ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರ ವಚನ – ನಿರ್ವಚನ | ಶ್ರೀಮತಿ. ಲಲಿತಾ ಇಬ್ರಾಹಿಂಪೂರ, ಕಲಬುರಗಿ.
ಆಕಾಶದಲ್ಲಾಡುವ ಪಟಕ್ಕಾದಡೆಯೂಮೂಲಸೂತ್ರವಿರಬೇಕು.ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.ಭೂಮಿಯಿಲ್ಲದೆ ಬಂಡಿ ನಡೆವುದೆ?ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ?(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-419/ವಚನ ಸಂಖ್ಯೆ-990) ಷಟ್‌ಸ್ಥಲ ಚಕ್ರವರ್ತಿಯೆಂದೇ ಪ್ರಸಿದ್ಧರಾಗಿರುವ ಮಹಾಜ್ಞಾನಿ ಚೆನ್ನಬಸವಣ್ಣನವರ ವಚನವಿದು. ಇವರು ಶರಣೆ ಅಕ್ಕನಾಗಮ್ಮನವರ ಮತ್ತು ಶರಣ ಶಿವಸ್ವಾಮಿಯವರ ಸುಪುತ್ರರು. ಬಸವಣ್ನನವರ ಸೋದರಳಿಯ. ಕೂಡಲಸಂಗಮದಲ್ಲಿ ಜನಿಸಿದ ಇವರು ಕಲ್ಯಾಣದಲ್ಲಿ ಅನುಭವ ಮಂಟಪದ ಜವಾಬ್ದಾರಿಯನ್ನು ಹೊತ್ತಿದ್ದವರು. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯದ ಉಳುವಿಗಾಗಿ ಹೋರಾಟ ಮಾಡಿದವರು. ಉಳುವಿಯಲ್ಲಿ ಲೀಂಗೈಕ್ಯರಾದವರು. ಕೂಡಲ ಚೆನ್ನಸಂಗಮದೇವಾ ಎನ್ನುವ ವಚನಾಂಕಿತದಿಂದ ವಚನಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೆ 1792 ವಚನಗಳು ಲಭ್ಯವಾಗಿವೆ. ನಿರ್ವಚನ:ಅಲ್ಲಮ ಪ್ರಭುಗಳು…






Total views : 51199