ್ಣ, ಲಿಂಗಭೇದರಹಿತ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದ್ದ ಅವರು, ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆಯ ಕ್ರಿಯಾಪರಿಕಲ್ಪನೆಯನ್ನು ಆಚರಣೆಗಳ ಮೂಲಕ ಜಾರಿಗೆ ತಂದರು. ಇದರ ಫಲಿತವೆಂಬಂತೆ ಶೂದ್ರವರ್ಗದ ಜನ ಹಾಗೂ ಮಹಿಳೆಯರು ಸಮಾಜದ…