ಮಹಾ ಪ್ರಸಾದಿ ಬಿಬ್ಬಿ ಬಾಚಯ್ಯ ಶರಣರ ವಚನ ನಿರ್ವಚನ | ಶ್ರೀಮತಿ ಮೈತ್ರಾ ಎಂ. ಕುಣಚಿ, ಕಲಬುರಗಿ.
ಆಕಾಶದುರಿ, ನೆಲದ ಮಡಕೆಯಲ್ಲಿಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು.ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು,ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಗಬೇಕೆಂದು.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-135/ವಚನ ಸಂಖ್ಯೆ-323) ಅನುಭವಮಂಟಪದ ಅನುಭಾವಿಗಳು ಬಿಬ್ಬಿ ಬಾಚಯ್ಯ ಶರಣರು. ಮೊದಲು ಬ್ರಾಹ್ಮಣರಾಗಿದ್ದು ತದನಂತರ ಕಲ್ಯಾಣಕ್ಕೆ ಬಂದು ಶರಣ ಧರ್ಮ ಸ್ವೀಕಾರ ಮಾಡಿ ವಚನಕಾರರಾದವರು. ಇವರು ಮೂಲತಃ ರಾಯಚೂರು ಹತ್ತಿರದ ಗೊಬ್ಬೂರು ಗ್ರಾಮದವರು ಎಂದು ಒಮ್ಮತದ ಅಭಿಪ್ರಾಯವಿದೆ. ಇಲ್ಲಿರುವ ಅರ್ಪಣಾ ಕಟ್ಟೆ ಅದು ಈ ಶರಣರ ಸಮಾಧಿ ಎಂದು ಗುರುತಿಸುತ್ತಾರೆ. ಇವರ ತಂದೆಯ ಹೆಸರು ಭಾಸ್ಕರ, ಇವರು ತಮ್ಮ ಹುಟ್ಟೂರು…






Total views : 62562