ಪಂಚಭೂತಗಳಲ್ಲಿ ಬಸವನೆಂಬ ದೇವರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದುಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲುಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ…