ಗಡಿಗೆಯ ತುಪ್ಪ ಹೆಡಿಗೆಯ ಮೃಷ್ಟಾನ್ನ | ಶರಣೆ ಅಕ್ಕಮ್ಮನವರ ವಚನ ವಿಶ್ಲೇಷಣೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಶರಣೆ ಅಕ್ಕಮ್ಮನವರು ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದವರೆಂಬುದು ವಿದ್ವಾಂಸರ ಒಮ್ಮತದ ಅಭಿಪ್ರಾಯವಾಗಿದೆ. ಇದೇ ಊರಿನ ಶರಣ ಏಲೇರಿ ಕೇತಯ್ಯನವರ ಪ್ರಭಾವ ಅಕ್ಕಮ್ಮನವರ ಮೇಲೆ ಆಗಿರಬಹುದು. “ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ” ಅಂಕಿತದಿಂದ 154 ವಚನಗಳು ಪ್ರಕಟವಾಗಿವೆ. ಅಕ್ಕಮ್ಮನ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಅಕ್ಕಮ್ಮನವರ ವಚನಗ ಳನ್ನು ಓದಿದರೆ ಕೃಷಿ ಕಾಯಕದ ಶರಣೆ ಆಗಿರಬೇಕೆಂದು ಊಹಿಸಬಹುದು. ಒಡೆಯರ ಕಟ್ಟಳೆಯ ಮಾಡಿಕೊಂಡು ಆಡುವ ತನಕಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೇ?ಒಡೆಯರಂತೆ, ಮನೆಗೊಡೆಯನಂತೆ,ಗಡಿ ತಡಿಯಲ್ಲಿ ಕಾಯಲುಂಟೆ!ಅದು ತುಡುಗುಣಿಕಾರರ ನೇಮ. ಒಡೆಯರತ್ತ ನಾವಿತ್ತ.ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನ,ತುಡುಗುಣಿಯಂತೆ ತಿಂಬವಂಗೆಮತ್ತೊಡೆಯರ ಕಟ್ಟಳೆಯೆ?ಇಂತೀ ಕೆಡುಕರ…





Total views : 67055