ವ್ಯೋಮಕಾಯ ಅಲ್ಲಮ ಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,ಮೇದು ಬಂದೆನೆಂದಡೆ,ಇದ ಕಂಡು ಬೆರಗಾದೆ.ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದರೆ,ಇದ ಕಂಡು ಬೆರಗಾದೆ.ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,ಇದ ಕಂಡು ಬೆರಗಾದೆ, ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27) ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ…

0 Comments

ಶರಣ ಮೋಳಿಗೆ ಮಾರಯ್ಯನವರ ವಚನ – ನಿರ್ವಚನ | ಶ್ರೀ. ಗುರುಪ್ರಸಾದ ಕುಚ್ಚಂಗಿ, ಬೆಂಗಳೂರು.

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504) 770 ಅಮರಗಣಂಗಳಲ್ಲಿ ಒಬ್ಬರು ಮೋಳಿಗೆ ಮಾರಯ್ಯ ಶರಣರು. ಮೂಲತ ಇವರು ಕಾಶ್ಮೀರದ ಮಾಂಡವ್ಯಪುರದ ಅರಸರು. ಬಸವಣ್ಣನವರ ಕೀರ್ತಿವಾರ್ತೆ ಕೇಳಿ ಕಲ್ಯಾಣಕ್ಕೆ ಬಂದು ಆ ಕಾಯಕ ನೆಲದಲ್ಲಿ ಮೋಳಿಗೆ (ಕಟ್ಟಿಗೆ) ಕಾಯಕಗೈದು ಕಲ್ಯಾಣದಲ್ಲಿಯೆ ಲಿಂಗೈಕ್ಯರಾದರು. ಇವರ ಮಡದಿ ಮಹಾದೇವಿ, ಮೋಳಿಗೆ ಮಹಾದೇವಿಯೆಂದೆ ಪ್ರಸಿದ್ಧರಾಗಿರುವರು.…

0 Comments

ಶರಣ ಅಂಬಿಗರ ಚೌಡಯ್ಯನವರ ವಚನದ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಹನ್ನೆರಡನೆಯ ಶತಮಾನದ ಅಂದಿನ ವ್ಯವಸ್ಥೆಯ ಭಾಗವಾಗಿದ್ದ ತೋರಿಕೆಯ ಭ್ರಮಾಧೀನ ಆಚರಣೆಗಳನ್ನು ಶರಣರು ಅಲ್ಲಗಳಿದಿದ್ದಾರೆ. ಅದಕ್ಕಾಗಿ ಉಪಮೆಗಳನ್ನು, ನಿದರ್ಶನಗಳನ್ನು ಬಳಸಿ ಸಾಮಾನ್ಯರಿಗೆ ತಿಳಿಯುವಂತೆ ಸರಳವಾಗಿ, ಸಹಜವಾಗಿ ವಚನಗಳ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಮಾಯೆಯಲ್ಲಿ ಮುಳುಗಿದ ಮನುಷ್ಯನ ಹುಡುಕಾಟ ಯಾವತ್ತೂ ಹೊರಗಿನ ವಸ್ತು, ವಿಷಯಗಳ ಮೇಲೆಯೇ ಇದೆ. “ತಮ್ಮೊಳಿದ್ದ ಮಹಾಘನವ ಅರಿಯರು” ಎಂಬ ಶರಣ ನುಡಿಯು ಮತ್ತೆ ಮತ್ತೆ ಇದೇ ವಿಷಯದತ್ತ…

0 Comments

ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಈ ವಚನದ ಮುಖೇನ ಶರಣರು ತಮ್ಮ ದೇಹದಲ್ಲಿ ಅಡಗಿರುವ ಲಿಂಗವನ್ನು ಸಾಕ್ಷಾತ್ಕರಿಸುವ ನಿಖರವಾದ ಪರಿಯ ಬಗ್ಗೆ ವಿವರಿಸಿದ್ದಾರೆ. ನಮ್ಮ ದೇಹದಲ್ಲಿರುವ ಲಿಂಗ ಅಡವಿಯಲ್ಲಿ ಬೆಳೆಯುವ ಕಂಟಿ ಗಿಡವಲ್ಲ. ದಟ್ಟಾರಣ್ಯದಲ್ಲಿದ್ದಾರೂ ತನ್ನ ಕಾಯಿಗಳು ಬೇಸಿಗೆಯ ಬಿಸಿಲಿಗೆ ಸಿಡಿಯುವ ಕಾರಣದಿಂದಾಗಿ,  ಕಂಟಿ ಗಿಡ ತನ್ನ ಇರುವನ್ನು ಸುಲಭವಾಗಿ, ತನ್ನನ್ನು ಹುಡುಕುವ ವ್ಯಕ್ತಿಗೆ, ಬಿಟ್ಟು ಕೊಡುತ್ತದೆ. ಹಾಗೆಯೇ ನಮ್ಮೊಳಗಿನ ಲಿಂಗ, ಮಡು (ಸಣ್ಣಕೆರೆ…

