ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ “ತನುವ ತೋಂಟವ ಮಾಡಿ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ.ಒಡೆದು ಸಂಸಾರದ ಹೇಂಟೆಯ,ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ.ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ,ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು ಹಸಗೆಡಿಸಿಹರೆಂದುಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,ಆವಾಗಳೂ ಈ ತೋಂಟದಲಿ ಜಾಗರವಿದ್ದುಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1217) ಅಲ್ಲಮ ಪ್ರಭುಗಳು ಸಾಧನೆಯನ್ನ ನಿರೂಪಿಸಿರುವ ಈ ವಚನ ಸಾಧಕ ವೃಂದಕ್ಕೆನೇ ಆದರ್ಶಪ್ರಾಯವಾಗಿರುವ ದೃವ ನಕ್ಷತ್ರದಂತಿದೆ. ಈ ವಚನವನ್ನ ನೋಡಿದ ಕೂಡಲೆ ಕೃಷಿಗೆ ಸಂಬಂಧಿಸಿದ ವಚನ ಅನಿಸಿದರೂ ಕೂಡ ದೇಹವನ್ನೆ ತೋಟವನ್ನಾಗಿ ಮಾಡಿಕೊಂಡು ಹೇಗೆ…




Total views : 67056