0 Comments

ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಕಾನನದ ಅತ್ಯಂತ ಸುಂದರ ಪ್ರಕೃತಿಯಲ್ಲಿ, ನೈಸರ್ಗಿಕ ಸೊಬಗಿನ ತಾಣದಲ್ಲಿ ಅತ್ಯುತ್ತಮ ಸಂಪತ್ತು ಇರುವುದೇ ಹೊರತು ಸಿಡಿದು ಬೀಳುವ ಮುಳ್ಳಿನ ಕಂಟಿಯಲ್ಲ. ಭೌತಿಕವಾಗಿ ಕಾಣುವ ವಸ್ತು ತಾನಲ್ಲ. ಅದೇ ರೀತಿ ಸಂಸಾರವೆಂಬ ಮಡುವಿನೊಳಗೆ ಸಿಗುವುದು ಮೋಹವೆಂಬ ಮೀನಲ್ಲ, ಮುಕ್ತಿ ಮಾರ್ಗವನ್ನರಸಲು ತಪಸ್ಸು ಮಾಡುವೆನು ಎಂದು ಕಷಾಯ ವಸ್ತ್ರಗಳನ್ನು ಧರಿಸುವ ಢಾಂಬಿಕರ ತರಹ ನನಗೆ ವೇಳೆ ಇಲ್ಲ. ನಿಜವಾದ ವ್ಯಕ್ತಿಯನ್ನು ಪರೀಕ್ಷಿಸಲು…

0 Comments

ನುಲಿಯ ಚಂದಯ್ಯನವರ ವಚನ – ನಿರ್ವಚನ | ಶ್ರೀಮತಿ. ಸುವರ್ಣ ಗೋಲಗೇರಿ, ರಾಯಚೂರು.

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.ಗುರುವಾದಡೂ ಚರಸೇವೆಯ ಮಾಡಬೇಕು.ಲಿಂಗವಾದಡೂ ಚರಸೇವೆಯ ಮಾಡಬೇಕು.ಜಂಗಮವಾದಡೂ ಚರಸೇವೆಯ ಮಾಡಬೇಕುಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು. ಅನುಭವ ಮಂಟಪದ ಅನುಭಾವಿಯಾಗಿ, ಕಾಯಕ ತತ್ವದೊಳಗೆ ನಿಷ್ಠೆಯಿಟ್ಟು, ಕಲ್ಯಾಣ ಕ್ರಾಂತಿಯ ನಂತರ ಅಕ್ಕನಾಗಮ್ಮ, ಚೆನ್ನಬಸವಣ್ಣ ಮುಂತಾದ ಶರಣರೊಂದಿಗೆ ಉಳುವಿಯ ಕಡೆಗೆ ಹೊರಟ ಶರಣರಿವರು. ಜನ್ಮಸ್ಥಳ ವಿಜಾಪುರ ಜಿಲ್ಲೆಯ ಶಿವಣಗಿ ಗ್ರಾಮ. ಕಾಯಕ ನೆಲೆ ಬಸವಕಲ್ಯಾಣ. ಲಿಂಗೈಕ್ಯಗೊಂಡ ಸ್ಥಳ ಚಿತ್ರದುರ್ಗ ಜಿಲ್ಲೆಯ ಆರ್. ನುಲೇನೂರು. ಕಾಯಕ ಮೆದೆಹುಲ್ಲು, ಪುಂಡಿಕಟ್ಟಿಗೆಯಿಂದ ಹಗ್ಗ ಹೊಸೆಯುವುದು. ಇವರ ವಚನಾಂಕಿತ “ಚಂದೇಶ್ವರಲಿಂಗ”. ಇವರು ರಚಿಸಿದ ಒಟ್ಟು 48 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ನಿರ್ವಚನ:ಕಾಯಕ ತತ್ವದ ಪರಾಕಾಷ್ಟತೆ…

1 Comment

ಆಯ್ದಕ್ಕಿ ಮಾರಯ್ಯನವರ ವಚನ –ನಿರ್ವಚನ | ಶ್ರೀಮತಿ. ಅರ್ಚನಾ ಮುತ್ತಗಿ, ಕಲಬುರಗಿ.

ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿಸತ್ಯದ ಕಾಯಕ ಉಂಟೆ?ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದುಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1190) ಕಾಯಕ ತತ್ವಕ್ಕೆ ಹೆಸರು ವಾಸಿಯಾಗಿರುವ ಆಯ್ದಕ್ಕಿ ಮಾರಯ್ಯ ಶರಣರು 12 ನೆಯ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. “ಅಮರೇಶ್ವರಲಿಂಗವಾಡೂ ಕಾಯಕದೊಳು” ಎಂದು ದೇವರಿಗೂ ಕಾಯಕ ತತ್ವದ ಮಹತ್ವವನ್ನು ತಿಳಿಸಿದ ಶರಣ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರು. ಇಡೀ ಜಗತ್ತಿಗೆ “ಕಾಯಕವೇ ಕೈಲಾಸ” ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು. ಈಗಿನ ರಾಯಚೂರು…

0 Comments

ಶರಣ ಢಕ್ಕೆಯ ಬೊಮ್ಮಣ್ಣನವರ ವಚನ – ನಿರ್ವಚನ | ಶ್ರೀಮತಿ. ಅರುಣಾ ಬಾವಿ, ಕಲಬುರಗಿ.

ಸತಿಯ ಗುಣವ ಪತಿ ನೋಡಬೇಕಲ್ಲದೆಪತಿಯ ಗುಣವ ಸತಿ ನೋಡಬಹುದೆ ಎಂಬರು.ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆಭಂಗವಾರಿಗೆಂಬುದ ತಿಳಿದಲ್ಲಿಯೆಕಾಲಾಂತಕ ಬ್ಥೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-331/ವಚನ ಸಂಖ್ಯೆ-976) ಶರಣ ಢಕ್ಕೆಯ ಬೊಮ್ಮಣ್ಣನವರು ಅನುಭವಮಂಟಪದ ಶರಣರೊಳಗೆ ಒಬ್ಬರಾಗಿರುವರು. ಇವರ ಸ್ವ-ವಿವರಗಳಾವವು ಲಭ್ಯವಿಲ್ಲ, ಇವರ ಕಾಯಕ ಜನಪದ ವೇಷಭೂಷಣಗಳನ್ನು ಧರಿಸಿ ಧರ್ಮ, ತತ್ವ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವದರೊಂದಿಗೆ ಜನರಿಗೆ ಅರಿವಿನ ದಾಸೋಹವನ್ನು ಮಾಡಿ ಜ್ಞಾನಿಗಳನ್ನಾಗಿಸುವದಾಗಿತ್ತು. “ಕಾಲಾಂತಕ ಭೀಮೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ ಇವರ 90…

0 Comments

ಡೋಹರ ಕಕ್ಕಯ್ಯನವರ ವಚನ – ನಿರ್ವಚನ | ಶ್ರೀಮತಿ. ಸಂಗೀತಾ ಕೊಡ್ಲಿ, ಕಲಬುರಗಿ.

ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದುಮುಟ್ಟಿ ಪಾವನವ ಮಾಡಿಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!ಆ ಲಿಂಗ ಬಂದು ಸೋಂಕಲೊಡನೆಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದಸಂಗನ ಬಸವಣ್ಣನ ಕರುಣದಿಂದಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!ಅಭಿನವ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-336/ವಚನ ಸಂಖ್ಯೆ-987) ಡೋಹರ ಕಕ್ಕಯ್ಯ ಶರಣರು ಅನುಭವಮಂಟಪದ ಅನುಭಾವಿಗಳು. ಅಮರಗಣಂಗಳಲ್ಲಿ ಹಿರಿಯರಾಗಿರುವ ಇವರು ಮೂಲತಃ ಮಧ್ಯಪ್ರದೇಶದ ಮಾಳವ್ಯ ಪ್ರದೇಶದಿಂದ ಕಲ್ಯಾಣಕ್ಕೆ ಬಂದವರು. ಕಲ್ಯಾಣದಲ್ಲಿ ತೊಗಲು ಹದ ಮಾಡುವ ಕಾಯಕ…

1 Comment

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ-ನಿರ್ವಚನ | ಪ್ರೊ. ಶ್ರೀದೇವಿ ಶೀಲವಂತ, ಕಲಬುರಗಿ.

ಅಡ್ಡಬಿದ್ದು ಶಿಷ್ಯನ ಮಾಡಿಕೊಂಬದಡ್ಡ ಪ್ರಾಣಿಗಳನೇನೆಂಬೆನಯ್ಯ.ಏನೇನೂ ಅರಿಯದ ಎಡ್ಡ ಮಾನವರಿಗೆಉಪದೇಶವ ಮಾಡುವಗೊಡ್ಡ ಮಾನವನ ಮುಖವ ತೋರದಿರಯ್ಯಾ.ಅದೇನು ಕಾರಣವೆಂದಡೆ:ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು,ಅಷ್ಟಮದಂಗಳೆಂಬಖೊಟ್ಟಿ ಗುಣಂಗಳ ಬಿಡಿಸಲಿಲ್ಲ.ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿಮುಕ್ತಿಪಥವನರುಹಲಿಲ್ಲ.ಮಹಾಶೂನ್ಯ ನಿರಾಳ ನಿರಂಜನಲಿಂಗವಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆಪ್ರಮಥರು ಮೆಚ್ಚುವರೆ?ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.ಅವರು ಇಹಲೋಕ ಪರಲೋಕಕ್ಕೆಹೊರಗೆಂದಾತನಂಬಿಗರ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇಯ ಶತಮಾನದ ಅನುಭವ ಮಂಟಪದಲ್ಲಿದ್ದ ಮಹಾಶರಣರು ಅಂಬಿಗರ ಚೌಡಯ್ಯನವರು. ಹಾವೇರಿ ಜಿಲ್ಲೆಯ ರಾಣಬೆನ್ನೂರು ತಾಲೂಕಿನ ಚೌಡದಾನಪುರ ಗ್ರಾಮದಲ್ಲಿ ಜನಿಸಿದ ಈ ಶರಣರ ತಂದೆಯವರ ಹೆಸರು…

0 Comments